ನೀ ಊದಿದ್ದು ಒಲೆಯಲ್ಲಿದ್ದ
ಬಡತನದ ಬೂದಿಯ
ಬದುಕಿಗೆ ಬೆಳಕಾದ
ಉರಿ ಕೆಂಡವಾ
ನೀ ಇಂಗಿಸಿದ್ದು
ಬೇಯಿಸಿದ್ದು
ಗಂಜಿಯ ನೀರಲ್ಲ
ಒಪ್ಪತ್ತಿನ ಕೂಳು
ಅನ್ನದ ಅಗಳು
ಹೊಗೆಯಾಗಿ
ಮೋಡವಾಗಿ
ಆವರಿಸಿದ್ದು
ಮಳೆ ಮೋಡದ
ಹನಿಯಾಗಲು
ಬಡವನ ಕಣ್ಣೀರ
ಮರೆಮಾಚಾಲು
ಕಂಕಳಲಿ ಕೂಸು
ಕೈಯಲಿ ಬೂರನಿಗೆ
ಕಣ್ಣಂಚಲಿ ಬದುಕು
ತುಂಬಿದ ಪುಟ್ಟೇ
ಇಡೀ ಜೀವನವೆಲ್ಲ
ಬಡವರ ಬದುಕು
ಮೂರಬಟ್ಟೆ