“ಅಭಿನಂದನೆಗಳು ಮಿಸ್ಟರ್ ಧನುಸ್ಸ್” ಎಂದು ಕೈ ಕುಲುಕಿದರು, ‘ವಿಜಯ ಕೇಸರಿ’ ಪತ್ರಿಕೆಯ ಸಂಪಾದಕರಾದ ಕೇಸರಿ ಶರ್ಮರವರು.
“ಧನ್ಯವಾದಗಳು ಸಾರ್ ” ಎಂದೆ ಮುಗುಳು ನಗುತ್ತಾ.
“ಇಂದೆ ನಿಮ್ಮ ಸುದ್ದಿ ಹುಡುಕಾಟದ ಕೆಲಸ ಪ್ರಾರಂಭ. ಸುದ್ದಿ ಹೇಗಿರಬೇಕೆಂದರೆ, ನಿಮ್ಮ ಪ್ರಪ್ರಥಮ ಸುದ್ದಿಗೆ ಇಡೀ ಕರ್ನಾಟಕ ಮನೆ ಮಾತಾಗಬೇಕು. ಸರಕಾರ ಸಹ ಬೆಚ್ಚಿ ಬೀಳಬೇಕು. ನಿಂತ ನೀರಾಗಿ ಕೊಳೆತು ನಾರುತ್ತಿರುವ ಆಡಳಿತ ಯಂತ್ರ ನಿಮ್ಮ ಸುದ್ದಿಯ ಕಹಳೆ ಧ್ವನಿಯ ಅಬ್ಬರಕ್ಕೆ… ಮತ್ತೆ ಚಲಿಸಿ ಸರಿ ದಾರಿಗೆ ಬರಬೇಕು…. ಆ ಬಿಸಿ ಸುದ್ದಿಗೆ ನಮ್ಮ ಪತ್ರಿಕೆ ಆ ದಿನದಿಂದ ಲಕ್ಷ ಪ್ರತಿ ಹೆಚ್ಚಾಗಿ ಮಾರಾಟವಾಗಬೇಕು…” ಎಂದರು. ಕೆಲಸ ವಹಿಸಿದ ಪ್ರಥಮ ಕ್ಷಣದಲ್ಲೆ ಎಚ್ಚರಿಕೆ, ಬೇಡಿಕೆ , ಹೊಸತನ…ಎಲ್ಲಾ ಒಂದೆ ಬಾರಿ ಹೇಳಿದರು ಚಾಣಕ್ಷ ಶರ್ಮರವರು.
“ಖಂಡಿತ ” ಎಂದೆ. ಮೈಸೂರಿನಲ್ಲಿ ಪತ್ರಿಕೋದ್ಯಮ ಪರೀಕ್ಷೆಯಲ್ಲಿ ಪಾಸಾಗಿ, ತಿಂಗಳಲ್ಲೆ ಹೊಸದಾಗಿ ಕೆಲಸಕ್ಕೆ ಸೇರಿರುವ ಹುಮ್ಮುಸ್ಸಿನ ಅತ್ಮವಿಶ್ವಾಸದಿಂದ.
“ತಗೊಳ್ಳಿ ನಿಮ್ಮ ಸಂಬಳದ ಮುಂಗಡ ಲಕ್ಷ ರೂ ಚೆಕ್” ಎನ್ನುತ್ತಾ ಈ ದಿನದ ದಿನಾಂಕ ಹಾಕಿದ ಚೆಕ್ ಕೊಟ್ಟರು.
ನಾನು ಮತ್ತೊಮ್ಮೆ ಧನ್ಯವಾದಗಳು ಹೇಳುತ್ತಾ ಅವರ ಎಸಿ ರೂಂನಿಂದ ಹೊರ ಬಂದೆ.
ಸೀದಾ ಕ್ಯಾಂಟಿನ್ ಗೆ ಬಂದು ಕುಳಿತೆ. ಟೀ ಜೊತೆಗೆ ನನ್ನ ಮೆಚ್ಚಿನ ಕ್ಲಾಸಿಕ್ ಮೆಂಥಲ್ ಸಿಗರೇಟು ಹಚ್ಚಿದೆ. ಯಾವ ವಿಷಯಕ್ಕೆ ಸುದ್ದಿ ಮಾಡಬೇಕೆಂದು..ತಲೆಯಲ್ಲಿ ಸಂಚಾರಿ ಭಾವ ರೈಲ್ ನಂತೆ ಓಡತೊಡಗಿತು.
