ಯಾವುದೇ ಒಂದು ವಿಶ್ವವಿದ್ಯಾಲಯ ಮಾಡಬೇಕಾಗಿದ್ದಂತಹ ಜವಾಬ್ದಾರಿ ಕೆಲಸವನ್ನು ನಮ್ಮ ಎರಡು ದಿನಗಳ ಕಮ್ಮಟ ಮಾಡಿ ಮುಗಿಸಿದೆ. ಆಯೋಜಕರಿಗೆ ಧನ್ಯವಾದಗಳು.
ಡಾ. ಜಗದೀಶ್ ಬಾಬು ಬಿ.ವಿ.
ಕನ್ನಡ ಸಹಾಯಕ ಪ್ರಾಧ್ಯಾಪಕರು ಮತ್ತು
ಸಂಶೋಧನಾ ಮಾರ್ಗದರ್ಶಕರು ರೇವಾ ವಿಶ್ವವಿದ್ಯಾಲಯ
ಶುಭೋದಯ. ಪ್ರಿಯ ಶಂಕರ್ ಧನ್ಯವಾದಗಳು. ಮೊನ್ನೆ ಮತ್ತು ನಿನ್ನೆಯ ಕಮ್ಮಟಕ್ಕೆ ಸಂಬಂಧಿಸಿ ಹೇಳುವುದಾದರೆ ನಾವು ವಾಸ್ತವವಾಗಿ ಕೊನೆಯವರೆಗೂ ಇದ್ದು ಸಮಾರೋಪದಲ್ಲಿ ಭಾಗವಹಿಸಿ ಎರಡು ಒಳ್ಳೆಯ ಮಾತುಗಳನ್ನು ಹೇಳಿ ಬರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಬೇಕಾಗಿತ್ತು. ಆದರೆ ನಮ್ಮ ಗೋವಿಂದಪ್ಪನವರು ತುರ್ತು ಕಾರ್ಯನಿಮಿತ್ತ ಹೊರಡಲೇಬೇಕಾಯಿತು. ಆದ್ದರಿಂದ ಬೇಗನೆ ಹೊರಟು ಬಂದೆವು. ಅನ್ಯಥಾ ಭಾವಿಸಬೇಡಿ. ಹಾಗೆ ನೀವು ಇಬ್ಬರು ತರುಣರು ವಹಿಸಿದ ಹಾಗೂ ನಿಭಾಯಿಸಿದ ಪಾತ್ರ ಅಮೋಘವಾದುದು. ಖಂಡಿತ ಶ್ಲಾಘನೀಯವಾದುದು. ಸ್ವಹಿತಸ್ಯ ಭಾವವೇ ಸಾಹಿತ್ಯವೆನ್ನುತ್ತಾರೆ. ಆ ಸ್ವ ಹಿತದಲ್ಲಿ ಎಲ್ಲಾ ಮಾನವ ಮತ್ತು ಅವನೇ ಭಾಗವಾದ ಪ್ರಕೃತಿಯ ಹಿತವು ಮಿಳಿತವಾಗಿರುತ್ತದೆ ಎನ್ನುವ ಆದರ್ಶವೇ ಸಾಹಿತ್ಯ. ಅಂತಹದರ ಅನುಸಂಧಾನದಲ್ಲಿ ತೊಡಗಿರುವ ನಿಮ್ಮ ಆಸಕ್ತಿ ಮತ್ತು ಅಭಿರುಚಿಗಳು ಅನನ್ಯವಾದವುಗಳು. ಎರಡು ದಿನಗಳು ಕಮ್ಮಟ ಒಳ್ಳೆಯ ಪ್ರಯತ್ನ. ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲೇ ನೀವು ತೊಡಗಿಸಿಕೊಳ್ಳುತ್ತಿರುವ ಮನೋಭಾವ ಅನುಕರಣೀಯ. ನಿಮಗೆ ಶುಭವಾಗಲಿ.
