ದ್ರಾವಿಡ ಭಾಷಾವಿಜ್ಞಾನದ ಪಿತಾಮಹ ಎಂದು ಅಭಿದಾನವನ್ನು ಹೊತ್ತ ಸರ್. ರಾಬರ್ಟ್ ಕಾಲ್ಡ್ ವೆಲ್ ದ್ರಾವಿಡ ಜನ ಸಮುದಾಯಗಳ ಸಾಂಸ್ಕೃತಿಕ ಪರಂಪರೆಯನ್ನು ತೌಲನಿಕವಾಗಿ ಅಮೂಲಗ್ರವಾಗಿ ಅಧ್ಯಯನ ಮಾಡಿದರು. ಒಬ್ಬ ಕ್ರಿಶ್ಚಿಯನ್ ಮಿಷನರಿಯಾಗಿ ಭಾರತಕ್ಕೆ ಬಂದ ಇವರು ಇಲ್ಲಿನ ಜನಜಾತೀಯ ಬುಡಕಟ್ಟು ಜನಾಂಗದ ಸಮುದಾಯಗಳ ಭಾಷಿಕ, ಸಾಂಸ್ಕೃತಿಕ, ಸಾಹಿತ್ಯಿಕ ಅಭ್ಯಾಸವನ್ನು ಮಾಡಿ ದ್ರಾವಿಡರ ಸಂಸ್ಕೃತಿಯನ್ನು ವಿಶ್ಲೇಷಣೆಗೆ ಒಳಪಡಿಸಿದರು. ಇವರ ಅಸಾಧಾರಣ ಕರ್ತೃತ್ವ ಶಕ್ತಿಯಲ್ಲಿ ದಕ್ಷಿಣ ಭಾರತದ ಭಾಷಾ ವರ್ಗದ ಅಥವಾ ಕುಟುಂಬದ ಮೂಲ ನೆಲೆಗಳನ್ನು ವಿವೇಚಿಸುವ ತೌಲನಿಕ ಕ್ರಮದ ಬೃಹತ್ ವ್ಯಾಕರಣ ಗ್ರಂಥವನ್ನು ರಚಿಸಿದರು. ಇಂಡೋಯುರೋಪಿಯನ್ ಮತ್ತು ಭಾಷಾವಿಜ್ಞಾನದ ಪರಿಕಲ್ಪನೆಗಳು ಹೆಚ್ಚು ಪ್ರಚಲಿತವಿದ್ದ ಕಾಲದಲ್ಲಿ ಇವರು ನಡೆಸಿದ ಅಧ್ಯಯನ ಭಾಷಾವಿಜ್ಞಾನಕ್ಕೆ ಬಹುದೊಡ್ಡ ಕೊಡುಗೆ ಎಂದು ಇವರನ್ನು ದ್ರಾವಿಡ ಭಾಷಾ ವಿಜ್ಞಾನದ ಪಿತಾಮಹಾ ಎಂದು ಕರೆಯಲಾಗಿದೆ. ದ್ರಾವಿಡ ಭಾಷೆಗಳ ಅಧ್ಯಯನದಲ್ಲಿ ಮೊದಲ ದಾಖಲೆ ನಿರ್ಮಿಸಿದ ಇವರು ಹಾಗಾಗಿಯೇ ಚಿರಸ್ಥಾಯಿಯಾದರು. ಕಾಲ್ಡ್ ವೆಲ್ ಅವರು ಉತ್ತರ ಐರ್ಲೆಂಡ ದೇಶದಲ್ಲಿ ೧೮೧೪ ಮೇ ೭ ರಂದು ಹುಟ್ಟಿದರು. ಗ್ಲಾಸ್ಗೊ ವಿಶ್ವವಿದ್ಯಾನಿಲಯದಲ್ಲಿ ೧೮೩೮ರ ವರೆಗು ಶಿಕ್ಷಣ ಪಡೆದರು. ಗ್ರೀಕ್, ಲ್ಯಾಟಿನ್ ಭಾಷೆಗಳನ್ನು ಆ ಹೊತ್ತಿಗೆ ಕಲಿತಿದ್ದರು. ೧೯೩೮ ದಿಲ್ಲಿ ಭಾರತಕ್ಕೆ ಬಂದು ಮದ್ರಾಸಿನಲ್ಲಿ ನೆಲೆಸಿದರು. ಮೊದಲು ಇವರು ದಕ್ಷಿಣ ಮೂಲ ದ್ರಾವಿಡ ಭಾಷೆಯಾದ ತಮಿಳು ಭಾಷೆಯನ್ನು ಕಲಿತರು. ತಮಿಳು ಜನರ ಸಂಸ್ಕೃತಿ ಸಾಹಿತ್ಯಕ ಕೊಡುಗೆಗಳನ್ನು ಪಠ್ಯಗಳನ್ನು ಅಭ್ಯಾಸ ಮಾಡಿದರು. ಹಾಗೆ ತಮಿಳಿನ ಜೊತೆಗೆ ಇತರ ದ್ರಾವಿಡ ಲಿಪಿ ಇರುವ ಭಾಷೆಗಳು ಮತ್ತು ಲಿಪಿ ರಹಿತ ಭಾಷೆಗಳ ಕುರಿತು ಅಧ್ಯಯನ ಮಾಡುತ್ತಾ ದೀರ್ಘಕಾಲದ ತಮ್ಮ ಅನುಭವದಿಂದ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ ಎಂಬ ಗ್ರಂಥವನ್ನು ೧೮೫೬ರಲ್ಲಿ ಪ್ರಕಟಿಸಿದರು. ತಮಿಳರನ್ನು ಇವರು ಪೂರ್ವದ ಗ್ರೀಕರೆಂದು ಕರೆದರು. ತಮ್ಮ ಹಡಗಿನ ಪ್ರಯಾಣದಲ್ಲಿ C.P.Brown ಅವರಿಂದ ತೆಲುಗು ಮತ್ತು ಸಂಸ್ಕೃತ ಭಾಷೆಗಳನ್ನು ಕಲಿತರು.
ಕಾಲ್ಡ್ ವೆಲ್ ಅವರು ತೌಲನಿಕ ಭಾಷಾವಿಜ್ಞಾನದ ಮೂಲಕ ದ್ರಾವಿಡ ಭಾಷೆಗಳು ಸ್ವತಂತ್ರ ಎಂದು ನಿರೂಪಿಸಿ ತೋರಿಸಿದರು. ಇವು ಅಲ್ಲಿಯವರೆಗೂ ಇಂಡೋ ಆರ್ಯನ್ ಅಥವಾ ಇಂಡೋ ಯುರೋಪಿಯನ್ ವರ್ಗದ ಅಡಿಯಲ್ಲಿ ದಕ್ಷಿಣ ಭಾರತದ ಭಾಷೆಗಳನ್ನು ಗುರುತಿಸಲಾಗುತ್ತಿತ್ತು. ಅವುಗಳಿಗಿಂತ ಭಿನ್ನವಾದ ಭಾಷಾವರ್ಗ ಎಂದು ಹೇಳುವುದರ ಮೂಲಕ ದ್ರಾವಿಡ ಸಂಸ್ಕೃತಿಯ ಭಾಷಿಕ ಕೊಡುಗೆ ಮತ್ತು ಲಿಪಿ , ವ್ಯಾಕರಣದ ಮೂಲಭೂತ ಒಳ್ಪುನುಡಿಗಳ ರಚನೆಯಲ್ಲಿನ ಸ್ವಂತಿಕೆಯನ್ನು ಒಳಗೊಂಡಿವೆ. ವಾಶಿಂಕವಾಗಿ ದ್ರಾವಿಡರ ಭಾಷೆಗಳು ಕಂಡುಕೊಂಡ ಲಿಪಿಗಳು ಮತ್ತು ವಾಸ್ತವದ ಸೃಜನಶೀಲ ಆಕರಗಳ ಒಳನೋಟಗಳಿಂದ ಅವು ಜಗತ್ತಿನ ಇತರ ಭಾಷಾವರ್ಗಗಳಿಗಿಂತ ವಿಭಿನ್ನವಾಗಿ ಸ್ವಂತಿಕೆಯನ್ನು ಪಡೆದಿವೆ ಎಂಬದು ಅವರ ಸಂಶೋಧನೆಯ ಫಲಶೃತಿಯಾಗಿದೆ. ಇದಕ್ಕೂ ಮುಂಚಿತವಾಗಿ ಎಲ್ಲಿಸ್ ದ್ರಾವಿಡ ಭಾಷಾ ವಿಜ್ಞಾನದ ಜನಕರೆನಿಸಿದರೂ, ಅದರ ವಿಸ್ಕೃತ ರೂಪದ ಅಧ್ಯಯನ ಚರ್ಚೆಯನ್ನು