ಬರೆದರೇನು ಫಲ ಬೆಳೆದರೇನು ಫಲ
ಹಳ್ಳಿಗಳಿಂದ ತುಂಬಿ ತುಳುಕುವ
ಭಾರತಾಂಬೆಯ ಮಡಿಲು ಅನ್ನದಾತ
ಬೆಳೆಗೆ ಫಲ ಬಂದರು ಹಿಡಿ ಅನ್ನ ಮಾತ್ರ
ಭಾವಚಿತ್ರಕ್ಕಾಗಿ ಕಾಯದ ಕಾಯಕ
ಜೀವಿ ಛಾಯಾಗ್ರಾಹಕರಿಗೆ ಫಲ
ಬರೆಯುವ ಲೇಖನಿಗೆ ಫಲ ಇವನ
ಬಗ್ಗೆ ಕವನ ಲೇಖನ ಬರೆದರೆನು ಫಲ
ಸದಾ ಕೆಂಪು, ಕಪ್ಪು ಕಲ್ಲು ಬಂಡೆ
ಸುಣ್ಣಬುರಲಿ ಭೂಮಿಯಲಿ ಉತ್ತು ಬಿತ್ತಿ
ಬೆಳೆದು ಫಲ ದಕ್ಕುವದ್ ಯಾರಿಗೆ
ಹಂಚಿ ತಿನ್ನುವನಿಗೆ ಉಳಿವದು ಫಲ
ಅದೇ ರಂಟೆ, ಕುಂಟೆ, ಬಾರಕೋಲು
ಮುಂಜಾನೆ ರವಿ, ತಂಪು ಗಾಳಿ
ಬೀಜ ಗೊಬ್ಬರ, ಜೋಡೆತ್ತು, ಮೂಗುದಾರ
ಅದಿಲ್ಲದಿರೆ ಮಾತು ಕೆಳವು ಆಕಾಶ ಕೂಡಾ
ಗೋಣಿ ಚೀಲ ತುಂಬುವದು ಒಂದು
ಕೆಜಿ ಬೀಜದೀ ಒಕ್ಕಿ, ಹಸನಮಾಡಿ
ಚಕ್ಕಡಿಯಲಿ ಹೊತ್ತು ಸಾಗಿದಾಗ ಸಿಗುವ
ಫಲ ಕನಸು ಕಂಗಳ ತುಂಬಾ ನನಸು
ಸಾಲದ ಶೂಲ ಮನೆಯಲ್ಲಿ ಮಕ್ಕಳ ಓದು
ಮಗಳ ಮದುವೆ, ಕಾಯಿಲೆ ಅಪ್ಪ, ಅಮ್ಮ
ಜೊತೆಗೆ ಬೇಕುಗಳು ಮೋಬೈಲ್ , ಟಿವಿ
ಕಾರು, ಹೀರೋಹೋಂಡಾ, ಯಾರಿಗೆ ಫಲ?