ನಿರಂಜನ ಕೇಶವ ನಾಯಕ ಅವರು ಬರೆದ ಕವಿತೆ ‘ಬಾಮಿಯನ ಬುದ್ಧ’

 

ಜಗಕೆ ಆನಂದವ ಉಣಿಸಿದವನ
ಉಳಿಸದಾಯ್ತು ಈ ಜಗತ್ತು
ದ್ವೇಷದ ಕೂಪದೊಳಗೆ
ಸಿದ್ಧಿಯು ಕೂಡ ಶವವಾಯ್ತು

ಅವಸಾನ ಅವಕಾಶದ ಬೆನ್ನೇರಿ
ಎದುರು ಶೂಲವಾಗಿ ನಿಂತಿತ್ತು
ಆ ನಿರ್ಮಲ ಶಾಂತತೆ ಮಾತ್ರ
ಪ್ರತಿಯ ಇರಿತಕೆ ಉತ್ತರವಾಗಿತ್ತು

ಆಲಯವಾಗಿದ್ದ ಆ ಬಯಲು
ಬರಗಾಲ ಸುಳಿದಂತೆ ಸುಡುತ್ತಿತ್ತು
ಗುಂಡು ಸಿಡಿಮದ್ದಿನ ಸದ್ದು
ಪ್ರಶಾಂತತೆಯ ಅಣಕಿಸಿ ನಗುತ್ತಿತ್ತು

ಇತಿಹಾಸದ ಸುಮ ಬಾಡುತ್ತಿತ್ತು
ಕೋವಿಯ ನಳಿಕೆ ನಗುತ್ತಿತ್ತು
ಮರುಗದ ಜನರು ಗೆದ್ದರು
ಮರುಗುವ ಮಂದಿ ಬಿದ್ದರು

ಅಲ್ಲೀಗ ಸ್ಮಶಾನ ಮೌನ
ಬರಿಯ ಬೋಳು ಗುಡ್ಡ
ಎಲ್ಲವ ಕಬಳಿಸುವ ನಿರ್ವಾತ
ಬರಿಯ ಶೂನ್ಯ ಮಾತ್ರ

ಚಂದಾದಾರರಾಗಿ
ವಿಭಾಗ
3 ಪ್ರತಿಕ್ರಿಯೆಗಳು
Inline Feedbacks
View all comments
ನಿರಂಜನ
19 October 2023 10:54

ಮೆಚ್ಚುಗೆಗೆ ಧನ್ಯವಾದಗಳು

ಶುಭಲಕ್ಷ್ಮಿ
4 July 2023 20:23

ವಾಸ್ತವದ ಚಿತ್ರ ಕವನದಲ್ಲಿದೆ.

ದೇವೇಂದ್ರ ಕಟ್ಟಿಮನಿ
4 July 2023 17:09

ಬಹಳ ಸುಂದರವಾಗಿ ಪ್ರಸ್ತುತತೆ ಪ್ರಸ್ತುತಪಡಿಸಿದ್ದಾರಿ.

0
    0
    Your Cart
    Your cart is emptyReturn to Shop