ಕಾಲ್ಡ್ ವೆಲ್ ಪರಿಶೀಲಿಸಿ ಮುಂದುವರಿಸಿದರು. ೧೮೭೫ರಲ್ಲಿ ತೌಲನಿಕ ವ್ಯಾಕರಣ ಕೃತಿಯನ್ನು ಪರಿಷ್ಕರಿಸಿ ಪ್ರಕಟಿಸಿದರು. ೧೮೮೧ ರಲ್ಲಿ “History of Tirunelveli Dist ” ಎಂಬ ಕೃತಿಯನ್ನು ಪ್ರಕಟಿಸಿದರು. ದಕ್ಷಿಣ ಭಾರತ ತಿರುನೆಲ್ವೇಲಿಯ ಇತಿಹಾಸ ಮತ್ತು ಚರಿತ್ರೆಯ ಅಧ್ಯಯನಕ್ಕೆ ಈ ಕೃತಿ ತನ್ನ ಕೊಡುಗೆಯನ್ನು ನೀಡಿದೆ. “A Comparative grammar of Dravidian or South Indian Family of Languages” ಕೃತಿ ಇವರು ಬಹಳ ಮಹತ್ವದ ಕೃತಿಯಾಗಿದೆ.
ದ್ರಾವಿಡ ಭಾಷಾವರ್ಗದ ಸೋದರ ಸಂಬಂಧವನ್ನು ಇಂಡೋಆರ್ಯನ್ ಭಾಷೆಗಳೊಂದಿಗೆ ಸಂಬಂಧ ಕಲ್ಪಿಸಿ ತೌಲನಿಕ ಕ್ರಮದಲ್ಲಿ ವಿಶ್ಲೇಷಣೆ ಮಾಡುತ್ತ ಅವುಗಳ ಶಬ್ದಶಾಸ್ತ್ರ ,ಧ್ವನಿಶಾಸ್ತ್ರ Phoneticlogy ಧ್ವನಿಮಾಶಾಸ್ತ್ರ Phonemelogy, ಆಕೃತಿ – ಆಕೃತಿಮಾ ಶಾಸ್ತ್ರ Morph and morphemelogy, ವಾಕ್ಯರಚನಾ ಶಾಸ್ತ್ರ Sentext Structure ಹಾಗೂ ಇಂಡೋಆರ್ಯನ್ ಭಾಷಾವರ್ಗದಲ್ಲಿ ದ್ರಾವಿಡ ಪದಗಳ ಕೊಡುಕೊಳ್ಳುವಿಕೆ ಸ್ವೀಕರಣ ಮೊದಲಾದ ವಿಚಾರಗಳನ್ನು ಬಹಳ ಸುದೀರ್ಘವಾಗಿ ಚರ್ಚಿಸುತ್ತದೆ. ಇವರ ಸಂಶೋಧನೆಯ ಫಲಿತದ ತತ್ವಗಳು ಇಂದಿಗೂ ಅನ್ವಯಿಕ ಭಾಷಾವಿಜ್ಞಾನದ ಪಠ್ಯಗಳು ಒಂದು ಅಧ್ಯಯನ ಶಿಸ್ತಾಗಿ ಚಾಲ್ತಿಯಲ್ಲಿವೆ. ಅವರ ದೂರದೃಷ್ಟಿಯ ವೈಶಿಷ್ಟ್ಯತೆ ಈ ಮಾದರಿಯದು. ದ್ರಾವಿಡ ತಿರವಿಡ ಎಂಬ ಪದವು ಶಾಶ್ವತವಾಗಿ ನೆಲೆಸಲು ಅವರು ಅವರು ಮಾಡಿದ ಹೊಸ ವ್ಯಾಕರಣ ಆವಿಷ್ಕಾರ ಸಿದ್ದಾಂತಗಳು ಅನೇಕ ಭಾಷಾವಿಜ್ಞಾನಿಗಳ ಕಣ್ಣು ತೆರೆಸಿದವು. ಅದುವರೆಗೂ ದಕ್ಷಿಣ ಭಾರತದ ಮೂಲದ್ರಾವಿಡ ತಮಿಳು ಮತ್ತು ಇತರ ದ್ರಾವಿಡ ಭಾಷೆಗಳು ಹಾಗೂ ಅದರ ಉಪಶಾಖೆಯ ಭಾಷೆಗಳು ಇಂಡೋ ಆರ್ಯನ್ ಸಂಸ್ಕೃತ ಭಾಷಾ ಮೂಲದಿಂದ ಜನ್ಯವಾದದ್ದು ಎಂಬ ಭಾವನೆ ಧೃಡವಾಗಿತ್ತು. ಇವರ ಅಧ್ಯಯನ ಸಿದ್ಧಾಂತಗಳ ಹೊಸಬೆಳಕಿನ ನಂತರ ಅವು ಸ್ವತಂತ್ರ ಭಾಷೆಗಳು ಎಂದು ರುಜುವಾತು ಮಾಡಲಾಯಿತು. ಮೂಲ ದ್ರಾವಿಡ ಭಾಷೆಯಿಂದ ಬಳಿವರೆದ ರೆಂಬೆಕೊಂಬೆಗಳು ಎಂಬುದನ್ನು ಆಧುನಿಕ ಎನ್ನಬಹುದಾದ ತೌಲನಿಕ ಭಾಷಾ ವಿಜ್ಞಾನ ವ್ಯಾಕರಣ ಶಾಸ್ತ್ರಗಳ ಸಹಾಯದಿಂದ ಓರೆಹಚ್ಚಿ ಪರಿಶೀಲಿಸಿ ಭಾಷೆಯ ಮೂಲ ಘಟಕಗಳನ್ನು ಅಧ್ಯಯನ ಮಾಡಿ ಅವುಗಳ ರಚನೆಗಳನ್ನು ಬಾಹ್ಯ – ಅಂತರ ಪದಕೋಶಗಳಿಂದ ನಿರೂಪಿಸಲಾಗಿದೆ. ಬುಡಕಟ್ಟು ಜನಾಂಗಿಕ ಭಾಷೆಗಳೆಂದು ಕರೆಯುತ್ತಿದ್ದ ವಾಡಿಕೆ ಹೋಗಿ ಅವು ರಚನಾ ಸಾಮರ್ಥ್ಯದಿಂದ ಅಕ್ಷರ ಸಂಸ್ಕೃತಿಯಿಂದ ಸರ್ವ ತಂತ್ರ ಸ್ವತಂತ್ರ ಎಂದು ದ್ರಾವಿಡ ಭಾಷೆಗಳಿಗೆ ಜಗತ್ತಿನ ಭಾಷಾವರ್ಗದಲ್ಲಿ ಸ್ಥಾನಮಾನ ಕಲ್ಪಿಸಲಾಯಿತು. ಲಿಪಿ ಇರುವ ತಮಿಳು,ಕನ್ನಡ, ಮಲೆಯಾಳಂ,ತೆಲುಗು,ತುಳು,(ಬ್ರಾಹುಯಿ) ಭಾಷೆಗಳಂತೆ ಲಿಪಿ ಇಲ್ಲದ ಅನೇಕ ದ್ರಾವಿಡ ಭಾಷೆಗಳ ಲಕ್ಷಣವನ್ನು ಅವುಗಳ ಸೌಮ್ಯ ವೈಷಮ್ಯ ಗುಣಗಳಿಂದ ಅವಲೋಕಿಸಿ ನಿರೂಪಿಸುವ ಮಹತ್ವಪೂರ್ಣವಾದ ಕೆಲಸವನ್ನು ಶ್ರೀಯುತ ರಾಬರ್ಟ್ ಬಿಷಪ್ ಕಾಲ್ಡ್ ವೆಲ್ ಅವರು ಮಾಡಿದರು. ಇವರ ಸೇವೆಯನ್ನು ಭಾಷೆ ಮತ್ತು ಸಾಹಿತ್ಯ ಕ್ಷೇತ್ರ ನೆನಪಿಸಿಕೊಳ್ಳುವಂತಿದೆ ಎಂದರೆ ಅತಿಶಯೋಕ್ತಿಯಲ್ಲ. ಅಂಬಾರಿ ಮನ್ನಣೆಯ ಗೌರವ. ದೂರದ ಯಾವುದೋ ದೇಶದಿಂದ ಬಂದು ನಮ್ಮ ದ್ರಾವಿಡ ಭಾಷೆಗಳ ಬಗ್ಗೆ ಅವರು ಕೈಗೊಂಡ ಅಧ್ಯಯನ ಸ್ಮರಣೀಯವಾದದು.