ಕನ್ನಡ ಸಾಹಿತ್ಯ ಕೃಷಿ ಕಾನನದ ಹೊಸ ಪ್ರೇಮಾಂಕುರ “ಗಜಲ್” – ದೇವೇಂದ್ರ ಕಟ್ಟಿಮನಿ

(ಕನ್ನಡದಲ್ಲಿ ಗಜಲ್ ಬೆಳಕಿಗೆ ಬರಲು ಕಲ್ಯಾಣ ಕರ್ನಾಟಕ ಭಾಗದ ಶಾಂತರಸ ಹೆಂಬೇರಾಳೂ, ಎಚ್ಎಸ್ ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಇವರ ಶ್ರಮದ ಫಲವಾಗಿ ಕನ್ನಡ ಸಾಹಿತ್ಯದಲ್ಲಿ ಗಜಲನ ಹೊಸ ಅಧ್ಯಾಯವೇ ಪ್ರಾರಂಭವಾಯಿತು. ಈಗ ಯುವ ಗಜಲ್‌ ಕಾರರು ಹೊಸ ಚಿಗುರಂತೆ, ಬಿರುಗಾಳಿಯಲ್ಲಿ ರೆಕ್ಕೆ ಬೀಸುವ ಹೊಸ ಹಕ್ಕಿಯಂತೆ ಗುರಿಯತ್ತ. ಗಜಲ್ ನ ಮೂಲ ರಸವೇ ಪ್ರೇಮ, ಅನುರಾಗ, ಮೋಹ ,ಹತಾಶೆ, ಬಂಡಾಯದ ಭಾವನೆಗಳು ವ್ಯಕ್ತಪಡಿಸುವುದು. ಹಾಗೆ ಈಗ ಮೊದಲ ಗಜಲ್‌ ಸಂಭ್ರಮ)

ಕವಿತೆ ಪ್ರತಿಯೊಂದು ಭಾಷೆ ಹಾಗೂ ಪ್ರತಿಯೊಬ್ಬರ ಭಾವನೆಯ ಉಪಯೋಗಿತ ಬರವಣಿಗೆಯ ಒಂದು ವಿಶಿಷ್ಟ ಪದ ಪುಂಜ ಕಲೆಯೇ ಕವಿತೆ. ವಿವಿಧ ವೈಶಿಷ್ಟತೆಯ, ಹಲವು ಪ್ರಕಾರದ ಸಾಹಿತ್ತಿಕ ಕೌಶಲ್ಯಗಳಾದ ಚಿತ್ರಕಲೆ, ನಾಟಕ, ಕಥೆ, ಹಾಡುಗಳಂತಹ ಭಾವನಾತ್ಮಕ ಭಾಷ್ಯ ಕಲೆಯೇ ಸಾಹಿತ್ಯ ಅದರಲ್ಲೂ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳ ಬಳಸಿ ರಚಿಸುವ ಕಲೆ ಈ ಕವಿತೆ ತನ್ನದಾಗಿಸಿಕೊಂಡಿದೆ.

