ಮಂಜುಶ್ರೀ ಮುರಳೀಧರ್ ಅವರು ಬರೆದ ಕವಿತೆ “ಬಂಧನವಾಗದಿರಲಿ ಈ ಸಂಬಂಧ”

ಗಂಡೆಂದ ಮಾತ್ರಕ್ಕೆ ಅವನ ಮನಸ್ಸು ಕಲ್ಲು ಬಂಡೆಯೇ
ಅವನನ್ನು ಸಿಲುಕಿಸಿ ನಲುಗಿಸಿದೆ ಬಂಧಗಳ ಬಲೆ
ಸಂಬಂಧಗಳ ಸ್ವಾರ್ಥದಲಿ ಅವನ ಅನಿಸಿಕೆಗೆ ಎಲ್ಲಿದೆ ಬೆಲೆ.

ತಾಯಿಗೆ ತಕ್ಕ ಮಗ, ಮಕ್ಕಳಿಗೆ ಆದರ್ಶ ಅಪ್ಪನಾಗಬೇಕು
ಪತ್ನಿಗೆ ಒಪ್ಪುವ ಪತಿ, ಸಮಾಜಕ್ಕೆ ಸತ್ಪ್ರಜೆಯಾಗಬೇಕು
ಆದರೆ,ಯಾರು ಸಹ ಕೇಳರು ಅವನಿಗೆ ಏನು ಬೇಕು?

ಓದಿ ಒಳ್ಳೆಯ ಕೆಲಸ ಸೇರಿ ಜೀವನದಲ್ಲಿ ಯಶಸ್ಸು ಕಾಣಬೇಕು
ಕಷ್ಟವೆನಿಸಿದರೂ ತನ್ನವರ ಹಿತಕ್ಕಾಗಿ ದುಡಿಯಬೇಕು
ಒಂದಲ್ಲ, ಎರಡಲ್ಲ ಎಲ್ಲ ಜವಾಬ್ದಾರಿ ಹೊತ್ತು ಸಾಗಬೇಕು.

ಅತ್ತರಷ್ಟೇ ನೋವಾಗಿದೆ ಎಂದು ಅರ್ಥವೇ!
ತನ್ನವರೊಂದಿಗೆ ಪ್ರೀತಿಯ ಮಾತನಾಡದಿದ್ದರೆ ಅಕ್ಕರೆಯಿಲ್ಲವೇ?
ಎಲ್ಲವೂ ಅವನಲ್ಲಿ ಉದುಗಿದೆ ನವಿರು ಭಾವನೆ ಅರಿತಿಲ್ಲವೇ?

ಎಷ್ಟೇ ಬಲಶಾಲಿಯಾದರೂ ಶಕ್ತಿ ತುಂಬಲು ಸಂಬಂಧ ಬೇಕು
ದಣಿದ ದೇಹ ಮನಸ್ಸಿಗೆ ಸ್ಪಂದಿಸುವ ಪ್ರೀತಿಯ ಮನ ಬೇಕು
ಸಂಬಂಧಗಳ ಬಂಧವೂ ಆಗಲಿ ಅನುಬಂಧ
ಬಂಧನವಾಗದಿರಲಿ ಈ ಸಂಬಂಧ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop