ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಯುದ್ಧ’

ಮತ್ತೆ ಮತ್ತೆ ಮೌನ
ಮುರಿದು ಕೆಣಕದಿರು
ನಿನಗಿದು ಕೊನೆಯೆಚ್ಚರಿಕೆ!
ದುಡಿದು ಬಾಳಲಿ ಮೌನದಿ
ಬದುಕು ಬಂಗಾರವಾಗಲಿ
ಎಂದರೂ ಬಡಿದು ತಿನ್ನುವ
ನಿಮ್ಮ ಹರಕೆ ನಿಮ್ಮ ತಲೆಗೆ
ತಲೆಯಲಿಟ್ಟು ಸುಡುವ ಬಯಕೆ
ಅದೊಂದು ದಿನ ಕದಡಿ
ಮೌನ ಕನಲಿ ಕೇಳಿತು
ಕೂಗಿ ಕೂಗಿ ಹೇಳಿತು
ನೆಲದ ಹಾಲು ಬೇಡಿತು
ರಣಭೈರವ ಹಕ್ಕಿಗಳು
ರೆಕ್ಕೆ ಬೀಸಿ ಹಾರಿದವು
ಬಾನ ಮೌನ ಸೀಳಿ ಬರಲು
ನೆಲದ ತಾಯ ತೊಡೆಯ
ಮೇಲೆ ಮಲಗಿದ ಲಕ್ಷ
ಲಕ್ಷ ಜನರು ಮೇಲೇಳಲಿಲ್ಲ
ಮುಗಿಲೇರಿ ಸಾವು ನಕ್ಕು
ಸುತ್ತಿ ಸುಳಿದು ಕೀಳುತ್ತಿತ್ತು
ಜೀವಸಸಿಗಳ
ಜನರೇ ಇಲ್ಲಿ ನಿರ್ಜನ
ಹೊಗೆಯ ಮೂಡ ತುಂಬಿ ಬಂತು
ಯಮನ ಪಾಸ ಮಿಂಚುತ್ತಿತ್ತು
ಲಕ್ಷ ಜೀವ ಸುಟ್ಟ ಪಾಪ
ಕೂಗುತ್ತಿತ್ತು ನೆಲದ ಶಾಪ
ವಿಜ್ಞಾನದ ಭಸ್ಮಾಸುರ
ತನ್ನ ಹಸ್ತ ಚಾಚಿತು
ನೆಲದ ಹರಕೆ ತೀರಿತು

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
    0
    Your Cart
    Your cart is emptyReturn to Shop