ನನಗೂ ಬಂತು ಇಂದು
ವೈರಾಗ್ಯ
ಆ ಮಹಾಯೋಗಿಯಲಿ
ಅನುರಾಗ
ಪ್ರೀತಿ ಮಾಡಲು ನಾ
ಹೊರಟಿರುವೆ ಇದುವೆ
ಸುಯೋಗ
ನನ್ನ ಮತ್ತೆ ಮಹಾದೇವನ
ನಡುವೇ ಈ ಭೂಲೋಕದ
ದೋಖಾ….
ಕಣ್ಣರೆಪ್ಪೆಯಲಿ ಅವನದೆ
ಚಿತ್ರ ಪಟ
ನನ್ನ ಮನವಾಗಬೇಕಿದೆ
ಅವನ ಧ್ಯಾನದಲ್ಲಿ
ಗಾಳಿಪಟ
ಸೂತ್ರ ಹಿಡಿದು ಆಡಿಸುವವನ
ಮುಂದೆ ನನ್ನ ಓಟ
ಅವ ಬಿಡುವ ಮೊದಲು
ನಾ ಅವನ ಸೇರಬೇಕೆನ್ನುವುದು
ನನ್ನ ಹಠ
ತರಲೆನಿದೆ ನನ್ನಲ್ಲಿ
ನೀ ಕೊಟ್ಟ ಕಾಯ
ನೀ ಇಟ್ಟ ಛಾಯ
ನೀ ಬಿಟ್ಟ ಮಾಯ
ನಿನ್ನಲ್ಲಿ ಕರಗುವಾ ಲೀಲಾ
ಕೈ ಮುಗಿಯುವೆ ನಾ ಇಂದ
ಬಂದು ಕಾಣೋ ನನ್ನ ಒಮ್ಮ
ಮನ ಹೇಳುತ್ತಾದ ಇಂದ
ಹರ ಹರ ಹರ ಮಹಾದೇವ
ಹರ ಹರ ಹರ ಮಹಾದೇವ
ನಿರಾಕಾರ ನಿತ್ಯ ಸತ್ಯ
ಸೌಂದರ್ಯ ಸ್ವರೂಪ
ಲೀಲಾಧರ ನಿಮ್ಮ ನೆನೆಯುತ್ತ
ಮನ ಹೇಳುತ್ತಿದೆ
ಹರ ಹರ ಹರ ಮಹಾದೇವ
ಹರ ಹರ ಹರ ಮಹಾದೇವ