ಕನ್ನಡ ಸಾಹಿತ್ಯ ಪತ್ರಿಕೆ
ಬೆನ್ನು ಹತ್ತಿವೆ ನೆನಪುಗಳ ನೆರಳು ನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುವೆ ನಾನು
ಮತ್ತೆ ಆಶೆಗಳ ಬಿಸಿಲ್ಗುದುರೆ ಓಡುತ್ತಿದೆ ಮುಂದೆ ಮುಂದೆ ಬಂಗಾರದ ಜಿಂಕೆಗೆ ಮರುಳಾದ ಸೀತೆಯಂತೆ ಓಡುವೆ ಅದರ ಹಿಂದೆ
ಒಂದೆಡೆ ನೆನಪುಗಳ ದಾಂಗುಡಿ ಮತ್ತೊಂದೆಡೆ ಆಶೆ ನಿರಾಸೆಗಳ ಬಲಿ ಮಧ್ಯ ನಾನು ಬಂಧಿ