ಸಮಯ ಸರಿಯುತ್ತಿದೆ. ಯಾವ ವಿಷಯಗಳು ಸಮಾಧಾನ ತರುತ್ತಿಲ್ಲಾ. ಎಲ್ಲವು ಹಳೇಯದೆ ಎನಿಸುತ್ತಿದ್ದಾಗ…..
‘ಸ್ಪೋಟಕ ಸದ್ದಿನ ಬಿಸಿ ಬಿಸಿ ಸುದ್ದಿ… ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕಿನ ಮರರ್ಕುಂದ ಗ್ರಾಮದಲ್ಲಿ ಆಕ್ರಮ ಕಲ್ಲು ಕ್ಟಾರಿಯಲ್ಲಿ…. ಗೋಡೆಗೆ ನೇತು ಹಾಕಿದ್ದ ಟಿವಿಯಲ್ಲಿ ಸುದ್ದಿ ವಿವರ ಬಿತ್ತರಿಸಿದಳು ಸುದ್ದಿ ವಾಚಕಿ ಸುಂದರಿ ನಗುತ್ತಾ. ಬಿತ್ತರಿಸಿದ ಸುದ್ದಿಯಲ್ಲಿ ವಿಷಯ ಸಂಪೂರ್ಣವಿಲ್ಲದೆ ಅಪೂರ್ಣದಂತೆ ಅನಿಸಿತು. ಈ ಕಲ್ಲು ಕ್ವಾರಿಯ ಗಣಿಗಾರಿಕೆ ಬಗ್ಗೆ ಇದುವರೆಗೂ ಎಲ್ಲೂ ಸರಿಯಾದ ಸುದ್ದಿ, ಮಾಹಿತಿ…. ಎಲ್ಲೂ ಓದಿದ ನೆನಪಿಲ್ಲ. ಇದರ ಬಗ್ಗೆ ಬರೆದರೆ ಹೇಗೆ ಎನಿಸಿತು.
ಆನಿಸಿದ್ದೆ ತಡ, ಕ್ಷಣದಲ್ಲೆ ಮನೆಗೆ ಬಂದು ಬ್ಯಾಗಿನೊಳಗೆ ಬಟ್ಟೆ, ಬರೆ.. ಕ್ಯಾಮಾರ, ಇತರೆ ವಸ್ತುಗಳನ್ನು ತುರುಕಿಕೊಂಡು, ‘ಅಮ್ಮನಿಗೆ ನಾಲ್ಕು ದಿನ ಬರುವುದಿಲ್ಲಾ… ನಂದಿಬೆಟ್ಟಕ್ಕೆ ಹೋಗುತ್ತೆನೆಂದು ‘ ಹೇಳಿ ನನ್ನ ಮೆಚ್ಚಿನ ಹರೆಯದ ಗೆಳಯ KTM ಬೈಕ್ ಏರಿ, ಚಿಕ್ಕಬಳ್ಳಾಪುರ ನಗರದ ಕಡೆಗೆ ಓಡಿಸಿ… ಅಲ್ಲೆ ಲಾಡ್ಜ್ನಲ್ಲಿ ರೂಂ ಮಾಡಿದೆ.
ಬೆಳಗ್ಗೆ 5 ಗಂಟೆ ಸಮಯಕ್ಕೆ ಸಿದ್ದನಾಗಿ, ರೂಂ ನಿಂದ ಹೊರಬಂದು KTMವ ಬೈಕ್ ನ್ನು ಮಂಚೇನಹಳ್ಳಿಯ ತಾಲ್ಲೂಕಿನ ಮರರ್ಕುಂದ ಹಳ್ಳಿಯ ಕಡೆ ಓಡಿಸಿದೆ. ಹಳ್ಳಿ ಹತ್ತಿರ ಬರುವುದಕ್ಕೂ ಸೂರ್ಯನ ಮುಂಬೆಳಕು ಹರಡುತ್ತಿರುವುದಕ್ಕೂ ಸರಿ ಹೊಯಿತು.
