ನನ್ನೆದೆಯ ಒರತೆ
ಬರಡು ಮರುಭೂಮಿಯಲ್ಲಿ
ಅಲ್ಲಲ್ಲಿ ಉಕ್ಕಿ ಮರೆಯಾಗುವ
ಕೊಳದಿ ಬಳಲಿದ
ಹಸಿರು ಬನದ ಅಂತ್ಯವಿಲ್ಲದ
ಸಾಲು ಸಾಲು ಹೂಗಳು
ನಿನ್ನದೋ ಬಾಗಿದ
ಎಳಸುಪ್ರಾಯ..
ಗೀಚಲು ಬಲು ಸುಲಭವೇನಲ್ಲ.
ಇತ್ತ ದಾಂಗುಡಿಯಿಟ್ಟ
ಕನವರಿಕೆಗಳ ಕಾರುಬಾರು
ಮತ್ತದೇ ಬರಿ ಕನಸುಗಳ ನೆಪದ ಬ್ರಾಂತಿ
ಒಮ್ಮೊಮ್ಮೆ
ಇರುಳು ಬೆಳಕಿನ ಹಾಗೆ
ಹಗೆ ತುಂಬಿದ ಹಟ ಬಿದ್ದ ಮನಸು
ಕನಸಿನ ಮುಲಾಜಿಲ್ಲದೆ
ಬಿಕರಿಯಾಗಲು ತಿಳಿಹನಿಯ
ರಾಜಿ ಬಯಸಿದೆ..
ಒಂದಿಷ್ಟು ಹಂಚಿಬಿಡಲೇ?
ಅಸಾಧ್ಯದ ಮುಗುಳುನಗೆ
ಬಿಡುವಿಲ್ಲದ ಕಡಲ ನಗೆ ತೀರ
ನನ್ನೊಡಲ ಬಿಳಿ ಹಾಲು ನೊರೆಯ
ಗೊಡವೆ ಗೋಜಲುಗಳಿಲ್ಲದ
ಮರೀಚಿಕೆಯ ಮಜಲುಗಳು
ಸದಾ ಸನಿಹ ಬಯಸುವ
ಮನಕೆ ಮಂಥನದ ಔತಣ
ಬಿಟ್ಟು ಬಿಡದ ಕಣ್ಣ ಹನಿಗೆ
ಸುಖಾಸುಮ್ಮನೆ ಹಾತೊರೆವ
ನಿರ್ಲಿಪ್ತ ಭಾವಜೀವಿಗೆ
ಇಂದು ನಿನ್ನೆಗಳ ಬರ…