ಕೃಪಾನ್ ಶ್ರೀನಿವಾಸಪುರ ಅವರು ಬರೆದ ಕವಿತೆ ‘ನಾನು ಮತ್ತು ಮೊಬೈಲ್’

(1)

ರಿಂಗಣಿಸುವಾಗ
ಹುಡುಕಾಡುತ್ತದೆ ಕೈ
ಜೇಬಿನಿಂದ ಬಾರದ ಶಬ್ದಕೆ!
ಒಮ್ಮೆ ತಡವರಿಸಿ ಮೇಲೆ
ಎಡ ಬಲ ಮುಟ್ಟಿ

ಪುಸ್ತಕ ಹಿಡಿಯುವ
ಕರದೊಳು ಜಪಮಣಿ
ಮಂಪರಿನಲ್ಲೂ ಸಂಶೋಧನೆ!
ಮನಸ್ಸಿನ ಆಳದಗಣಿಗೆ
ಅರ್ಥಕ್ಕೆ ಶಬ್ದಕೋಶ
ಭಾಷಾಂತರಕ್ಕೆ ಭಾಷೆಯ ದಿಶಾ

ದೂರದ ಮುಖಗಳನು
ಎದುರು ಬದಿರಾಗಿಸಿ
ಸಂವಹನಗೊಳಿಸುತ್ತದೆ
ಸ್ಪರ್ಶವಿಲ್ಲದೆ;
ಮುಖದ ಮನೆಯಲ್ಲಿ ಹರ್ಷಬರೆದು
ಶ್ರಾವಣಕೆ ಶಬ್ದ ನೀಡುತ್ತದೆ
ಮಾತುಗಳನು ಕರೆದು

(2)

ಭಾವನೆಗಳೆಲ್ಲ
ಕಡೆಗೋಲಾದಾಗ
ಮಂಥನದಲ್ಲಿ ಅಮೃತ-ವಿಷವು
ಸೇವಿಸುವವರ ತನುವಲ್ಲಿ
ವೈರಲ್ ಟ್ರೋಲ್
ಗಡಿಮೀರಿದ ಕಾಮೆಂಟ್
ಮಾನದ ಮಾತು!
ಮಾಪನದಲ್ಲಿ ಶೇರ್!!

ಮೂಡಿದ ಅಭಿವ್ಯಕ್ತಿಗಳಿಗೆ
ಎಮೋಜಿ ನೀಡಿಕೆ
ವಿಮರ್ಶೆಗೆ ಕರತಾಡನ, ಹೂಗಚ್ಛ ಸಂಭ್ರಮ
ಅಲ್ಲಲ್ಲಿ ಅಭಿನಂದನೆ
ಧನ್ಯವಾದಗಳ ವಿರಾಮ.

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
ಹರ್ಷಿತ
25 July 2023 14:33

ಚೆಂದದ ಕವಿತೆ ಸರ್ 👍💐💐💐

0
    0
    Your Cart
    Your cart is emptyReturn to Shop