೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ “ನುಡಿಗಳ ಅಳಿವು” ಕೃತಿಗೆ ಸಂದಿದೆ. ಹಿರಿಯ ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ ಸೇರಿದಂತೆ ಡಾ. ಹಳೆಮನೆ ರಾಜಶೇಖರ್ ಮತ್ತು ಡಾ. ಸರಜೂ ಕಾಟ್ಕರ್ ಮುಖ್ಯ ತೀರ್ಪುಗಾರರ ಸಮಿತಿಯಲ್ಲಿದ್ದರು. ನರಹಳ್ಳಿ ಬಾಲಸುಬ್ರಮಣ್ಯ, ಎಚ್.ಎಸ್.ಅನುಪಮಾ, ಮಲ್ಲಿಕಾರ್ಜುನ್ ಹಿರೇಮಠ , ವಿಜಯಶ್ರೀ ಸಬರದ, ತೇಜಸ್ವಿ ಕಟ್ಟಿಮನಿ, ಎಚ್.ಆರ್. ಸುಜಾತಾ, ಕೆ.ವಿ. ನಾರಾಯಣ, ಎಚ್.ಎಲ್. ಪುಷ್ಪ, ವಸುಧೇಂದ್ರ, ಸಿದ್ಧಲಿಂಗ ಪಟ್ಟಣಶೆಟ್ಟಿ, ರಾಜೇಂದ್ರ ಚೆನ್ನಿ, ಎಸ್.ಜಿ. ಸಿದ್ಧರಾಮಯ್ಯ, ಲಲಿತಾ ಕೆ. ಹೊಸಪ್ಯಾಟಿ ಅವರ ಪುಸ್ತಕವು ಸೇರಿ ಒಟ್ಟು ೧೩ ಪುಸ್ತಕಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ಕೊನೆಯ ಹಂತದಲ್ಲಿದ್ದವು.