ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಕ್ಷಮಿಸಿ ಬಿಡೇ ಅಮ್ಮ’

ನನ್ನಮ್ಮನಿಗೆ
ಅದೆಂಥದ್ದೂ…ಮರಳು
ನಾ ಅವಳ
ಬದುಕ ಬರಹವಾಗಿಸಬೇಕಂತೆ…
ಬಯಲಾದ ಪದಗಳಲಿ
ಅವಳು ಕುಣಿಯುತ್ತಾಳಂತೆ..

ಅವಳೆದುರಿಗೆ ನನ್ನದೊಂದೇ
ಪ್ರಶ್ನೆ..
ಅಕ್ಷರಗಳಿಗೆ ನಿಲುಕದಂತೆ
ಜೀವಿಸಿದ ನಿನ್ನ
ಅದ್ಯೇಗೆ ಬಂಧಿಸಲಿ..
ನೀ ತೊಡದ ಒಡವೆಯಲಿ
ಅದ್ಯೇಗೆ ನಿನ್ನ ಸಿಂಗರಿಸಲಿ..

ಏ ಅಮ್ಮಾ
ಅನಕ್ಷರಸ್ಥಳು…ನಾನು
ನಿನ್ನ ಅನಂತ
ಬದುಕಿನೆದುರಿಗೆ
ವರ್ಣಮಾಲೆಗಳೇ ಇಲ್ಲ
ಅಲ್ಲಿ ಪದವಿಲ್ಲಾ
ಕ್ಷಯವಾಗುವ ಅಕ್ಷರಗಳಿಲ್ಲಾ..

ಏ ಅಮ್ಮಾ
ಕತ್ತಲನ್ನೆ ಹಗಲಾಗಿಸಿ
ಕಾಯವನ್ನೆ ದೀವಿಗೆಯಾಗಿಸಿ
ಪೊರೆದವಳ..
ಬಾಳ…ಚಿತ್ರವ
ರಚಿಸಲಾದೀತೇ…
ಗಡಿಗಳೇ ಇಲ್ಲದ
ಈ ರೇಖಾ ಚಿತ್ರವ..
ಚಿತ್ರಿಸಲಾದೀತೆ..,

ಕ್ಷಮಿಸಿ ಬಿಡೇ ಅಮ್ಮಾ
ನಿನ್ನ ಕೂಸಿಗೆ
ಮಡಿಲ ಮರೆಯಲಿ
ಮಿಯ್ಯುವುದು ತಿಳಿದಷ್ಟು
ಬಯಲಾಗುವ ಪರಿ ತಿಳಿದಿಲ್ಲ ಕಣೇ..

ಚಂದಾದಾರರಾಗಿ
ವಿಭಾಗ
3 ಪ್ರತಿಕ್ರಿಯೆಗಳು
Inline Feedbacks
View all comments
ಪ್ರಕಾಶ ಮದಕರಿ ಕೆ.ಚಿತ್ರದುರ್ಗ ಚಳ್ಳಕೆರೆ ತಾ.
21 July 2023 17:35

ನಿಸ್ವಾರ್ಥ ಕರುಣಾಮಯಿ ಅಮ್ಮನ ಕವಿತೆ ಬಹುಶ ಎಷ್ಟೇ ವರ್ಣಿಸಿದರು ವರ್ಣಿಸಲು ಪದಗಳು ಸಾಲದು ಆ ಜೀವಕ್ಕೆ…. Thanku.. 🌹🌹

ಜಯಂತಿ ಸುನಿಲ್
21 July 2023 17:05

ವ್ಹಾವ್ ಮನಕದಡಿದ ಸಾಲುಗಳು… ಅಮ್ಮನ ಕವಿತೆ ಯಾರೇ ಬರೆದರೂ,ಹೇಗೆ ಬರೆದರೂ ಚೆಂದ

ಹರ್ಷಿತ
21 July 2023 17:03

ಚೆಂದದ ಕವಿತೆ… ಅಭಿನಂದನೆಗಳು ಆಶಾ ಅವರಿಗೆ

0
    0
    Your Cart
    Your cart is emptyReturn to Shop