ಪುನೀತ್‌ ತಥಾಗತ ಅವರು ಬರೆದ ಕವಿತೆ ‘ಅಮರ ಕಾವ್ಯ’

 

ಕಿಲುಬಿಡಿದ ರಕ್ತದ ನಾಳದಲ್ಲೆಲ್ಲಾ
ಧರ್ಮದ ದುರ್ನಾತ ಸೇರಿ
ಗಲ್ಲಿಗಲ್ಲಿಗೆಲ್ಲ ಮೈಕು ಜಾಡಿಸಿ
ವಯಸ್ಕರ ಬಣ್ಣವೆಲ್ಲ
ಚರ್ಮದ ಸ್ಪರ್ಶಕ್ಕೆ
ಆಲ ತುಂಬಿ ದಕ್ಷನ ಯಜ್ಞಕ್ಕೆ
ಬಲಿಕೇಳುತ್ತಿದೆ

ಬಣ್ಣ ಬಣ್ಣದ ಕಣ್ಣುಗಳಲ್ಲಿ
ಬಟ್ಟೆಗಳ ಹರಿವಾಗ
ಕದನ ವಿರಾಮದ ಪಲಕ
ಚಕ್ರವಾಗಿ ಕಣ್ಣಿಗೆ ರಾಚಿ ಬಸವನ ಹುಳದ ಎಂಜಲಿಗೆ
ಗದ್ದೆಯ ಬದ ಕಟ್ಟಿ
ಭೂಮಿಗೆಲ್ಲ ನೀರುಣಿಸಿ
ಆದಿ-ಅಂತ್ಯದ ಪದವಾಡುತ್ತಿದೆ

ಮಂಡೆಗೆ ಬಡೆದ ಎಣ್ಣೆಯಲ್ಲಿ
ಕೆಂಡ ಸಂಪಿಗೆಯ ಹನಿಸೂಸುತ್ತಾ
ಕೊಂದವರುಳಿದರೆ ಎಂದು ಸಾರುತ್ತಾ
ನೇಣು ಬಿಗಿದುಕೊಳ್ಳುವ
ತುಕ್ಕು ಹಿಡಿದ ದೇಹಕ್ಕೆ
ಹಾಲನ್ನವಿಕ್ಕಿ ಮೊಸರೊಡೆಸಲಾಗುತ್ತಿದೆ
ಕಡೆದು ಬೆಣ್ಣೆಯಾಗಿಸಿ ತೇಲಿಸಿ
ಅಡಿಗೆ ಉರಿ ಇಕ್ಕಿ ತುಪ್ಪವಾಗಿಸುತ್ತಿದೆ

ಅಲ್ಲೊಮ್ಮೆ ಚಿಗುರಿದ
ಬೇತಾಳನ ಯುದ್ದೋನ್ಮಾದ
ಸುಮ್ಮನೆ ಅರುಚುತ್ತಾ
ಪೋಷಾಕಿನ ಸ್ಮೃತಿಗಳೆಲ್ಲ ಬೆನ್ನಿಗೆ ಜೋತಿಸಿಕೊಂಡು
ಅಷ್ಟೆ ಅಲ್ಲ…
ಅಮರ ಕಾವ್ಯವ ಒದರುತ್ತಲಿವೆ

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ಅಜಯ್
5 July 2023 14:10

ಚೆನ್ನಾಗಿದೆ

ಸುಮ. ಎಂ
4 July 2023 13:19

ದಯವಿಟ್ಟು ವಿಷಯವನ್ನು ವಿವರಿಸಿ ಸಹಾಯ ಮಾಡಿ

0
    0
    Your Cart
    Your cart is emptyReturn to Shop