ಸುತ್ತ ಹಸಿರು ಸಸ್ಯರಾಶಿಯಿಂದ ಕಂಗೊಳಿಸುತ್ತಿದೆ. ಬೆಟ್ಟಗಳ ಮೇಲೆಲ್ಲಾ ಹಚ್ಚ ಹಸುರಿನ ಹೊದಿಕೆ ಹಾಸಿದಂತಿದೆ. ಆ ಬೃಹತ್ ಸುಂದರ ಬೆಟ್ಟಗಳ ನೆತ್ತಿಯ ಮೇಲೆ ಹಿಮದ ಹಾಸಿಗೆಯ ಮೇಲೆ ಕರಿ ಮೋಡ
ಮತ್ತು ಬಿಳಿ ಮೋಡಗಳು ಒಂದಕ್ಕೊಂದು ಬೆದೆಗೆ ಬಂದಂತೆ ಬಿಗಿಯಾಗಿ ಬೆಸೆದುಕ್ಕೊಂಡು ಬೆಟ್ಟದಿಂದ ಮುಂದಿನ ಬೆಟ್ಟದ ಸಾಲುಗಳಿಗೆ ಹಾಗೆ ತಬ್ಬಿಕೊಂಡು ಉರುಳಾಡುತ್ತಾ ಚಳಿಯನ್ನು ಒದ್ದು ಓಡಿಸಲು ರತಿಕ್ರೀಡೆಯಲ್ಲಿ ತೊಡಗಿವೆ…ಆ ರತಿ ಸಂಗಮದ ಶಾಖಕ್ಕೆ ಹೊಗೆ ಅವರಿಸ ತೊಡಗಿತು. ಆ ರತಿ ಹೊಗೆಯನು ಸೂರ್ಯನು ಕೂತುಹಲದಿಂದ ಮೂಸಿದಾಗ ನಾಚಿ ಕೆಂಪಾದವು… ಇಳೆಯ ಉಬ್ಬು ತಗ್ಗಿನ ಸೌಂದರ್ಯ ಸೋಬಗೆಲ್ಲಾ..!!.
ಇಂಥಹ ಅಧ್ಭುತ ಸೌಂದರ್ಯ ಕಂಡು ಮನದ ಸಂತೋಷ ತಾಳಲಾರದೇ… ಹಳ್ಳಿ ಸೊಗಡಲ್ಲಿ ಕುಣಿದಾಡಬೇಕೆನಿಸಿತು. ತಕ್ಷಣ KTM ಬೈಕ್ ಸೈಡ್ ಸ್ಟಾಂಡ್ ಹಾಕಿ, ಜಗ್ ಜಗ್ ಜಗ್…., ಜಗ್ ನಕ್ ಕುಣಕನ್ ನಕ್ ಕುಣಕಣ್ ಜಗ್ … ಜಗ್ ನಕ್ ಜಗ್ ನಕ್ ಜಗ್ ನಕ್ ಜಗ್ ಜಗ್ ಜಗ್……. ಎಂದು ಒಂದೆಜ್ಜೆ, ಎರಡಜ್ಜೆ, ಮೂರು ಹೆಜ್ಜೆ, ಹುಲಿ ಹೆಜ್ಜೆ ಹಾಕುತ್ತಾ….. ಸಂತೋಷದಿಂದ ಇಯರ್ ಫೋನ್ ನಿಂದ ಬರುವ ತಮಟೆ ವಾದ್ಯಕ್ಕೆ ತಕ್ಕಂತೆ ಕುಣಿಯ ತೊಡಗಿದೆ. ಎಷ್ಟು ದಿನ ಆಗಿತ್ತೊ ಕುಣಿದು.. ಕಾಲೇಜ್ ನಲ್ಲಿ, ಸಿಟಿ ಅಣ್ಣಮ್ಮ ದೇವಸ್ಥಾನದ ಮುಂದೆ ಮತ್ತು ಧರ್ಮರಾಯ ಕರಗದಲ್ಲಿ ಕುಣಿದುದು., ಸಂತೋಷ ಒಂದು ಹದಕ್ಕೆ ಬಂತು ಕುಣಿತ ನಿಲ್ಲಿಸಿದೆ.
ಪ್ರಕೃತಿಯ ಮನ ಮೋಹಕ ದೃಶ್ಯವನ್ನಾ ಬಂಧಿಸಲು….ತಕ್ಷಣ ನನ್ನ CANON DSLR 900 ಕ್ಯಾಮಾರದಲ್ಲಿ ವಿವಿಧ ಚೌಕಟ್ಟುನಲ್ಲಿ ಸೆರೆ ಹಿಡಿಯ ತೊಡಗಿದೆ. ಸೌಂದರ್ಯದ ನಶೆ ಅನುಭವಿಸುತ್ತಾ ಅರೆ ಮಂಪರಿನ ಖುಷಿಯಲ್ಲಿ ತೇಲಾಡಿದೆ.
ಹಾಗೆ ಛಾಯಚಿತ್ರ ಮತ್ತು ಕಿರು ವಿಡಿಯೋ ಚಿತ್ರಿಸುತ್ತಿದ್ದಾಗ… ಚಿಕ್ಕ ಚಿಕ್ಕ ಗಂಟೆಗಳ ಸಂಗೀತಕ್ಕೆ ಮನಸೋತು ಹಿಂತಿರುಗಿ ನೋಡಿದಾಗ….ಹೊಲಕ್ಕೆ ಹೊರಟ ರೈತಾಪಿ ಕುಟುಂಬಗಳು ಅವರ ಸಂಗಡ ಗಟ್ಟಿ ಮುಟ್ಟಾದ ದೃಢವಾದ ಹತ್ತಾರು ಎತ್ತುಗಳು, ಹಾಲು ಕೊಡುವ ಹಸುಗಳು ಅದರ ಹಿಂದೆ ಓಡುವ ಪುಟ್ಟ ಪುಟ್ಟ ಕರುಗಳು, ಕುರಿ ಮೇಕೆ….ಮಂದೆ ಮಂದೆಯಾಗಿ ಮುಂದೆ ಮುಂದೆ ಹೋಗತೊಡಗಿತು. ಹಾಗೆ ಮುಂದೆ ಸಾಗುತ್ತಿದ್ದಾಗ…. ನಾನು ಆ ರೈತಾಪಿ ಕುಟುಂಬದ ನಡಿಗೆಗೆ ತಕ್ಕಂತೆ ಉದಯ ನೆಸರನ ಹಿಂದೆ ಸರಿಯಾದ ಚೌಕಟ್ಟಿಗೆ ಝಂ ಲೆನ್ಸ್ ಸರಿ ಹೊಂದಿಸಿಕೊಂಡು…. ಆ ಸೊಬಗಿನ ದೃಶ್ಯವನ್ನು ಸುಮಾರು ಫೋಟೋ ಕ್ಲಿಕ್ ಮಾಡುವುದು ಮುಂದುವರೆಸಿದೆ. ಹಳ್ಳಿಯ ಜನ ಖುಷಿಯಾಗಿ ನನ್ನ ಕಡೆ ನೋಡಿ ನಗುತ್ತಾ… ಮುಂದೆ ಸಾಗ ತೊಡಗಿದರು. ಅವರ ನಿಷ್ಕಂಳಕ ನಗು ಮತ್ತಷ್ಟು ಫೋಟೋ ತೆಗೆಯಲು ಹುಮ್ಮಸ್ಸು ಬರತೊಡಗಿತು…ಈ ಹೊಂಬೆಳಕಿನ ಸೊಬಗಲಿ…ಹಸಿರಿನ ತಳಿರು ತೋರಣದ ಅಲಂಕಾರದ ಅಂದದಲ್ಲಿ… ಮೈ ಮರೆತಿದ್ದಾಗ
ಇದ್ದಕ್ಕಿದ್ದಂತೆ ಭಯಂಕರ ಸಿಡಿಮದ್ದಿನ ಸ್ಪೋಟಗಳು ಸತತವಾಗಿ ಸಿಡಿಯತೊಡಗಿತು…ಸಮಯಕ್ಕೆ ವಿರಾಮವಿಲ್ಲದೆ.
ಇದುವರೆಗೂ ಇದ್ದ ಸೌಂದರ್ಯ ಸೊಬಗು ಪ್ರಶಾಂತತೆ ಕ್ಷಣದಲ್ಲೆ ಏರುಪೇರು ಬೆಳವಣಿಗೆ. ಸ್ಪೋಟದ ಶಬ್ದ ಕಿವಿಗೆ ಅಪ್ಪಳಿಸಿತು. ಕಿವಿ ತಮಟೆ ಒಡೆದಂತೆ ಭಾಸವಾಯಿತು. ಆ ಶಬ್ದಕ್ಕೆ ಮುಂದೆ ಸಾಗುತ್ತಿದ್ದ… ಕುರಿ ಮೇಕೆಗಳು ದಿಕ್ಕಪಾಲಗಿ ಓಡಿದವು….ಬೆದರಿದ ಉಳುಮೆಯ ಎತ್ತುಗಳು ನೇಗಿಲು ಸಮೇತ ಓಡ ತೊಡಗಿದವು.ಇನ್ನೂ ಕೆಲ ದನಗಳು ಮೂಗುದಾರ ಕಿತ್ತು ಹೋಗುವಂತೆ ಸಿಕ್ಕಸಿಕ್ಕ ಕಡೆ ಹಳ್ಳಿ ರೈತರನ್ನಾ ಎಳೆದುಕೊಂಡು ಹೋಗ ತೊಡಗಿತು. ಹಸುಗಳು ಕರುಗಳು ಬೆಚ್ಚಿ ಬಿದ್ದು ‘ ಅಂಬಾ… ಅಂಬಾ..ಅಂಬಾ..’ ಎಂದು ಕೂಗುತ್ತಾ ದಿಕ್ಕಾಪಾಲಾದವು.
