ಬಸವರಾಜ ಶಿರಹಟ್ಟಿ ಅವರು ಬರೆದ ಕವಿತೆ “ಮಹಿಳಾ ಮಣಿ”

ಹೆಣ್ಣು ಹೆಣ್ಣೆಂದರಷ್ಟೇ ಸಾಕೆ
ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ

ಮನೆಗೆ , ಮನಕ್ಕೆ ಬಂದೆ
ಭಾಗ್ಯಳಾಗಿ ಭಾಗ್ಯಲಕ್ಷ್ಮಿಯಾದೇ
ನವಮಾಸ ಹೊತ್ತೆ , ಹೆತ್ತು ಮರುಜನ್ಮ ಪಡೆದೆ
ಜನನಿಯಾಗಿ ಸಾರ್ಥಕವಾದೆ

ಕೈಹಿಡಿದು ನಡೆದೆ, ತಿದ್ದಿ ತಿಡಿದೆ
ಊರುಗೋಲಾಗಿ ಆಸರೆಯಾದೆ
ಜೊತೆಯಾಗಿ ಬೆಳೆದೆ , ಆಟ ಹುಡುಗಾಟವಾಡಿದೆ
ಸೊಸೆಯಾಗಿ ಪರರಿಗೆ ನೀ ಜ್ಯೋತಿಯಾದೆ

ದಾರಿ ತೋರಿದೆ, ಮಾರ್ಗದರ್ಶಿಯಾದೆ
ಗುರಿಯಾಗಿ ನೀ ಗುರುವಾದೆ
ಧೃತಿಯ ಗೆಡದೆ , ಹೆಜ್ಜೆಯ ಹಿಂದೆ ಸರಿಯದೆ
ಮುನ್ನಡೆಯಾಗಿ ಮುಂದಾಳುವಾದೆ

ತಾಳ್ಮೆಯ ತಾಳಿನೀ ಧರಿತ್ರಿ
ದಾಹವನು ತೀರಿ ನೀ ಗಂಗೆ
ಎಲ್ಲವನ್ನು ನುಂಗಿ ನೀ ಸಾಗರಿ
ಹೆಣ್ಣುಹೆಣ್ಣೆಂದರಷ್ಟೆಸಾಕೆ
ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop