ದೇವೇಂದ್ರ ಕಟ್ಟಿಮನಿ ಕಮಲಾಪುರ ಅವರು ಬರೆದ ಕವಿತೆ ‘ಟಿಕೆಟ್ ಬೇಕಿದೆ!’

ನನಗೂ ಕೂಡ ಟಿಕೆಟ್‌ ಬೇಕಿದೆ ! ತಕರಾರೇನಿಲ್ಲ, ನಾನು ಏನು ಕೇಳಿಲ್ಲ.
ಹೊತ್ತು ಹೊತ್ತಿಗೆ ನೆತ್ತಿಯ ನೋಡಿ ಟೋಪಿ ಹಾಕುವೆ ಎಲ್ಲರಂತೇನಿಲ್ಲ !

ಬಡವರ ಓಟಿಗೆ ಬೆಲೆಯನು ಕಟ್ಟಿ, ಗಟ್ಟಿ ಗೂಟವ ಹೊಡೆದಿರುವೆ
ಬುಡವಿರದ ಗಿಡವ ನೆಡುವ ಕಲೆ, ಕಡೆಗೂ ನಾನು ಅರಿತಿರುವೆ
ಧರ್ಮದ ಹೆಸರಲಿ ದೇಣೀಗೆ ಎತ್ತಲು, ಬಲೆಯನು ಬೀಸಿರುವೆ
ದೇವರು ಧರ್ಮದ ದುರುಳ ಧುಳನು, ಹಗಲಿರುಳು ಹಬ್ಬಿಸುವೆ.

ಮಸಿಯ ಮುಖದಾಸೆಯ ಮೀಸೆ, ಹುರಿ ಹೊಸೆದು ತಿರುವಲು
ಊರ ಕೇರಿಲಿ ನಿಂತ ನೀರಲ್ಲಿ, ಜೋರು ಕಾರ,ಬಾರು ಮಾಡಲು
ಬೇಲಿ ಇಲ್ಲದ ಭೂಮಿ ಜಾಲಿಯಲ್ಲಿ, ಒಳಗೊಳಗೆ ಬೆಳೆಸಿರುವೆ
ಬಾಕಿ ಉಳಿದ ಖಡ್ಗಗಳೆಲ್ಲ, ಕುಣಿವ ಕೆಂಜಡೆಗೆ ಕಾಣಿಕೆ ಕೊಡುವೆ.

ನನ್ನ ನೆರಳಿನಲಿ ತಿರುಗಿ ಕೊರೆವ, ಕರಿ ಮರಗಳ ಸುಳಿವೇ ಇಲ್ಲ
ಹಳೆಯ ಹಂಗಿನಲಿ ಹಸಿದು ಕೂಗುವ, ಹೊಸ ಕುನ್ನಿ, ಕರುಗಳಿಲ್ಲ
ಹಗ್ಗ ಹೊಸೆಯುವ ಹೊಸ ಕೈಗಳಂತೂ, ನನ್ನೆದುರಲ್ಲಿ ಇಲ್ಲಿಲ್ಲ
ಹರಿದು ಬರುವ ತೊರೆಗೆ ತೊಡೆಯ ತಟ್ಟುವೆ, ಎರಡು ಮಾತಿಲ್ಲ

ಹತ್ತಿದ ಹತ್ತು ಹಲವು ಫಲ ಹರಿದು ತಿಂದಿರುವೆ, ಹಸಿದಿರುವೆ!!
ಹತ್ತೂರು ಹಳ್ಳಿಗೆ ಪಳಗಿದ, ಹಿರಿಯ ಹಳೆ ಹುಲಿಯು ನಾನಿರುವೆ
ದುಡ್ಡಿನ ದುನಿಯಾದ ದಡ್ಡು ಪಡ್ಡೆಗಳೆಲ್ಲ, ಗುಡ್ಡದಷ್ಟು ಘಳಿಸಿರುವೆ
ಮಂಡು ದಂಡಿನ ಧ್ವಜ, ಜಾತಿ ಮತದ ಬೆಂಕಿ, ಜೊತೆಗೆ ತಂದಿರುವೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop