ನೀನಿರುವವರೆಗೆನ್ನ
ಗೆಲುವಿಗಿಲ್ಲ ಕೊರತೆ
ನಿನ್ನ ಜೊತೆಯೆನಗೆ
ನೀಡಿತು ಈ ಪೂಜ್ಯತೆ
ನೀ ತೋರಿದೆಡೆ ನಡೆವುದೆನ್ನ ಗುರಿ
ನೀನೆಳೆದ ಗೆರೆಯೇ ನನ್ನ ದಾರಿ
ಒಲವಿನಲಿ ನೀನಾಡುವ ಪ್ರತಿ ಮಾತು
ನನ್ನ ಸಾಧನೆಗೆ ಸ್ಪೂರ್ತಿಯಾಯ್ತು
ಎಲ್ಲರೂ ಕೈ ಬಿಟ್ಟ ನನ್ನ
ನೀ ಕೈ ಹಿಡಿದು ಮೇಲೆತ್ತಿದೆ
ನಾನೀಗ ಮರವಾಗಿ ಬೆಳೆದು
ಬಯಸಿದವರ ನೆರಳಾದೆ
ಎಲೆ ಮರೆಯ ಕಾಯನ್ನು
ಹೊರಗೆಳೆದು ತೋರಿದೆ
ಜಗವೆಲ್ಲಾ ಹೊಗಳುತಿರಲು
ಅದರ ಹಿರಿಮೆಯ ನಿನಗರ್ಪಿಸಿದೆ
ನೀ ತೋರಿದ ಈ ಪ್ರೀತಿಗೆ
ಅದೆನ್ನ ಬೆಳೆಸಿದಾ ರೀತಿಗೆ
ಕೊಡಲಿ ಏನನು ನಾ
ತೀರಿಸಲಿ ಹೇಗೆ ಆ ಋಣ