ಪರಶುರಾಮನ ಎಸ್ ನಾಗುರು ಅವರು ಬರೆದ ಕವಿತೆ “ಕೇಳುವರಾರು?”

ಬಡವನ ಒಡಲದನಿ
ವರಸುವರಾರು
ನೊಂದ ಜನರ ಕಂಬನಿ

ಬರುವರು ಯಾರು ಎಂದು
ಕಾಯ್ದೆವು ಇನಿತು ದಿನ
ಬಂದರು ಬಹಳ ಜನ
ಇಲ್ಲ ಹೃದಯ ಕಿವಿ ಕಣ್ಣು

ಉಂಡವರು ಉಂಡುಂಡು
ಅರಗಿಸಿಕೊಂಡ್ರು
ನಮ್ಮ ಹಕ್ಕನ್ನೆ ,ನಾವು ಕೇಳಿದಾಗ
ಯಾರ್ಗೆ ಹೇಳ್ತಿ ಹೇಳು, ನಡೆ ಮುಂದೆ ಅಂದ್ರು

ಆಗೂ ಹೋಗುಗಳ ನೋಡುತ್ತಿದೆ
ಬಡವ ನಿನ್ನ ಬಿಡುಗಣ್ಣು
ನಿನ್ನ ಬಾಯಿಗೆ ಉಳ್ಳವರು
ಹಾಕುವರು ಹಿಡಿಮಣ್ಣು

ಭ್ರಷ್ಟಾಚಾರ ಮರವಾಗಿದೆ
ಬಡವನ ಬದುಕು ಕನಸು ನೆತ್ತರನೀರಿ
ಈ ಹಳ್ಳಿಗಳಲ್ಲಿ ಆ ದಿಲ್ಲಿಯಲ್ಲಿ
ಟಿಸಿಲೊಡೆದಿದೆ ದೇಶವನ್ನಾವರಿಸಿದೆ

ಭ್ರಷ್ಟಾಚಾರದಿಂದ
ಬಲವಂತರಾದರು ಕೆಲವರು
ಭ್ರಷ್ಟಾಚಾರದಿಂದ
ಬಳಲಿದರು ಹಲವರು

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop