ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಶಾಖೆ ಮತ್ತು ಜಿಲ್ಲಾ ಆಸ್ಪತ್ರೆ ಸಹಕಾರ ನೀಡಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರಿನ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ವಹಿಸುವರು. ಯುವಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವಕವಿ ಸೂರ್ಯಕೀರ್ತಿ ಅವರು ವಹಿಸಲಿದ್ದಾರೆ. ಯುವಕವಿಗೋಷ್ಠಿಯ ನಿರ್ವಹಣೆಯನ್ನು ಹಿರಿಯ ಪತ್ರಕರ್ತರಾದ ಗಣೇಶ ಅಮೀನಗಡ ಅವರು ಮಾಡಲಿದ್ದಾರೆ. ಇದೆ ಕಾರ್ಯಕ್ರಮದಲ್ಲಿ ಮಧ್ಯಾಹ್ನ ೨ ಗಂಟೆಗೆ ಡಾ. ನಟರಾಜ್ ಹುಳಿಯಾರ್ ಅವರು “ಕಾವ್ಯ ಎನ್ನುವುದು ಎಲ್ಲಿದೆ?” ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಅಸ್ಗರ್ ಬೇಗ್, ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳಾದ ಕರಿಯಪ್ಪ ಎನ್., ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರುಗಳಾದ ಪಿ. ಚಂದ್ರಿಕಾ, ಡಾ. ರವಿಕುಮಾರ್ ಬಾಗಿ, ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ಸುಮಾ ಸತೀಶ್ ಮತ್ತು ಅಕ್ಕಯ್ ಪದ್ಮಶಾಲಿ ಉಪಸ್ಥಿತರಿರಲಿದ್ದಾರೆ.

ಚಂದಾದಾರರಾಗಿ
ವಿಭಾಗ
3 ಪ್ರತಿಕ್ರಿಯೆಗಳು
Inline Feedbacks
View all comments
ನಾರಾಯಣ ಹಿರೇಗೋಣಿಗೆರೆ
1 July 2025 09:58

ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಲ್ಲಾ ಕವಿಮಿತ್ರರಿಗೂ ಕಾರ್ಯಕ್ರಮ ಆಯೋಜಕರಿಗೂ ಶುಭವಾಗಲಿ.

ಸಂತೋಷ್ ಹೆಚ್ ಜಿ
1 July 2025 09:50

ಕಾರ್ಯಕ್ರಮ ಯಶಸ್ವಿಯಾಗಲಿ.ಹಾಗೂ ಕವಿಗೋಷ್ಠಿ ಯಲ್ಲಿ ಭಾಗವಹಿಸಲು ನನಗೂ ಅವಕಾಶ ಸಿಕ್ಕಿದ್ದು ಇನ್ನಷ್ಟು ಖುಷಿಯಾಗಿದೆ.

ನಾರಾಯಣ ಹಿರೇಗೋಣಿಗೆರೆ
1 July 2025 09:54

ಅಭಿನಂದನೆಗಳು ಸಂತೋಷ್. ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ. ಶುಭವಾಗಲಿ.

0
    0
    Your Cart
    Your cart is emptyReturn to Shop