ನಾವೆಂಕಿ ಕೋಲಾರ ಅವರು ಬರೆದ ಕವಿತೆ ‘ಕಣ್ಮಣಿ’

ನನಗೆ
ನಿನ್ನ ಹಾಗೆ ಬರೆಯಲು ಬರುವುದಿಲ್ಲ
ನಿನ್ನ ಹಾಗೆ ಹಾಡಿ ನರ್ತಿಸಿ ನಟಿಸಲು ಬರುವುದಿಲ್ಲ
ಮಾತನಾಡಲು ಮೊದಲೇ ಬರುವುದಿಲ್ಲ
ಕಾವ್ಯಕಣ್ಮಣಿ –

ಎಷ್ಟು ಹೇಳಿದರೂ ಕೇಳಿಸಿಕೊಳ್ಳರು
ಒತ್ತಿ ಮಾತಾಡೋದು ಬಿಡರು
ಬರೆಯಲಾಗದವರು
ಅಂದು ಬರೆದಿದ್ದನ್ನು ಇಂದು ಮತ್ತೆ ಮತ್ತೆ
ಪ್ರಶ್ನಿಸಿ, ಹಿಂಸಿಸಿ ನಂಜು ಕಾರುತ್ತಾರೆ
ಸಿರ್ ಕರಾಬ್ ಮಾಡುತ್ತಾರೆ –

ಆಲೆಮನೆ ಬೇಡವೆಂದವರೇ
ಬೆಲ್ಲಕ್ಕೆ ಕಪ್ಪಿರುವೆಯಂತೆ ಮುತ್ತಿ
ಮುಗಿಬಿದ್ದು ನೆಕ್ಕುತ್ತಿದ್ದಾರೆ
ಸಿಕ್ಕಾಸು ದೋಚಿ ಕಣ್ಣು ಕುಕ್ಕಿ
ಬಚ್ಚಿಟ್ಟುಕೊಳ್ಳುತ್ತಿದ್ದಾರೆ.
ಬಯಲಾದ್ರೆ
ಸುಳ್ಳು ಸಬೂಬುಗಳ
ಸರಮಾಲೆ ಹೆಣೆದುಬಿಡುತ್ತಾರೆ –

ಅವಳ
ಗಲ್ಲದಲಿ ಮೆರಗೊ ಚಿನ್ನದ ಸರ
ಬಿಲ್ಕುಲ್ ಮುಫ್ತಾಗಿ ಕೊಟ್ಟಿದ್ದು
ಸರ್ವವೂ ಸರ್ವೇಶನೇ ಕೊಟ್ಟಿದ್ದು ಎಂದಾಗ
ಕಪ್ಪಿರುವೆ ಸಾಲು ಗುಟ್ಟನ್ನು ಬಿಚ್ಚಿಟ್ಟಿತು..

ಈ ನೆಲಕ್ಕೂ ಕಣ್ಣು ಕಿವಿ ಕಪಾಳವಿದೆ
ಗುದ್ದಲಿಗೆ ಮೆತ್ತಿದ ಮಣ್ಣು
ಎಲ್ಲರ ಪಾದಕ್ಕೂ ಅಂಟಿದೆ
ಅನ್ನ ಕೊಡೊ ಕೈಗಳ ಕಡಿದುಬಿಟ್ಟರೆ
ಅನ್ನಕ್ಕೆ ಬದಲಾಗಿ ಏನಿದೆ ತಿನ್ನಲು
ಪಸೆಯಿಲ್ಲದ ಬದ್ವಾಳಿಗಳ
ಹತ್ತಾರು ಬೊಂಕು
ಮೆತ್ತಗೆ ಹರಿ ಬಿಟ್ಟು ತಮಾಷೆ ನೋಡೋದೆ –

ಉಪ್ಪು ತಿಂದೋರು ನೀರು ಕುಡಿಯಲೇಬೇಕು
ಇಂದಲ್ಲ ನಾಳೆ..
ಕತ್ತಲ ಪತಂಗಗಳ ಸಂಭ್ರಮ
ಹಾರಾಟ ಚೆಲ್ಲಾಟ ಎಷ್ಟು ಕಾಲ
ಬೆಳಕರಿಯೊ ತನಕ
ಕಟಕಟೆಯ ಭಯವಿದ್ದರೂ
ತೊಡೆತಟ್ಟಿ ಮೀಸೆ ತೀಡಿ
ಸುತರಾಂ ಕೇಳಿಸುತ್ತಿಲ್ಲ ಅಂತಾವ್ರೆ..
ಸುತರಾಂ –

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ವಿಶ್ವನಾಥ ಎನ್ ಅಮಾಸ
21 July 2023 20:43

ಉತ್ತಮವಾದ, ಅರ್ಥಪೂರ್ಣವಾದ, ಯೋಚನೆಗೆ ಹಚ್ಚುವ ಕವಿತೆ….

ಜಯಂತಿ ಸುನಿಲ್
21 July 2023 17:02

ಅಮೋಘ

0
    0
    Your Cart
    Your cart is emptyReturn to Shop