ಚೇತನ ಭಾರ್ಗವ ಅವರು ಬರೆದ ಕವಿತೆ ‘ಜಗದ ಬೆಳಕು’

ದೇವಕಿಯ ಗರ್ಭದಿಂದ ಉದಯಿಸಿತು ಆ ಬೆಳಕು
ದುರುಳ ಕಂಸನಿಗಿನ್ನು ಶುರುವಾಯಿತು ಭಯದ ಛಳುಕು

ಅನ್ಯಾಯ, ಅಧರ್ಮ ಅಳಿಸಿ ಇಳಿಸಲು ಭೂಭಾರ
ಆಯಿತು ಧರೆಗೆ ಭಗವಾನ್ ಶ್ರೀ ಕೃಷ್ಣನ ಅವತಾರ

ಒಂದೇ ಎರಡೇ ಆತನಾಡಿದ ಬಾಲ್ಯದ ಲೀಲೆ
ಕೊರಳಲಿ ಸದಾ ಅಲಂಕರಿಸಿದೆ ಭಕ್ತರ ಹೂವಿನ ಮಾಲೆ

ಗೋಪಬಾಲರ ನೆಚ್ಚಿನ ಸಖನೀತ
ನಡೆಸಿದ ತುಂಟಾಟ ಕದ್ದೊಯ್ಯುತ ನವನೀತ

ಧರ್ಮದ ರಕ್ಷಣೆಗೆ ವಹಿಸಿದ ಮಹಾಪಾತ್ರ
ವಧಿಸಿದ ದುರುಳರ ನಡೆಸುತ ಕುರುಕ್ಷೇತ್ರ

ಸಾರಿದ ಧರ್ಮಮಾರ್ಗವ ಹೇಳುತ ಭಗವದ್ಗೀತೆ
ಜಗವನೇ ಪೊರೆಯುವ ಬೆಳಕು ಕೃಷ್ಣನ ಯಶೋಗಾಥೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop