ಕನ್ನಡದ ಲೇಖಕಿಯರು ಧೈರ್ಯಶಾಲಿಗಳು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಮತ

ಬೆಂಗಳೂರು,ಜು-23

ಕರ್ನಾಟಕದಲ್ಲಿ ಅತ್ಯಂತ ಧೈರ್ಯಶಾಲಿ ಮಹಿಳಾ‌‌ ಲೇಖಕಿಯರ ಕೊರತೆ ಇಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅಭಿಮತ ವ್ಯಕ್ತಪಡಿಸಿದ್ದಾರೆ. ಕರ್ನಾಟಕ‌ ಲೇಖಕಿಯರ ಸಂಘ ಆಯೋಜಿಸಿದ್ದ ದತ್ತಿ ಪ್ರಶಸ್ತಿಗಳ ಸಮಾರಂಭಕ್ಕೆ ಚಾಲನೆ ನೀಡಿ ಚಂದ್ರಶೇಖರ ಕಂಬಾರ ಮಾತನಾಡಿದರು.

ಸರ್ಕಾರದ ಮೇಲೆ ಒತ್ತಡ ಹೇರಿ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನು ಮಂಡಿಸುವ ಕೆಲಸ ಮಹಿಳಾ‌ ಲೇಖಕಿಯರ ಸಂಘ ಮಾಡುತ್ತಿರುವುದಕ್ಕೆ ಕಂಬಾರರು ಸಂತಸ ವ್ಯಕ್ತಪಡಿಸಿದರು. ಅದರಲ್ಲೂ ಮಹಿಳೆಯರಿಗೆ ಪ್ರತ್ಯಕವಾಗಿ ಸಂಘ ಕಟ್ಟಿ ವಿಶೇಷ ಸೌಲಭ್ಯ ಕೇಳ್ತಿರುವುದು ನಮ್ಮ ರಾಜ್ಯದಲ್ಲಿ ಮಾತ್ರ ಎಂದು ಸಂಘದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಹಾಗು ಧೈರ್ಯವಂತ ಲೇಖಕಿಯರ ಕೊರತೆ ರಾಜ್ಯದಲ್ಲಿ ಇಲ್ಲ ಎಂದು ಹೇಳಿದ್ದಾರೆ.  ಪುರುಷರನ್ನು ಮೀರಿಸುವಂತ ಮಹಿಳಾ ಲೇಖಕಿಯರು ನಮ್ಮಲ್ಲಿದ್ದು, ಕನ್ನಡ ಭಾಷೆಯಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದಾರೆ. ಇದು ಮಹಿಳೆಯರ ಮೇಲಿನ ಅಭಿಮಾನ ಹೆಚ್ಚಿಸುತ್ತಿದೆ ಎಂದರು.  ಮಹಿಳೆಯರ ಅಸ್ಮಿಯತೆಯನ್ನು ಎತ್ತಿ ಹಿಡಿಯೊ ಹಠವಾದಿ ಮಹಿಳೆಯರ ಛಲ ನಿಜಕ್ಕು ಸ್ವಾಗತಾರ್ಹ ಎಂದ ಕಂಬಾರರು ಇಂತಹ ಛಲಗಾರಿಕೆಯುಳ್ಳ ಮಹಿಳಾ‌‌ ಲೇಖಕಿಯರು ಬೇರೆ ಭಾಷೆಯಲ್ಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಳಿದ ಭಾಷೆಗಳಿಗೆ ಕನ್ನಡ ಭಾಷೆಯ ಮಹಿಳಾ ಲೇಖಕಿಯರು ಮಾದರಿಯಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಹಿರಿಯ ಸಾಹಿತಿ ಪ್ರಾಧ್ಯಾಪಕಿ ಡಾ. ಮುಮ್ತಾಜ್ ಬೇಗಂ ಅವರಿಗೆ ಸಮಗ್ರ ಸಾಹಿತ್ಯ ಸಾಧನೆಗಾಗಿ ಕೆ.ಟಿ.ಬನಶಂಕರಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ವಿವಿಧ ಕೃತಿಗಳ ಲೇಖಕಿಯರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಚಿವೆ ರಾಣಿ ಸತೀಶ್, ಸಂಘದ ರಾಜ್ಯಧ್ಯಕ್ಷೆ ಎಚ್. ಎಲ್. ಪುಷ್ಪಾ ಸೇರಿ ಹಲವರು ವೇದಿಕೆಯಲ್ಲಿದ್ದರು.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop