ಬಿ.ಟಿ.ನಾಯಕ್ ಅವರು ಬರೆದ ಕವಿತೆ ‘ಸಂಗಾತಿಯ ಮನ’

ಸಂಗಾತಿ ಮನ ಅರಿಯುವುದು ಅವಳಾಳ ಸಂಗತಿ ಅರಿತ ಮೇಲೆ,
ಸಂಗದಿ ಸಂಗಾತಿ ಮನವರಿತರೆ ಸಾರ ಅರಿಯುವುದು ಆ ಮೇಲೆ,
ಭಂಗದೀ ಸಂಗಾತಿ ಮಾಡುವಳವಳು ಬಲು ಘಾಸಿ ಮೇಲೆ ಮೇಲೆ.

ಚಿತ್ತವಿರಲಿ ಸಮಚಿತ್ತವಿರಲಿ ಬಾಳ ಸಂಗಾತಿಯನು ಅರಿತರಿಯಲು,
ಎತ್ತ ನೋಡಿದತ್ತ ಭ್ರಮೆ ಮೂಡಿಸುವಳು ಸಂಗಾತಿ ತಾ ಅರಿಯಲು,
ಮಸುಕಾಯ್ತೆಂದು ಭಯ ಬೇಡ ಚಾಚುವಳವಳ ಕೊಡುಗೆ ಹಸ್ತಗಳು.

ಸಂಗಾತಿಯಿಂದ ಆನಂದ ಹೊಮ್ಮಿದಾಗ ತುಂಬುವುದು ಮೈ ಮನ,
ಸಂಗಾತಿಯಲಿ ದೊರಕದ್ದು ದೊರಕಿದಾಗ ತಣಿವುದು ತುಂಬು ಮನ
ಸಂಗಾತಿ ಜೊತೆಯಲಿದ್ದರೇ ನಮ್ಮೆದೆ ಗೂಡಲೀ ಇರುವುದವಳ ಮನ.

0
    0
    Your Cart
    Your cart is emptyReturn to Shop