ಡಾ.ವೈ.ಎಂ.ಯಾಕೊಳ್ಳಿ ಅವರು ಬರೆದ ಕವಿತೆ ‘ಗುರಿಯಿಲ್ಲದ ದಾರಿಯಲ್ಲಿ’

ನಡೆಯುತ್ತಿದ್ದೇನೆ ಗುರಿ
ಇರದ ದಾರಿಯಲ್ಲಿ
ಈಗ ನಡೆಯೂ ಬೇಸರವಾಗಿದೆ
ಸೋಲು ನಡೆವ ಕಾಲಿಗೆ ಹೊರತು
ಹೋಗುವ ದಾರಿಗಲ್ಲ

ಅವರು ತಮ್ಮ ಗೆಲವಿನ
ಸಂಭ್ರಮದಲಿದ್ದಾರೆ
ನನಗೆ ಗೆಲುವೆ ಬೇಡ ವಾಗಿದೆ
ಬಿಟ್ಟು ಹೋದ ಮನಗಳು
ಕಿತ್ತು ತಿನ್ಜುವ ನೆನಪುಗಳು
ಅತ್ತಿಂದಿತ್ತ ಇತ್ತೊಂದತ್ತ
ಸುಳಿವ ಪ್ರೇತಾತ್ಮ
ನಿತ್ಯ ಅಳುವದನು ಯಾವ
ಒಂಟಿಮನಕೂ
ಯಾರೂ ಹೇಳಿಕೊಡಬೇಕಿಲ್ಲ

ನಡೆದಿತ್ತು ಇಲ್ಲಿಯೂ ನಿತ್ಯ ಜಾತ್ರೆ
ಗುಡಿಕಟ್ಟಿ ಹೂಹಾರ ದೇವಳದ ಕಳಸಕ್ಕೆ
ದೇವರೇ ಹೋದ ಮೇಲೆ
ಹೂವಾಡಿಗನಿಗೇನುನಕೆಲಸ
ಹೂ ಬಿಟ್ಟಗಿಡಗಳೀಗ ನೀರಿಲ್ಲದನಾಥ

ಸತ್ತು ಹೋದ ಮಾತಿಗೆ ಅತ್ತರೇನು ಹೇಳಿ
ಕಿತ್ತು ಹೋದ ಉಂಗುಟವ ಹೊಲಿದು
ಅದೆಷ್ಟೊಂದು ಸಲ ಹಾಕುತ್ತಿ
ಅದೆಷ್ಟೊ ಸಲ ಓದಿರುವ ಮಾತುಗಳು

ಇನ್ನೊಂದು ತುಸು ದೂರ ನಡೆದಿದ್ದರೆ
ದೊರಕಬಹುದಿತ್ತೇನೋ ಗಮ್ಯ
ಆಡಲು ಸದಾ ಸಿದ್ದ ದಾರಿ
ತಪ್ಪಿಸುವ ಬಾಯಿ‌ ಮಾತು
ಅತ್ತ ಹೋದರಾರೋ ಇತ್ತ ಬಂದರಾರೋ
ಉತ್ತರವೇ ಇರದ ಕವಿಯ ಪ್ರಶ್ನೆ

ಮುಗಿದ ನಾಟಕವ ಮತ್ತೊಮ್ಮೆ ಆಡಿಸಲು
ಇದೇನು ರಂಗಸ್ಥಲವೇ
ಹಾಡು ಬರೆದು ಆಟ ಕಟ್ಟಿ ಕುಣಿಯಲು
ನಾಟಕವೇ ..ಜೀವನ?..
ಇಲ್ಲಿ ಕಳೆವುದೆಲ್ಲ ಕಳೆವುದೆ
ಉಳಿವುದಷ್ಟೇ ಮಿಕ್ಕಿದ್ದು..ದಕ್ಕಿದ್ದು

ಡಾ.ವೈ.ಎಂ.ಯಾಕೊಳ್ಳಿ
ಪ್ರಾಚಾರ್ಯರು
ಸರಕಾರಿ ಪದವಿ ಪೂರ್ವ ಕಾಲೇಜು ಯಕ್ಕುಂಡಿ
ತಾ ಸವದತ್ತಿ ಜಿ ಬೆಳಗಾವಿ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop