ರಾಹುಲ್ ಸರೋದೆ ಅವರು ಬರೆದ ಕವಿತೆ ‘ಏನಾದರು ಕೊಡಿ?’

ಸ್ವಾಮ್ಯಾರಾsss ಊಟಮಾಡಿ
ಮೂರು ದಿನಾತು
ಬೇಡಿ ಕಾಡಿದೆ
ಅವರಿವರ
ಒಂದು ತುತ್ತು ಅನ್ನ
ಸಿಗದಾತು…
ಏನಾದರು ಕೊಡಿ ?
ಬಡಪಾಯಿಯ ಹೊಟ್ಟೆಗೆ.

ಎದುರು ಬೀದಿಯ ಶ್ರೀಮಂತರ
ಕೇಳಿದೆ
ಅಳಿಸಿದ ಅನ್ನ ಎಸೆದರು
ತಿನ್ನುವಾ…ಅಂತಾ
ಕೈ ಬಾಯಿಗೆ ಹೋಗುತ್ತಲೆ ಬೀದಿ ಶ್ವಾನ ಬಂದು
ಬಾಯಾಕಿತು
ತುತ್ತು ಅನ್ನ ಮಣ್ಣ ಪಾಲು
ಮತ್ತೊಂದ ಅಗಳು ನಾಯಿ ಪಾಲು
ಏನಾದರು ಕೊಡಿ
ಹಸಿದ ಜೀವಕೆ.

ಹಸಿದ ಕಂದಮ್ಮಗಳು
ಗುಡಿಸಲಲ್ಲಿ ಚಿರುಗುಟ್ಟುತ್ತಿವೆ
ರೋಗದಲಿ ನರಳುವ ಪತ್ನಿ
ರೋಧಿಸುತ್ತಿದ್ದಾಳೆ
ಸ್ವಾಮ್ಯಾರssss
ನಿಮ್ಮ ದಮ್ಮಯ್ಯಾ ಅಂತಿನಿ
ಏನಾದರು ಕೊಡಿ ? ಹಸಿದ ಹೊಟ್ಟೆಯ
ಭಾರ ನಿಗಿಸಿ.

ದುಡಿಯೊಣವೆಂದರೆ
ರಟ್ಟೆಯಲಿ ಕಸುವಿಲ್ಲ.,
ಸಾಯೋಣವೆಂದರೆ,
ಈ ಪಾಪಿಗೆ ಬರದಾಗಿದೆ ಮರಣ.
ಹುಟ್ಟಿ ಕೆಟ್ಟೆನೋ…
ಬದುಕ ಮೂರಾಬಟ್ಟೆ.
ಮನೆಬಿಟ್ಟು ಮೂರು ದಿನವಾತು
ಹಸಿದ ಹೊಟ್ಟೆಗೆ ಏನಾದರು ಕೊಡಿ ಸ್ವಾಮ್ಯಾರಾssss

ಚಂದಾದಾರರಾಗಿ
ವಿಭಾಗ
5 ಪ್ರತಿಕ್ರಿಯೆಗಳು
Inline Feedbacks
View all comments
Banu
10 June 2023 08:09

ಚನ್ನಾಗಿದೆ ಸರ್, ಮುಂದೆ ಬರೆಯಬಹುದಾಗಿತ್ತು.

ರಾಹುಲ್ ಸರೋದೆ ಕವಿ
7 June 2023 10:20

ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು

ಸಂಗನಗೌಡ ಹಿರೇಗೌಡ
7 June 2023 08:52

ಕವಿತೆ ಅಪೂರ್ಣ

Divyashree
7 June 2023 08:49

ಚೆನ್ನಾಗಿದೆ ಸರ್ 👌

ಮಂಜುಳಾ ಗೌಡ
7 June 2023 08:46

👌

0
    0
    Your Cart
    Your cart is emptyReturn to Shop