ಮನದಲ್ಲಿ ಮೂಡಿದ ಕಲಹ
ತೊಲಗಲಿ, ನಿನ್ನ ಒಲವ
ಹಾಡಿದ ಕಾವ್ಯವಿಲ್ಲ
ಹನಿ ಕರಗಿ ನೀರಾಯಿತಲ್ಲ
ಕಂಬನಿಧಾರೆ ಇದೇಕೆ
ಒಲವೆಂಬ ಒಲವೇ ಮರಿಬೇಡ ನನ್ನ
ನಿಜ ಪಾಪಿ ನಾನು ನಿನಗೆ
ಕ್ಷಮೆ ಇಲ್ಲವೇನು ಕೊನೆಗೆ…?
ಅರಿಯದೆ ಮಾಡಿದ ತಪ್ಪು
ಕೊರಗಿದೆ ದಿನ ಮೂರು ಹೊತ್ತು
ಸಂಜೆಯು ಮರೆಯದ ನೆನಪು
ಬೆಳಕಲು ಕಾಡಿದ ಒನಪು
ಕೊನೆಗೂ ಕ್ಷಮೆ ಇಲ್ಲವೇನು?
ಒಳಗೊಂದು ಹೊರಗೊಂದು ಮಾತು
ಗೊತ್ತಿಲ್ಲ ಎನಗೆ ಗೆಳತಿ
ಸರಿ ತೋರಿದಂತೆ ನನಗೆ
ಅಡಿ ಇಡುವ ಮಗುವಂತೆ ನಾನು
ಕರುಳ ಕೊರೆವ ನಿನ್ನ ರೋಧನಕೆ
ತಡೆಹಾಕಿ ಕ್ಷಮೆ ನೀಡು.
ಕರುಣೆಯೆಂದರೇನು
ತಿಳಿಯದಾಯಿತೇನೋ
ದೂರ ಸರಿವ ಮನವ
ದೂಷಿಸು, ನನಗಾಗಿ ಒಮ್ಮೆ ನೀನು
ಕರುಣಿಸು ಈ ಗೆಳೆಯನ.
ಅಮೃತವೇ ವಿಷವಾಗೊ ಹೊತ್ತು
ರಕ್ಷಿಸುವ ಜೀವ ಇನ್ನಾವುದಿತ್ತು
ಹರಸುವೆ ನಿನ್ನ ಜಯಕ್ಕೆ
ನಿನ್ನ ಗೆಲುವೆಲ್ಲ ನನ್ನ ಬಯಕೆ
ಕೊನೆಗೊಮ್ಮೆ ಕ್ಷಮಿಸು ಗೆಳತಿ.