ಮಳೆ ಹನಿಯ ಜಾಡಿನಲಿ
ಹೆಜ್ಜೆಯ ಗುರುತುಗಳು
ಕೆನ್ನೆಯ ಮೇಲೆ.
ಅವಳು ಬಹು ಮಾಗಿದ್ದಾಳೆ
ಒಳಗೊಳಗೆ
ಅದಕ್ಕೆ ಮೌನವಾಗಿದ್ದಾಳೆ.
ಕೊಂಚ ನಗುವುದಕ್ಕೂ
ಮುನ್ನ ತೂಗುತ್ತಾಳೆ
ಮನದಲ್ಲಿ ಅರಳೆಯ ಬೆಟ್ಟದಷ್ಟು.
ಈ ಮಳೆಯ ನಡುವೆಯೇ
ಬಂದು ಹೋದ ಹೆಜ್ಜೆಗಳ
ನೆನೆದು ಬಿಕ್ಕಿ ಮೊಡದ
ಹನಿ ಜಾರಿರಬೇಕು ಎನ್ನುವಂತೆ
ಕೈಯಾಡಿಸಿ ಕೆನ್ನೆಬುವಿಗಿಂಗಿಸಿ
ಸಮಾಧಾನಿಸಿಕೊಳ್ಳತ್ತಾಳೆ
ತನಗೆ ತಾನೇ
ಬಿಕ್ಕಿದರೆ ಲಯ ತಪ್ಪಬಹುದು
ಬಾಳು ಎಂಬ ತರ್ಕದಲ್ಲಿ.
ಅಂತೂ ತಪ್ಪಿದ ಹೆಜ್ಜೆಗಳಂತೆ
ಹನಿಗಳು
ಅವು ಕಂಬನಿಯೂ ಮಳೆಹನಿಯೂ
ಮೋಹದ ಸಲಿಗೆಗೆ ಸಿಕ್ಕ
ಕನ್ಯಸೆರೆಯ ಸೋಲುಹನಿಯು
ಹೇಳಿ ಕೊಳ್ಳುವಂತಿಲ್ಲದ
ಬಿಕ್ಕದರೆ ಕೈ ಕಾಲು ಬಡಿದು
ಹೆಜ್ಜೆ ಮೂಡುವ
ಸೊನೆ ಮಳೆಯೂ