ಅನುಸೂಯ ಯತೀಶ್ ಅವರು ಬರೆದ ಕವಿತೆ ‘ಗುರುವಿನ ಪಾತ್ರ ಹಿರಿದು ಜಗದಲಿ’

ಗುರುವಿನ ಪಾತ್ರ ಹಿರಿದು ಜಗದಲಿ
ಅಂಧಕಾರದ ಪರದೆಯ ತೆರೆಯಬೇಕು ಶಿಷ್ಯರಲಿ
ಸಮಾಜದ ಅಂಕು ಡೊಂಕುಗಳನು ತಿದ್ದುತ
ಮಾದರಿಯಾಗಬೇಕು ಸನ್ನಡತೆ ಸನ್ಮಾರ್ಗದಲಿ

ದ್ವೇಷ ಅಸೂಯೆ ಮತ್ಸರಗಳ ದೂಡುತಲಿ
ಪ್ರೀತಿ ಸ್ನೇಹ ಸಹೋದರ ಭಾವ ಬಿತ್ತುತಲಿ
ಶಾಂತಿ ಸಹನೆಯ ಮೊಳಕೆಯ ಚಿಗುರಿಸುತಲಿ
ಸಾಗಬೇಕು ಸತ್ಯಪಥದಿ ಮುನ್ನಡೆಸುತಲಿ

ಮೂಢನಂಬಿಕೆ ಕಂದಾಚಾರಗಳ ಮೆಟ್ಟಿನಿಲ್ಲುತ
ವೈಚಾರಿಕತೆ,ವೈಜ್ಞಾನಿಕತೆ ಮೂಡಿಸುತ
ಜಾತಿ ಮತಗಳ ಹಣೆಪಟ್ಟಿ ಕಳಚುತ
ನಡೆಯಬೇಕು ಸ್ವಾರ್ಥ ಲಾಲಸೆಗಳಿಗೆ ತಿಲಾಂಜಲಿಯನಿಡುತ

ಅನೀತಿ ಅರಾಜಕತೆಯ ಮೇಲಾಟಕೆ
ಕಡಿವಾಣ ಹಾಕುತ
ಅನಕ್ಷರತೆಗೆ ಸಾಕ್ಷರತೆಯ ದೀಪ ಹಚ್ಚುತ
ರಾಷ್ಟ್ರಭಕ್ತಿ ರಾಷ್ಟ್ರಪ್ರೇಮವ ಶಿಷ್ಯರಲ್ಲಿ ಮೈಗೂಡಿಸುತ
ಭವ್ಯ ಭಾರತದ ದಿವ್ಯ ಪ್ರಜೆಗಳ ನಿರ್ಮಿಸಬೇಕು.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
    0
    Your Cart
    Your cart is emptyReturn to Shop