ವಿದ್ಯಾ ಗಾಯತ್ರಿ ಜೋಶಿ ಅವರು ಬರೆದ ಕವಿತೆ ‘ನಿಗೂಢ ಸುಂದರಿ’

ಅವಳು ಸುಂದರಿ…
ಬಳುಕುವ ವಯ್ಯಾರಿ
ಕಣ್ಣ ನೋಟದಲ್ಲೇ
ಕೊಂದು ಬಿಡುವಳಲ್ಲೆ?

ಬಾರಿ ಬಾರಿ ಸತ್ತು
ಮತ್ತೆ ಚೇತರಿಸಿ ಎದ್ದು
ಅವಳಲ್ಲಿ ಯಾಚಿಸುವೆ
ಪ್ರೇಮಭಿಕ್ಷೆಯ ಮದ್ದು

ಅದೇ ತೀಕ್ಷ್ಣ ನೋಟ
ಕಣ್ಣ ಭರ್ಜಿಯಿಂದ
ಎದೆಯ ತಿವಿಯುವ
ಕಠೋರ ಆಟ

ಮಂದಹಾಸವಿಲ್ಲ
ಮುಗುಳ್ನಗೆಯ ಸುಳಿವಿಲ್ಲ
ನಡೆಯೆಲ್ಲಾ ಒಗಟು
ಬಿಡಿಸಲಾಗದ ಕಗ್ಗಂಟು

ನಾ ಮನಸೋತೆನೆ
ಮಯಾಂಗನೆಗೆ?
ನನ್ನನ್ನೇ ನಾ ಪರೀಕ್ಷಿಸಿಕೊಳ್ಳುವ ಪರಿ
ಅವಳ ಗಮನಕ್ಕೆ ಬಾರದೆ?

ಅವಳ ಪ್ರತಿ ನಡೆ ನುಡಿ
ನಿಗೂಢ
ಹೆಣ್ಣಿನ ಹೆಜ್ಜೆ ನಡೆ ನುಡಿ
ನಿಗೂಢ!

ಚಂದಾದಾರರಾಗಿ
ವಿಭಾಗ
6 ಪ್ರತಿಕ್ರಿಯೆಗಳು
Inline Feedbacks
View all comments
ಅರವಿಂದ.ಜಿ.ಜೋಷಿ. ಮೈಸೂರು
19 June 2023 13:23

ವಿದ್ಯಾ ಜೋಷಿ ಯವರ ಕವನ ಅರ್ಥ ಪೂರ್ಣ.

Vidya
19 June 2023 17:36

ಧನ್ಯವಾದಗಳು sir

ಡಿ.ಎ. ರಾಘವೇಂದ್ರ ರಾವ್
19 June 2023 12:52

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ
ತನ್ನ ಹೆಸರಿನಂತೆ ಸರ್ವಲಂಕೃತ
ಸಾಹಿತ್ಯಲಂಕಾರದಲ್ಲಿ ಮಿಂಚುತ್ತಿದ್ದಾಳೆ.
ಕಥೆ ಕವಿತೆ ಗಜಲ್… ಎಲ್ಲವು ಮತ್ತು
ಅವುಗಳ ಚಿತ್ರಬರಹ ಸುಂದರವಾಗಿ
ಮೂಡಿಬಂದಿದೆ. ಚೆಂದದ ಕವಿತೆ ನಿಗೂಢ ಸುಂದರಿ ಓದಿದ್ದು
ಆಯ್ತು.. ಮುಂದಿನದು ಓದಬೇಕು…🙂

ಗಿರಿಜಾ.ಎಸ್.ದೇಶಪಾಂಡೆ.
19 June 2023 11:06

ಸುಂದರ ಕವನ

Vidya
19 June 2023 17:36

Thank u girijakka

Vidya
19 June 2023 10:28

ನನ್ನ ಕವನ ನಿಗೂಢ ಸುಂದರಿ ಪ್ರಕಟಿಸಿದ್ದಕ್ಕೆ ಪತ್ರಿಕಾ ವೃಂದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು,

0
    0
    Your Cart
    Your cart is emptyReturn to Shop