ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025
ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ ಭಾಷೆಗಳಲ್ಲಿ “ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ”ಯನ್ನು ನೀಡುತ್ತಿದೆ. ಅಕಾದಮಿಯಿಂದ ಗುರುತಿಸಲ್ಪಟ್ಟ ಭಾರತೀಯ ಭಾಷೆಗಳಲ್ಲಿ ಅಂದರೆ ಅಸ್ಸಾಮಿ, ಬಂಗಾಳಿ, ಬೋಡೋ, ಡೋಗ್ರಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಅನುವಾದಕರು ಮಾಡಿದ ಅತ್ಯುತ್ತಮ ಅನುವಾದಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಬಹುಮಾನಗಳನ್ನು ಪ್ರತಿಷ್ಠಿತ ಸಮಾರಂಭದಲ್ಲಿ ನೀಡಲಾಗುತ್ತದೆ ಮತ್ತು ರೂ. 50,000/- ಮೊತ್ತ ಮತ್ತು ಫಲಕವನ್ನು ಒಳಗೊಂಡಿರುತ್ತದೆ.
ಸಾಹಿತ್ಯ ಅಕಾದೆಮಿಯು ಮಾನ್ಯತೆ ಪಡೆದ ಎಲ್ಲಾ 24 ಭಾರತೀಯ ಭಾಷೆಗಳಲ್ಲಿ 2025ರ ಸಾಲಿನ ಸಾಹಿತ್ಯ ಅಕಾದಮಿ ಅನುವಾದ ಪ್ರಶಸ್ತಿಗಾಗಿ ಭಾರತೀಯ ಅನುವಾದಕರು, ಅನುವಾದಕರ ಹಿತೈಷಿಗಳು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸುತ್ತದೆ. 2019, 2020, 2021, 2022 ಮತ್ತು 2023 ರಲ್ಲಿ (ಅಂದರೆ, 1 ಜನವರಿ 2019 ಮತ್ತು 31 ಡಿಸೆಂಬರ್ 2023ರ ನಡುವೆ) ಮೊದಲು ಪಕಟವಾದ ಪುಸ್ತಕವನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ. ಅರ್ಜಿ ನಮೂನೆಯೊಂದಿಗೆ ಪ್ರತಿಯೊಂದು ಪುಸ್ತಕದ ಒಂದು ಪ್ರತಿಯನ್ನು ಮೇ 31, 2025 ರೊಳಗೆ ಸಲ್ಲಿಸಬೇಕು.