ಕನ್ನಡ ಸಾಹಿತ್ಯ ಲೋಕದ ಪರಂಪರೆಯಲ್ಲಿ, ಪ್ರಾಚೀನ ಕಾಲದ ಶಾಸನಗಳ ಹಿಡಿದು ಇಂದಿನ ಆಧುನಿಕ ಶೈಲಿಯ ಹನಿಗವನಗಳ ವರೆಗೆ ಅನೇಕ ರೀತಿಯ ಸಾಹಿತ್ಯ ಪ್ರಕಾರಗಳು ಕನ್ನಡ ಸಾಹಿತ್ಯ ಕಂಡಿದೆ. ಜನಪದ ಸಾಹಿತ್ಯದ ನಂತರ ಶಾಸನಗಳು ಸಾಹಿತ್ಯ ಪರಂಪರೆ ಬಿತ್ತುವ ಸುಂದರ ಸಾಕ್ಷಿಗಳಾಗಿವೆ. ಕನ್ನಡದ ಮೊದಲ ಪುಸ್ತಕವೆಂದೇ ಖ್ಯಾತಿಯಾಗಿರುವ ಅಮೋಘವರ್ಷ ನೃಪತುಂಗರು ಬರೆದ ಕವಿರಾಜ್ಯಮಾರ್ಗವು ನಮ್ಮ ಕನ್ನಡ ಸಾಹಿತ್ಯದ ಬೇರು ಇದಾಗಿದೆ. ಇದಾದ ನಂತರ ಕನ್ನಡದ ಮನಸುಗಳ ಭಾವನೆಗೆ ಬಗೆಯ ಬಗೆಯ ಸ್ವರೂಪಗಳು ತಾಳಿ ಅನೇಕ ವಿಧವಿಧದ ಸಾಹಿತ್ಯ ಪ್ರಕಾರಗಳು ಕಾಲದಿಂದ ಕಾಲಕ್ಕೆ ಉಗಮಿಸುತ್ತಲೇ ಇವೆ. ಕಾವ್ಯ, ಕಥೆ, ನಾಟಕ, ಪ್ರಬಂಧ, ಲಲಿತ, ಪ್ರಬಂಧ ,ಕಾದಂಬರಿ, ಸಣ್ಣ ಕಥೆಗಳು ,ಚುಟುಕುಗಳು, ತ್ರಿಪದಿಗಳು, ಝನ್ ಕವಿತೆಗಳು ,ಹೈಕುಗಳು, ಮುಂತಾದ ಸಾಹಿತ್ಯ ಪ್ರಕಾರಗಳು ಕನ್ನಡದೊಡಲು, ಸೇರಿ ಕನ್ನಡ ಸಾಹಿತ್ಯದ ಶೃಂಗಾರ ದ್ವಿಗುಣಗೊಂಡಿದೆ. ಅಂತಹುದೇ ವಿಶಿಷ್ಟ ಮತ್ತು ಸರಳ ಸಂಪನ್ನತೆಯ ಛಂದಸ್ಸಿನ ಸಾಹಿತ್ಯ ಪ್ರಕಾರವೇ ಗಜಲ್.

19 20ನೇ ಶತಮಾನದ ಅನೇಕರು ತಾವು ಬರೆದ ಪ್ರೇಮ ಗೀತೆಗಳನ್ನು ಗಜಲ್ ಎಂದು ಕರೆಯತೊಡಗಿದರು. ಆದರೆ ಅವು ಗಜಲ್ಗಳಾಗಲಿಲ್ಲ. ಅವು ಬರಿ ಪ್ರೇಮ ಗೀತೆಗಳಾಗಿ ಉಳಿದವು. ಕಾರಣ ಗಜಲ್ ಒಳಗೊಂಡಿರುವ ಛಂದೋಬದ್ಧ ಗುಣಲಕ್ಷಣಗಳು ಕಾಣಸಿಗಲಿಲ್ಲ. ಮುಂದೆ ಡಾ. ಸಿದ್ದಯ್ಯ ಪುರಾಣಿಕ್. ಡಾ. ಕೆ ಮುದ್ದಣ್ಣ. ಜಯತೀರ್ಥ ಪುರೋಹಿತ. ಡಾ. ಪಂಚಾಕ್ಷರಿ ಹಿರೇಮಠ್. ದೇವೇಂದ್ರ ಕುಮಾರ್ ಹಕಾರಿ. ರಾಘವೇಂದ್ರ ಇಟಗಿ. ಮುಂತಾದವರೆಲ್ಲರ ಕನ್ನಡ ಹಾಗೂ ಉರ್ದು ದ್ವಿಭಾಷೆ ಪರಿಣಿತ ಸಾಹಿತ್ಯ ವಿದ್ವಾಂಸರಾಗಿ, ಉರ್ದು ಮತ್ತು ಕನ್ನಡ ಸಾಹಿತ್ಯದ ಬೆಸುಗೆ ಗಟ್ಟಿಗೊಳಿಸಿದರು ಅಲ್ಲದೆ ಗಜಲ್ ಸಾಹಿತ್ಯಕ್ಕೆ ಹೊಸ ಮೆರಗು ತಂದು ಕೊಡುವ ಮುನ್ನುಡಯುನ್ನು ಬರೆದು ಕೊಟ್ಟರು.

ಅರೇಬಿಕ್ ಸಾಹಿತ್ಯ ಪ್ರಕಾರದಲ್ಲಿ ಭಾವಗೀತೆ, ಪ್ರೇಮ ಗೀತೆ ,ಎಂಬ ಅರ್ಥದ ಕವಿತೆಯ ಛಂದೋಬದ್ಧ ಸಾಹಿತ್ಯದ ಮಾದರಿ, ಅರೇಬಿಕ್ ನಿಂದ ಬಹುಮನಿ ಸಾಮ್ರಾಜ್ಯದ ಹಸನ್ ಗಂಗೂವಿನ ಆಸ್ಥಾನದ ಕವಿ ಸೂಫಿ ಸಂತ ಖಾಜಾ “ಬಂದೇ ನವಾಜ್” ಅರೇಬಿಕ್ನ ಗಜಲ್ ಮಾದರಿಯ ಕವಿತೆಗಳು ಉರ್ದುವಿನಲ್ಲಿ ರೂಪ ತಾಳುವಂತೆ ಪ್ರಯತ್ನಿಸಿದರು. ಮುಂದೆ ಇದು ಅನೇಕ ಉರ್ದು ಗಜಲ್ಕಾರರಾದ ವಾಲಿ ಮೊಹ್ಮದ್‌ ವಾಲಿ, ಖಾಜಾ ಮೀರ್‌ ದರ್ದ್‌, ಮೀರ್‌ ತಾಕಿ ಮೀರ್‌, ಮೊಹ್ಮದ್‌ ಇಕ್ಬಾಲ್‌, ಮಿರ್ಜಾ ಅಸಾದುಲ್ಲಾ ಖಾನ್‌, ರಾಹತ್‌ ಇಂದೋರಿ, ಜಾವೇದ್‌ ಅಕ್ತರ್‌, ಇನ್ನು ಅನೇಕ ಗಜಲ್‌ ಕಾರರಿಂದ ಮೇರು ಸಾಹಿತ್ಯ ಪ್ರಕಾರವಾಗಿ ಹೊರಹೊಮ್ಮಿ ನಿಂತಿತ್ತು.

ಉರ್ದು ಗಜಲ್ ಗಳ ಪ್ರಖರತೆಯಂತೆ ಕನ್ನಡದ ಗಜಲ್‌ ಗಳು ಖ್ಯಾತಿ ಹೊಂದದಿದ್ದರೂ, ಕ್ರಾಂತಿಕಾರಿ ಬೆಳವಣಿಗೆ ಕಂಡಿದ್ದು, ಕನ್ನಡ ಸಾಹಿತ್ಯಕ್ಕೆ ಮೆರಗು ತಂದಿತ್ತು. ಕನ್ನಡ ಗಜಲ್‌ ಗಳ ಮೂಲ ಉಗಮ ಸ್ಥಾನವೇ ಈ ನಮ್ಮ ಕಲ್ಯಾಣ ಕರ್ನಾಟಕ. (ಹಳೆಯ ಹೈದರಾಬಾದ್ ಕರ್ನಾಟಕ} ನಿಜಾಮ್ ಉಸ್ಮಾನ್ ಅಲಿ ಖಾನ್ ಅವರ ಆಡಳಿತದಲ್ಲಿ ತಮ್ಮ ಆಡಳಿತ ಭಾಷೆಯಾಗಿ ಉರ್ದು (ಮೋಡಿ) ಅಳವಡಿಸಿದರೂ. ಇದರ ಪರಿಣಾಮವಾಗಿ ಇಲ್ಲಿನ ಭಾಷೆ ವೈಶಿಷ್ಟತೆ ವಿಭಿನ್ನವಾಗಿದೆ. ಅಲ್ಲದೆ ಅರೇಬಿಕ್ ನಿಂದ ಉರ್ದು, ಉರ್ದುವಿನಿಂದ ಕನ್ನಡಕ್ಕೆ ಸಾಗಿ ಬಂದ ಕಾರಣದಿಂದಾಗಿ, “ಸಾಹಿತ್ಯದ ಈ ನೆಲ, ಕೊಟ್ಟಿದೆ ಗದಲ್ ಫಲ.”

