ಮಮತಾ ಶೃಂಗೇರಿ ಅವರು ಬರೆದ ಕವಿತೆ ‘ಹರಿವ ನದಿ ತೀರದಲ್ಲಿ’

ಹರಿವ ನದಿ ತೀರದಲ್ಲಿ
ಕಾದು ಕುಳಿತಿಹ ರಾಧೆ,
ಕೃಷ್ಣನ ಮುರಳಿಯ ರಾಗಕ್ಕೆ,
ಸೋತು ಮೈ ಮರೆತಳು ಅಲ್ಲೇ..

ಮಾಧವನ ಮುರಳಿಯ ಗಾನಕೆ,
ಪ್ರಾಣಿ ಪಕ್ಷಿಗಳು ಮೈ ಮರೆತು,
ಪ್ರಕೃತಿಯಲ್ಲಿ ಸೇರಿ ಹೋಗಿಹವು,
ಮುರಳಿಯ ನಾದದಲಿ ಬೆರೆತು.

ನದಿಯ ಜುಳು ಜುಳು ನಾದ,
ಹಕ್ಕಿಗಳ ಮಧುರ ವಿನೋದ,
ಅದರ ನಡುವೆ ಮೋಹದಿ ರಾಧೆ,
ಪ್ರಿಯನ ನೆನೆದು ಕಳೆದು ಹೋಗಿಹಳು.

ಬರಬೇಕು ಈಗ ಮಾಧವನೇ,
ಅವಳನ್ನು ಕರೆಯಲು ಇಹಲೋಕಕ್ಕೆ ,
ಮಾಧವನಿದ್ದರೆ ರಾಧೆ,
ರಾಧೆ ಎಂದರೆ ಮಾಧವ.
ಅವರೀರ್ವರ ಮಧುರ ಪ್ರೇಮಕ್ಕೆ,
ಸಾಟಿ ಎಲ್ಲಿಹುದು?!

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಮಮತಾ
29 October 2023 22:53

ಧನ್ಯವಾದಗಳು ಪ್ರಕಟಣೆಗಾಗಿ🙏🏼💐🙏🏼

0
    0
    Your Cart
    Your cart is emptyReturn to Shop