ಡಾ. ದೊಡ್ಡ ಮಲ್ಲಯ್ಯ
ನಿವೃತ್ತ ಪಶುವೈದ್ಯಾಧಿಕಾರಿ ಮತ್ತು
ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು
ಈ ಒಂದು ಕಮ್ಮಟದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಮಿಂಚುಳ್ಳಿ ಬಳಗಕ್ಕೆ ಧನ್ಯವಾದಗಳು.ಕಮ್ಮಟದ ಬಗ್ಗೆ ಹೇಳುವುದಾದರೆ ಕಾವ್ಯದ ಕಟ್ಟುವಿಕೆಯ ಕುರಿತು ಮಾತನಾಡಲು ಬಂದಂತಹ ಸಂಪನ್ಮೂಲ ವ್ಯಕ್ತಿಗಳು ನಿಜವಾಗಿಯೂ ಕಾವ್ಯ ಮತ್ತು ಕಥೆಯ ರಚನೆಯ ಸ್ವರೂಪ ಕುರಿತು ನೀಡಿದ ಮಾಹಿತಿಯು ಇಂದಿನ ಯುವ ತಲೆಮಾರಿನ ಬರಹಗಾರರಿಗೆ ಬರವಣಿಗೆಯ ತಳಹದಿಯ ರೂಪು ರೇಷೆಗಳ ಮಾದರಿಯನ್ನು ಉತ್ತಮ ಮಾಹಿತಿಯನ್ನು ಸಂಗ್ರಹಿಸಿ ಎಳೆ ಎಳೆಯಾಗಿ ಬಿಡಿಸಿಟ್ಟ ರೀತಿಯು ಎಲ್ಲರಲ್ಲೂ ಹೊಸ ಹುರುಪು ತುಂಬಿ ಕಮ್ಮಟದಲ್ಲೇ ಕಾವ್ಯ ರಚನೆ ಮಾಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಒಟ್ಟಾರೆ ಈ ಕಾವ್ಯ ಕಥಾ ಕಮ್ಮಟ ಸಂಪೂರ್ಣ ಯಶಸ್ವಿಯಾಗಲು ಕಾರಣಕಾರ್ತರದ ಕಮ್ಮಟದ ಸಂಘಟನಾಕಾರಿಗೆ ಹೃದಯ ಪೂರ್ವಕ ಧನ್ಯವಾದಗಳು. ಹೀಗೆ ಮುಂದೆಯೂ ಇಂತಹ ಹಲವು ಕಾವ್ಯ- ಕಥಾ ಕಮ್ಮಟಗಳು ನಿಮ್ಮ ಸಂಘಟನೆಯು ಹಮ್ಮಿಕೊಂಡು ಮತ್ತಷ್ಟು ಯುವ ಬರಹಗಾರರಿಗೆ ಉತ್ತಮ ವೇದಿಕೆಯನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುತ್ತದೆ. ಧನ್ಯವಾದಗಳು.
ಶ್ರೀನಿವಾಸ್ ಕೆ.ಎಮ್.
ಸಹಾಯಕ ಪ್ರಾಧ್ಯಾಪಕರು
ಕುಪ್ಪಳಿ, ಪ್ರತಿಬಾರಿ ಭೇಟಿ ಕೊಟ್ಟಾಗಲೂ ನನ್ನಲ್ಲಿ ರೋಮಾಂಚನ ಮೂಡಿಸುತ್ತದೆ. ಆದರೆ ಈ ರೀತಿಯ ಕಮ್ಮಟದಲ್ಲಿ ಅಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು ನಿಜಕ್ಕೂ ವಿಶೇಷ ಅನುಭವವನ್ನು ಕೊಟ್ಟಿದೆ.ಎಲ್ಲವೂ ಸುವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.ಆಯೋಜಕರ ಶ್ರಮ ಸಾರ್ಥಕವಾಗಿದೆ.ಅವರಿಬ್ಬರಿಗೂ ಇಂತಹ ಕಮ್ಮಟಗಳನ್ನು ಇನ್ನಷ್ಟು ಆಯೋಜಿಸಲು ಪ್ರೇರೇಪಣೆಯಾಗಲಿ ಎಂದು ಹಾರೈಸುತ್ತೇನೆ.
ಶೋಭಾ ಬಿ.ವಿ.
ಸಹಾಯಕ ಪ್ರಾಧ್ಯಾಪಕರು
