ಪುಟ್ಟ ಗುಬ್ಬಿ, ಪುಟ್ಟ ಗುಬ್ಬಿ ನೋಡುವೆ ನೀ ಏನಲ್ಲಿ?
ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ ಕೇಳು ನೀನಿಲ್ಲಿ,
ನೋಡುತಿರುವೆ ಏಕೆ ನಿನ್ನದೇ
ಬಿಂಬ,ಪ್ರತಿಬಿಂಬ ಕನ್ನಡಿಯಲಿ.
ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ
ನಿನ್ನದೇ ಪ್ರತಿಬಿಂಬ ನೋಡಿ ಹೆದರುವೆ ಏಕಲ್ಲಿ?
ಪುಟ್ಟ ಗುಬ್ಬಿ,ಪುಟ್ಟ ಗುಬ್ಬಿ ಕೇಳು ನೀನಿಲ್ಲಿ,
ಹೆದರಿ ಕುಕ್ಕುತಿರುವೇಕೆ,ಬಿಂಬ ಪ್ರತಿಬಿಂಬಕೆ?
ಬಿಂಬ ಇದ್ದರೇನೇ ಪ್ರತಿಬಿಂಬ ಎಂಬ
ಸತ್ಯವ ಅರಿಯದ,ಪುಟ್ಟ ಗುಬ್ಬಿ ಪುಟ್ಟ ಗುಬ್ಬಿ.
ನಾನೆಂಬ ಬಿಂಬಕೆ,ನೀನೇಂಬ ಪ್ರತಿಬಿಂಬ,
ನಾನು ಹೋಗಿ ನೀನಾದರೆ ನಿರುಮ್ಮಳ
ಈ ಜೀವ, ಜೀವನ ಸಾರ್ಥಕತೆಯ ಬದುಕು.
ನಾನು ಹೇಗೆಯೋ ಹಾಗೆ ನನ್ನ ಪ್ರತಿಬಿಂಬ,
ನಾನು ನೀನಾಗಿ,ನಾವಾಗಿ ನೀವಾಗಿ,
ಪುಟ್ಟ ಗುಬ್ಬಿಯ ಬಿಂಬ,ಪ್ರತಿಬಿಂಬ ಕಂಡಿತೋ,
ಖಾದರ ಲಿಂಗ.