ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುಗಾದಿ ಜೊತೆಯಲ್ಲಿ’

 

ಯುಗಾದಿ ಜೊತೆಯಲ್ಲಿ
ಭಯಂಕರ ಬಿಸಿಲು
ಬೋರವೆಲ್ ಬಾವಿಗಳಲ್ಲಿ
ಬಿಗಿದಿರೆ ಗಂಟಲು
ಆದರೂ, ಬಾಯಾರಿ ನರಳುವ ನರನ
ಹೃದಯದಲಿ ಕೇಳುತ್ತಿದೆ ಚೈತ್ರೋದಯ?

ಯುಗಾದಿ ಜೊತೆಯಲ್ಲಿ
ಚುನಾವಣೆಯ ಯುದ್ಧ
ಕೋಟೆ ಕೊತ್ತಲದಲ್ಲಿ
ಗದ್ದುಗೆ ಹಿಡಿಯಲು ಸಿದ್ದ
ಆದರೂ, ಗುಳ್ಳೆ ನರಿಗಳ ಬುಗುರಿ
ಆಟದಲ್ಲಿ ಚಿಗುರು ಹೂವಿನ ತಂಪು

ಯುಗಾದಿ ಜೊತೆಯಲ್ಲಿ
ಮಾಲ್ ಗಳ ಭರಾಟೆ
ಬೇವು ಬೆಲ್ಲದಲ್ಲಿ
ಮಧುಮೇಹದೇ ಆಟ
ಆದರೂ, ಯುದ್ದ ಗೆದ್ದವನ ನೋಡಿ
ಬೆಳದಿಂಗಳಲ್ಲಿ ನಕ್ಕನು ಬುದ್ದ

ಯುಗಾದಿ ಜೊತೆಯಲ್ಲಿ
ಪರೀಕ್ಷೆಯ ಫಲಿತಾಂಶ
ಯುದ್ಧ ಗೆದ್ದ ಮಕ್ಕಳಲ್ಲಿ
ನಲಿಯುವಂತೆ ಹಂಸ
ಮತ್ತೆ ಬಂದಿದೆ ಚೈತ್ರಗಳಲ್ಲಿ
ಚೆಲುವಿನ ಚಿತ್ತಾರ ಯುಗಾದಿ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
    0
    Your Cart
    Your cart is emptyReturn to Shop