ಚೇತನ ಭಾರ್ಗವ ಅವರು ಬರೆದ ಕವಿತೆ “ನೆನಪುಗಳು”

ಕಡಲ ತೀರದ ತಂಪಾದ ಗಾಳಿ
ಮನದಲಿ ತೂಗುತಿದೆ ಪ್ರೀತಿಯ ಜೋಕಾಲಿ

ಸಂಜೆಯ ರಂಗು ತಂದಿದೆ ನಿನ್ನಯ ನೆನಪು
ಕಾಡಿದೆ ಬಿಡದೆ ಮನವ ನಿನ್ನಯ ರೂಪ ಒನಪು

ಭಾಸ್ಕರನು ಕಡಲಲಿ ಲೀನವಾಗುವ ಸಮಯದಿ
ನಿರಾಳವಾಗುವುದು ಮನವು ಭಾವಪರವಶದಿ

ನೀಲ್ಗಡಲ ಮೇಲೆ ಬರುವನು ಕಡುಗಂಪು ನೇಸರನು
ಕಡಲಿಗೆ ಸ್ವರ್ಣದ ಹೊಂಗಿರಣವ ಸೂಸುವನು

ಅಲೆಗಳ ಏರಿಳಿತದ ಸಪ್ಪಳ
ಮರೆಸುವುದು ಮನಸ್ಸಿನ ತಳಮಳ

ಇಳಿ ಸಂಜೆಯ ಹೊತ್ತಲಿ ಮರುಕಳಿಸುವುದು ನೆನಪುಗಳು
ಮನದಲ್ಲಿ ಅಚ್ಚಳಿದಿದೆ ಜೊತೆಯಾಗಿ ನಡೆದ ಹೆಜ್ಜೆ ಗುರುತುಗಳು

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
    0
    Your Cart
    Your cart is emptyReturn to Shop