ಸವಿತಾಮುದ್ಗಲ್ ಗಂಗಾವತಿ ಅವರು ಬರೆದ ಕವಿತೆ ‘ಜೋಳದರೊಟ್ಟಿ’

 

ಎರಿಹೊಲದಾಗ ಬಿತ್ತಿದಾರ
ಮುಂಗಾರುಜೋಳ ಎಲ್ಲಡೆ
ಹಚ್ಚಹಸಿರಿನಲ್ಲಿ ಕಂಗೊಳಿಸಿ
ನಿಂತೈತೆ ಮುತ್ತಿನ ತೆನೆಗಳು

ತೆನೆಬಾಗಿದ ಸಾಲುಗಳಲಿ
ಅಡ್ಡಾಡಿ ಬರಲು ಹಿತವು
ಉಪ್ಪುಪ್ಪು ಮೆತ್ತುವುದು ಮೈಗೆ
ಮರೆಯದ ಸಿಹಿನೆನಪು ಅನುದಿನವು

ದೊಡ್ಡ ಕಣದಾಗ ರಾಶಿ
ಮಾಡಿರಲು
ಬಂಡಿತುಂಬೆಲ್ಲ ಜೋಳದ
ಚೀಲಗಳು

ಹೊಸಜೋಳ ಕೊಟ್ಬಂದು
ಕೈ ತುಂಬಾ ಹಣ ತಂದು
ಹಳೆ ಜೋಳಕೆ ಮನಸೋತು
ರೊಟ್ಟಿ ಮಾಡ್ಯಾಳ ನಮ್ಮವ್ವ

ಬಿಸಿರೊಟ್ಟಿ ತಟ್ಟಿ ತಟ್ಟಿ ದಿನವು
ಬಿಸಿತುಪ್ಪ, ಕೆನೆಮೊಸರು
ತಿನ್ನುವ ಕಾಲವು

ರೊಟ್ಟಿ ತಿಂದಷ್ಟು ಗಟ್ಟಿ
ಈದೇಹ ಎನ್ನುತ್ತಾ
ಬುಟ್ಟಿ ತುಂಬಾ ರೊಟ್ಟಿ ಮಾಡಿ
ಬುತ್ತಿ ಕಟ್ಟುತ್ತಾ

ಹೊಲದಲ್ಲಿ ಕೂತು
ಊಟ ಮಾಡುತ
ಮನಸಿನ ದುಗುಡವೆಲ್ಲ
ದೂರದೂಡುತ

ಚಂದಾದಾರರಾಗಿ
ವಿಭಾಗ
5 ಪ್ರತಿಕ್ರಿಯೆಗಳು
Inline Feedbacks
View all comments
ಗೋನಾ
13 September 2023 08:05

ಹೆರಿಹೊಲ ಎಂದರೇನು?
ರೊಟ್ಟಿ ತಿಂದರೆ ಗಟ್ಟಿ… ತುಂಬಾ ಚೆನ್ನಾಗಿ ಇದೆ.

ಶರಣಗೌಡ
12 September 2023 18:21

ಮೇಡಂ ಹೇರಿ ಅಲ್ಲಾ ಎರಿ ಆಗಬೇಕಿತ್ತು. ಸುಂದರ ಕವನ ಮೇಡಂ…

HSB
12 September 2023 11:55

ರೊಟ್ಟಿ ತಿನ್ನುವಾಗ ನಿಮ್ಮ ಕವಿತೆ ಸ್ವಲ್ಪ ಸಾಲುಗಳು ನೆನಪಿಗೆ ಬರುವುದು ಸಹಜ… ಚೆನ್ನಾಗಿದೆ ಜೋಳದ ರೊಟ್ಟಿ…

ಸವಿತಾ ಮುದ್ಗಲ್
12 September 2023 11:36

ನನ್ನ ಕವನ ಪ್ರಕಟಿಸಿದ ಮಿಂಚುಳ್ಳಿ ಸಂಪಾದಕ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🏻😊

ಸವಿತಾ ನಾಯ್ಕ ಮುಂಡಳ್ಳಿ ಶಿಕ್ಷಕಿ ಸರಕಾರಿ ಪ್ರೌಢಶಾಲೆ ಸೋನಾ
12 September 2023 10:24

ಉತ್ತಮ

0
    0
    Your Cart
    Your cart is emptyReturn to Shop