ಸಂತೋಷ್ ಟಿ ಅವರು ಬರೆದ ಕವಿತೆ “ಚಿರ -ಪರಿಚಿತರು”

ಜಾಣ ಕಣ್ಣೀದ್ದು ಚಾಳೀಸುಧಾರಿಗಳು
ಜಾಣ ಕಿವಿಯಿದ್ದು ಸೇಲ್ ಫೋನ್ ಕಿವುಡರು
ವಾಕ್ ಸರಿಯಿದ್ದು ಮಾತಿನ ಚೌಕಸಿಗರು
ನೋಡುತ್ತಿಲ್ಲ ನೊಂದು ಬೆಂದವರ ಬದುಕು
ಕೇಳುತ್ತಿಲ್ಲ ಕರುಳ ವೀಣೆಯ ಕೂಗು
ಮನುಕುಲದ ಮಾನವೀಯತೆ ಕೊಂದ
ಇವರುˌ ಹ್ರದಯ ಶ್ರೀಮಂತರು

ಸೌಜನ್ಯಕ್ಕೆ ಸೂತ್ರಧಾರಿಗಳು
ಸಭ್ಯತೆಗೆ ಪಾರ್ಟಿ ವಿನೋದಗಳು
ವ್ಯಕ್ತಿತ್ವವಿದ್ದರೂ ಬೇಕೆಂದೆ ಕಳೆದುಕೊಂಡ
ಇವರುˌಯಾವಾಗಲೂ ಶಿಸ್ತಿಗೆ ಬದ್ಧರು
ಅನ್ಯಾಯಕ್ಕೆ ಪ್ರಬುದ್ಧರು

ತಂಪಾದ ಪರಿಸರವನ್ನು ಪಿತೂರಿಯಿಂದಲೆ
ವಿಷಾನಿಲ ಮಾಡುವ ಸಾಹಸಿಗರು
ಇವರುˌ ತುಂಬಾ ಜಾಣರು
ಬುದ್ಧ – ಬಸವ – ಗಾಂಧಿಯರನ್ನು
ಜಯಂತಿ ಭಜಂತ್ರಿಗಳಲ್ಲಿ ಪೂಜಿಸಿ
ಜಂಗಮವಾಗಿ ಮೆರೆಯುವರು

ಮಲಿನವಾದ ಮಡುವಿನಲ್ಲಿ ಮುಳುಗಿ
ಭ್ರಷ್ಟವಾದ ದೋಷಗಳಲ್ಲಿ ತೇಲಿ
ಇಲ್ಲಸಲ್ಲದ ಸುಖವ ಸಂಪಾದಿಸುವ
ಚಪಲದಲಿ ರಣರಂಗ ಕಟ್ಟಿದವರು
ಭರವಸೆಯ ಸ್ಯಾಂಪಲ್ಲಿಗೆ ಭಾಷಣ ಬಿಗಿದು
ಮಿಕ್ಕಂತೆ ಮೌನವಾಗುವ ಇವರು
ಎಲ್ಲರಿಗೂ ಚಿರ – ಪರಿಚಿತರು.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop