ಅನಿತಾ ಪರಮೇಶ್ವರ್ ಹೊಸನಗರ ಅವರು ಬರೆದ ಕವಿತೆ ‘ಭಾವಗಳು ಭೋರ್ಗರೆದಿವೆ’

ಮನದ ತುಂಬಾ ಭಾವನೆಗಳು
ಮಧು ತುಂಬಿದ ಜೇನಿನ ಕಡಲಾಗಿಹುದು..
ಪ್ರೀತಿಯಲಿ ಹೊಳೆಯು ತುಂಬಿರಲು
ಉಕ್ಕಿ ಹರಿದಿದೆ ಭಾವಗಳು ಭೋರ್ಗರೆದು …

ಕತ್ತಲು ಕಳೆದು ಬೆಳಕು ಹರಿಯುತಿದೆ
ಇರುಳಿಗೆ ಶಶಿಯು ಜೊತೆಯಾದಂತೆ…
ಪ್ರೀತಿಯ ಸೆಲೆ ಬೆಂಬಿಡದೆ ಕಾಡುತ್ತಿದೆ
ಭೋರ್ಗರೆದು ಧುಮ್ಮಿಕ್ಕುವ ಜಲಪಾತದಂತೆ…

ಭಾವಗಳಿಲ್ಲದ ಲಹರಿಯುಂಟೆ
ಪ್ರೀತಿಯಿಲ್ಲದ ಮನವುಂಟೆ…
ಮನದ ಮಾತುಗಳಿಗೆ ಮಾಂತ್ರಿಕನಾಗು
ಒಲವ ದಾರಿಗೆ ದೀಪವಾಗು..

ಕಡಲ ಅಲೆಯಂತೆ ಬೊರ್ಗರೆದು
ಉಕ್ಕಿ ಉಕ್ಕಿ ಹರಿದಿದೆ..
ಕಲ್ಮಶದ ಕೊಳೆ ತೊಳೆದು
ಸ್ವಚ್ಚಂಧದ ಹೊಳೆ ಹರಿದಿದೆ…

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
mallanna patil
21 August 2023 09:11

ಸುಂದರವಾದ ಕವಿತೆ ಧನ್ಯವಾದಗಳು ಮೇಡಂ

0
    0
    Your Cart
    Your cart is emptyReturn to Shop