ಉರ್ದುವಿನ ಎಲ್ಲಾ 32 ಸಾಹಿತ್ಯ ಪ್ರಕಾರಗಳಲ್ಲಿ, ಅತ್ಯಂತ ಶ್ರೇಷ್ಠ ಪ್ರಕಾರವೇ ಗಜಲ್. ಇದರ ಎಲ್ಲ ವೈಶಿಷ್ಟತೆಗಳು ಕನ್ನಡಕ್ಕೆ ತಂದು, ಕನ್ನಡದ ಹಾವ ಭಾವಕ್ಕೆ ಹೊಂದುವಂತೆ ಕಲೆ ಕರಗತಗೊಳಿಸಿ, ಇಲ್ಲಿನ ಸಾಂಸ್ಕೃತಿಕ ರೀತಿ ರಿವಾಜು ಗಜಲ್ ಗಳಾಗಿ ರೂಪಗೊಳ್ಳಲು ಅದರಲ್ಲಿನ ಛಂದೋಬದ್ದಗಳು. ಕನ್ನಡದಲ್ಲಿ ಗಜಲ್ಗಳಾಗಿ ಬೆಳಕಿಗೆ ಬರಲು ಕಲ್ಯಾಣ ಕರ್ನಾಟಕ ಭಾಗದ ಗಜಲ್ ಕಾರರೆಂದರೆ, ಶಾಂತರಸ ಹೆಂಬೇರಾಳೂ, ಎಚ್ಎಸ್ ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಇವರ ಶ್ರಮದ ಫಲವಾಗಿ ಕನ್ನಡ ಸಾಹಿತ್ಯದಲ್ಲಿ ಗಜಲನ ಹೊಸ ಅಧ್ಯಾಯವೇ ಪ್ರಾರಂಭವಾಯಿತು. ಗಜಲ್ ಸೃಷ್ಟಿಗೆ ಅದರ ವೈಶಿಷ್ಟ್ಯತೆಗಳೇ ಕಾರಣ. ಗಜಲ್ ನ ಮೂಲ ರಸವೆ ಪ್ರೇಮ, ಅನುರಾಗ, ಮೋಹ ,ಹತಾಶೆ, ಬಂಡಾಯದ ಭಾವನೆಗಳು ವ್ಯಕ್ತಪಡಿಸುವುದು.

ಸಾಮಾನ್ಯವಾಗಿ ಗಜಲ್‌ ದ್ವಿಪದಿಗಳಿಂದ ಕೂಡಿರುತ್ತದೆ. ಒಂದು ದ್ವಿಪದಿಗೆ ಒಂದು ಶೇರ್ ಎಂತಲೂ, 5 ರಿಂದ 25 ಶೇರುಗಳ ಗುಶ್ಚ ಒಂದು ಗಜಲ್ ಎನಿಸಿಕೊಳ್ಳುತ್ತದೆ ವಿವಿಧ ಮಾದರಿಯ ಗಜಲ್‌ ಗಳು ರೂಪ ತಾಳಿದರೂ, ಗಜಲಿನಲ್ಲಿ ಮುಖ್ಯವಾಗಿ ಮತ್ಲಾ ರಧಿಪ್‌, ಕಾಫಿಯ ಮತ್ತು ಮಕ್ತಾ ಈ ನಾಲ್ಕು ಅಂಶಗಳು ಗಜಲಿನ ಶೃಂಗಾರಗಳು. ಗಜಲಿನ ದ್ವಿಪದಿ ಮತ್ಲಾ ವಾದರೆ, ಗಜಲಿನುದ್ದಕ್ಕೂ ಬಳಕೆಯಾಗುವ ಸಾಮಾನ್ಯ ಅಂತ್ಯ ಪದ ರಧಿಪ್‌, ಗಜಲಿನಲ್ಲಿ ರಧಿಪ್‌ ಗಿಂತ ಮುಂಚೆ ಸ್ಥಿತಗೊಂಡಿರುವ ಪ್ರಾಸ ಪದವೇ ಕಾಫಿಯಾ. ಈ ಕಾಫಿಯದಲ್ಲಿನ ಒಳಗೊಂಡ ಪ್ರಾಸಕ್ಕೆ “ರವಿ” ಎಂದು ಕರೆಯುತ್ತಾರೆ. ಗಜಲಿನ ಕೊನೆಯ ದ್ವಿಪದಿಗೆ ಮಕ್ತಾ ಎನ್ನುತ್ತೇವೆ. ಇದರ ಯಾವುದೇ ಭಾಗದಲ್ಲಿ ಕವಿ ತನ್ನ ಕಾವ್ಯನಾಮ ಬಳಸಿಕೊಳ್ಳಬಹುದು ಇದಕ್ಕೆ ತಖಲ್ಲೂಸ್‌ ಅಥವಾ ಶೇಯರನಾಮ ಎಂದು ಕರೆಯುತ್ತಾರೆ. ಇಂತಹ ವಿಶಿಷ್ಟ ಛಂದಸ್ಸುಗಳು ಒಳಗೊಂಡ ಗಜಲ್ ಬೇರೆ ಬೇರೆ ಮಾದರಿಗಳಲ್ಲಿ ಬರೆಯುತ್ತಾರೆ. ಅವುಗಳಲ್ಲಿ ರದೀಪ್ ಸಹಿತ ಗಜಲ್, ರಧಿಪ್ತ ರಹಿತ ಗಜಲ್‌, ಅಜಾದ್ ಗಜಲ್, ನಜರಿ ಗಜಲ್ ,ಮುಸಲ್ ಸಿಲ್ ಗದಲ್, ಗೈರು ಮುಸಲ್ಸಿಲ್ ಗಜಲ್ , ಜನ್ ಗಜಲ್, ತೆರೆಹಿ ಗಜಲ್‌, ಹೀಗೆ ಅನೇಕ ರೀತಿಯ ಗಜಲ್ ಗಳು ಬಳಕೆಯಲ್ಲದ್ದು, ಬರೆಯುವವರ ಹೋಸ ಹಸಿರಾಸೆ ಇಮ್ಮಡಿಗೊಳ್ಳಿಸುತ್ತಿದೆ. ಗಜಲಿನ ಪ್ರತಿ ಪದಗಳಲ್ಲೂ ಹೊಸತನದ ಸಂಗೀತ ಸ್ವರಗಳು ನಿನಾಧಿಸುತ್ತವೆ. ಸರ್ವರಲ್ಲೂ ಸಾಮರಸ್ಯ ತಂದು ಕೊಡುವ ಈ ಕನ್ನಡದ ಗದಲ್ ಜನಿತ ಈ ಕಲ್ಯಾಣ ನಾಡಿನಲ್ಲಿ ಗಜ್ಜಲ್ ಸಮ್ಮೇಳನದ ಮೂಲಕ ಗಜಲ್ ಸಂಭ್ರಮ ಸನ್ನಿಹಿತ. ಇದೆ ಭಾನುವಾರ 25ನೇ ಅಗಸ್ 2024 ರಂದು ಕಲಬುರ್ಗಿ ವಿಶ್ವವಿದ್ಯಾಲಯದ ಮೊದಲ ಗಜಲ್ ಸಮ್ಮೇಳನ, ಗಜಲ್ ಕಾರರಿಗೆ ಸಾಹಿತ್ಯ ಸಂಭ್ರಮದ ಹಬ್ಬ. ನಮ್ಮ ನಿಮ್ಮೆಲ್ಲರ ನಡುವೆ ಆಂತರಿಕ ತುಡಿತ, ಜೀವನದ ಅಸ್ಥಿರತೆ, ಪ್ರೀತಿ ,ಸಹನೆ, ಅನುರಾಗ,, ಬಂಡಾಯ ವೈಚಾರಿಕತೆಯ, ಹೊಸ ಅಲೆಗಳು ಸಂಭಾಸಿಸುವಂತೆ ಮಾಡಲಿ. ಮತ್ತೆ ಮತ್ತೆ ಕನ್ನಡ ಸಾಹಿತ್ಯ ಸಿರಿ ಹಸಿರುಟ್ಟ ವನದೊಳಗೆ ಹೊಸ ಪ್ರೇಮಾಂಕುರದಂತೆ ಗಜಲ್‌ ಕಂಗೊಳಿಸಲಿ ಎಂದು ಹಾರೈಸುತ್ತಾ.

