ಕೇಳದೆ ಈ ಒಂಟಿ ಮನಸಿನ ರೋಧನೆ
ಅರಿಯದೆ ಸೋತು ಕುಳಿತಿಹ ಹೆಣ್ಣಿನ ವೇದನೆ
ಪಂಜರದ ಕಂಬಿಯೊಳಗೆ ನಂಬಿಕೆ ಸತ್ತಿದೆ
ಬೆಳಕು ಸುಳಿಯದೆ ಕಗ್ಗತ್ತಲು ಸುತ್ತಿದೆ
ಉಸಿರಾಡುತ್ತಿದ್ದರೂ ಕೊಸರಾಡಲು ಇಲ್ಲ ಜಾಗ
ಬಿಸಿ ನಿಟ್ಟುಸಿರ ತಾಪಕೆ ಮೂಡಿದೆ ಒಂಟಿ ರಾಗ
ಇರುವಾಗ ಇರುವೆಯಂತೆ ಸುತ್ತಲಿದ್ದ ಜನ
ಏನಿಲ್ಲದಾಗ ಕೇಳೊರಿಲ್ಲ ದುಃಖಿಸುವ ಮನ
ತುಟಿ ಬಿಚ್ಚಲಾಗದ ಭಾವನೆ ಈಗ ತುಟ್ಟಿ
ಮಾರಟವಾಗಿದೆ ಅವಳ ಮಾನವು ಬಿಟ್ಟಿ
ಕಾಪಾಡುವ ಕೈಗೆ ಕಾದಿದೆ ಜೀವ
ಕಾಡುವ ದುರುಳರ ಮದಿಸೆಯ ದೇವ
ಹೆಣ್ಣು ನಗುತಿರೆ ಎಲ್ಲೆಡೆ ಕ್ಷೇಮ
ಅವಳು ಅತ್ತರೆ ಲೋಕಕ್ಕೆ ಕ್ಷಾಮ
ಬಿಡುಗಡೆಯ ಬಯಸಿದೆ ಪಂಜರದ ಗಿಳಿ
ಬಾನೆತ್ತರಕೆ ಹಾರಿ ಸೇವಿಸಬೇಕಿದೆ ಸ್ವಚ್ಛ ಗಾಳಿ