ಎರಡು ದಿನಗಳ ಕಮ್ಮಟ ನಮಗೆ ಸ್ಪೂರ್ತಿಯ ಚಿಲುಮೆಯಾಗಿತ್ತು. ಅಲ್ಲಿಯ ಪ್ರತಿಯೊಂದು ವಿಷಯದ ಬಗ್ಗೆ ಚರ್ಚೆ ಮತ್ತು ಸೂಕ್ಷ್ಮವಾಗಿ ಮತ್ತು ಸೂಕ್ತ ಮಾರ್ಗದರ್ಶನ ಮಾಡಿದ ಶ್ರೀಯುತರಾದ; ಡಾ.ಆರ್.ಟಿ.ಬೇಗೂರ್ ಸರ್, ಡಾ.ಚನ್ನಪ್ಪ ಅಂಗಡಿ ಸರ್, ಡಾ.ಬೇಲೂರು ರಘುನಂದನ್ ಸರ್, ಡಾ.ಹೆಚ್.ಎಸ್.ಸತ್ಯ ನಾರಾಯಣ ಸರ್, ಮೇಡಮ್ ಸವಿತಾ ನಾಗಭೂಷಣ್ ಮತ್ತು ಸುಜಾತಾ.ಹೆಚ್.ಆರ್. ಇವರೆಲ್ಲಾ ಸಾಹಿತ್ಯ ರಚನೆ ಮತ್ತು ಅದರಲ್ಲಿ ಮುಂದುವರೆಯುವದರ ಬಗ್ಗೆ ವಿಶೇಷವಾಗಿ ಮಾರ್ಗದರ್ಶನ ನೀಡಿದ್ದಾರೆ. ಅದರಲ್ಲೂ ವಿಶೇಷತವಾಗಿ ಸಾಹಿತ್ಯದಲ್ಲಿ ಹೊಸ ಹೆಜ್ಜೆಗಳನ್ನು ಇಡುವವರಿಗೆ ಮಾರ್ಗದರ್ಶಿಗಳಂತೂ ಆಗಿಬಿಟ್ಟಿದ್ದಾರೆ. ಇನ್ನು ಕಾರ್ಯಕ್ರಮ ಆಯೋಜಕರಾದ ಗಟ್ಟಿಯಾದ ಯುವ ಕಣ್ಮಣಿಗಳಾದ ಶ್ರೀ ಶಂಕರ್ ಸಿಹಿ ಮೊಗ್ಗೆ ಮತ್ತು ಶ್ರೀ ಸೂರ್ಯ ಕೀರ್ತಿ, ಇವರ ದಣಿವರಿಯದ ಆಯೋಜನೆ ಶ್ಲಾಘನೀಯ. ಮುಂಜಾವಿನ ಫಲಹಾರ, ಮದ್ಯಾನ್ಹ ಮತ್ತು ರಾತ್ರಿಯ ಭೋಜನ ಉತ್ಕೃಷ್ಟವಾಗಿತ್ತಲ್ಲದೇ ಆರೋಗ್ಯಕರವಾಗಿತ್ತು. ಆಯೋಜಿಸಿದ್ದ ಕಾರ್ಯಕ್ರಮ ಸರಳತೆಯಿಂದ ಇದ್ದರೂ ಅದರಲ್ಲಿ ಶ್ರೇಷ್ಠತೆ ಇತ್ತು ಏಂದು ನನಗೆ ಅನ್ನಿಸುತ್ತದೆ. ಒಟ್ಟಿನಲ್ಲಿ ಇಂಥದ್ದೇ ಅವಕಾಶವನ್ನು ಮತ್ತೆ ಮತ್ತೇ ಬಯಸಿ,ಅದಕ್ಕಾಗಿ ಕಾಯಲು ತವಕವಾಗುತ್ತಿದೆ. ಕೊನೆಯದಾಗಿ ‘ಮಿಂಚುಳ್ಳಿ’ ಈಗ ಹೆಸರಿಗೆ ತಕ್ಕಂತೆ ಆಕರ್ಷಣೀಯ ಕೂಡಾ. ಏಲ್ಲಾ ಮಹನೀಯರು ಮತ್ತು ಮಹಿಳೆಯರಿಗೂ ಅನಂತಾನಂತ ಧನ್ಯವಾದಗಳು.
ಬಿ.ಟಿ.ನಾಯಕ್
ಶ್ರೀಗಂಧದ ಕಾವಲು, ಬೆಂಗಳೂರು-91.
ಎರಡು ದಿನಗಳ ಕಮ್ಮಟ ಆಯೋಜಕರಿಗೆ ಧನ್ಯವಾದಗಳು. ನಿಮ್ಮ ಈ workshop ನ ಎಲ್ಲಾ ಸಂಘಟನಾ ವ್ಯವಸ್ಥೆ ತುಂಬಾ ಚೆನ್ನಾಗಿತ್ತು. ಎಲ್ಲಾ ತುಂಬಾ ಅಚ್ಚುಕಟ್ಟಾಗಿತ್ತು. ಮರೆಯಲಾಗದ ಅನುಭವ ಧನ್ಯವಾದಗಳು
ಲಕ್ಷ್ಮಿದೇವಿ ಎನ್.
ಸಹಾಯಕ ಪ್ರಾಧ್ಯಾಪಕರು
ನಿಮ್ಮ ಈ workshop ನ ಎಲ್ಲಾ ಸಂಘಟನಾ ವ್ಯವಸ್ಥೆ ತುಂಬಾ ಚನ್ನಾಗಿತ್ತು. ಕವಿ ಶೈಲದ ಕವಿಗೋಷ್ಠಿಯಲ್ಲಿ ಮೈಸೂರ್ ನ ವಿದ್ಯಾರ್ಥಿ ಮಿತ್ರ ಮತ್ತು ಸಾವಿನ ಬಗ್ಗೆ ಬಂದ ಈ ಇಬ್ಬರ ಕವಿತೆ ಮನಸ್ಸಿಗೆ ತುಂಬಾ ಹತ್ತಿರವಾಯಿತು.
ಸಿದ್ಧರಾಮು ಕೆ.ಜೆ.
ಸಹಾಯಕ ಪ್ರಾಧ್ಯಾಪಕರು
ಎಲ್ಲ ತುಂಬಾ ಅಚ್ಚುಕಟ್ಟಾಗಿತ್ತು. ನಂಗಂತೂ ಮರೆಯಲಾಗದ ಅನುಭವ ಧನ್ಯವಾದಗಳು.
ಗೋಪಾಲ ಜಿ.ಎಂ.
ಸಹಾಯಕ ಪ್ರಾಧ್ಯಾಪಕರು