ಗುರಿ ನೆಟ್ಟು ಬಿಲ್ಲಿಗಂಟಿದ ಹೊಸ ಬಾಣದಂತೆ, ಗರಡಿಯಲ್ಲಿ ತೊಡೆತಟ್ಟುವ ಹೊಸ ಪೈಲ್ವಾನನಂತೆ,
ಬಿರುಗಾಳಿಗೆ ರೆಕ್ಕೆ ಬೀಸುವ ಹೊಸ ಹಕ್ಕಿಯಂತೆ, ಮತ್ತೆ ಮತ್ತೆ ಇಣುಕುವ ಹೊಸ ಚಿಗುರಿನಂತೆ ಈ ಗಜಲ್.

ಚಂದಾದಾರರಾಗಿ
ವಿಭಾಗ
4 ಪ್ರತಿಕ್ರಿಯೆಗಳು
Inline Feedbacks
View all comments
like777
25 January 2026 00:50
vn666vn
6 January 2026 04:24

Alright folks, curious about vn666vn. Anybody got some experience with this site? Share your thoughts! vn666vn

gamevip68
31 December 2025 21:50

Gamevip68, It’s alright and it’s got some good points but I wouldn’t go shouting from the rooftops about it. Worth a look I thought. Give it a go if you are bored for sure. To the website: gamevip68

10betmexico
21 December 2025 05:23

10bet Mexico, huh? Pretty solid all around. Good sports coverage, and the casino side is decent too. I had a good experience betting on football there. Plus, their customer service was quick and helpful when I had a question. Give ’em a try!: 10betmexico

0
    0
    Your Cart
    Your cart is emptyReturn to Shop