ಇದುವರೆಗೂ ಇದ್ದ ಪ್ರಕೃತಿಯ ರಸ ಕ್ಷಣ, ಕ್ಷಣಗಳಲ್ಲೆ ಮರೆಯಾಗಿ, ಆಕಾಶದೆತ್ತರಕ್ಕೆ ಚಿಮ್ಮಿದ ಸಾವಿರಾರು ಪರಂಗಿ ಹಣ್ಣಿನ ಗಾತ್ರದ ಕಲ್ಲು ಬಂಡೆಯ ತುಂಡುಗಳು ಕೆಳಗೆ ರಭಸವಾಗಿ ಬೀಳತೊಡಗಿತು. ಸುತ್ತಾ ಆಗಾಧ ಮಣ್ಣು ಮಿಶ್ರಿತ ಕಲ್ಲು ಚೂರಿನ ಬಿಳಿಯ ಧೂಳಿನ ಭಾರಿ ಹೊಗೆ ಆವರಿಸಿಕೊಂಡು ಏನೇನೂ ಕಾಣದಾಯಿತು. ಕಣ್ಣಿಗೆ ಬಿದ್ದ ಧೂಳನ್ನು ಉಜ್ಜಿಕೊಳ್ಳುತ್ತಾ… ಅಲ್ಲೆ ತಟ್ಟಾಡ ತೊಡಗಿದೆ ಸುರಕ್ಷಿತ ಸ್ಥಳಕ್ಕೆ ತೆರಳಲು.
ಅಂತಹ ಸಮಯದಲ್ಲಿ ನನ್ನ ಕೈಯನ್ನು ಹಿಡಿದು ದರದರನೆ ಎಳೆದುಕೊಂಡು ತುಸು ದೂರ ಕೊಂಡೊಯ್ದು, ತಲೆ ಮೇಲೆ ಕೈ ಆದುಮಿ ಕುಳ್ಳರಿಸಿತು. ಯಾರೋ ಒಬ್ಬ ವ್ಯಕ್ತಿ…. ಆ ವ್ಯಕ್ತಿ ಯಾರು ಎಂದು, ಅರೆಬರೆ ಕಣ್ಣು ತೆರೆದೆ. ಮರದ ಕೆಳಗೆ ಕುಳಿತಿದ್ದೇನೆ. ಲಂಗ ದಾವಣಿ ತೊಟ್ಟ ಹುಡುಗಿಯೊಬ್ಬಳು.. ನನ್ನ ತಲೆಯ ಮೇಲೆ ಛತ್ರಿಯಂತೆ ದಾವಣಿಯ ಸೆರಗನ್ನು ಹರಡಿದ್ದಾಳೆ.ಧೂಳು ಇನ್ನೂ ಬೀಳುತ್ತಲೆ ಇದೆ. ನಾನು ಅವಳ ಎರಡು ಕೈ ತೋಳುಗಳ ಮಧ್ಯೆ ಸಿಲುಕಿದ್ದೆನೆ. ಅವಳ ತುಂಬಿದೆದೆ ಕಣ್ಣು ಮುಂದಿದೆ, ಬಿಸಿಯುಸಿರು ನನ್ನ ಕೆನ್ನೆ ಸೊಕುತ್ತಾ…ಯಿದೆ, ಅಂಥಹ ಸಮಯದಲ್ಲೂ.. ನಕ್ಷತ್ರ ಕಾಣುಸುತ್ತಾ ಮೈ ಬೆಚ್ಚಗೆಯಾಯಿತು. ಬಲವಂತವಾಗಿ ಕಣ್ಣು ತೆರೆದೆದ್ದಕ್ಕೆ ಕಣ್ಣು ಉರಿಯತೊಡಗಿತು.
” ಅಮ್ಮ ” ಎಂದೆ ಕಣ್ಣು ಉಜ್ಜುತ್ತಾ
” ಓಯ್ ಪ್ಯಾಟೆ ಹೈದ ಒಸಿ ತಡಕ… ಉಜ್ಜಿದರೆ ನಂಜಾಗುತ್ತೆ…” ಎನ್ನುತ್ತಾ ಮುಖದಲ್ಲಿದ್ದ ಧೂಳು ತನ್ನ ದಾವಣಿಯ ಅಂಚಿನಲ್ಲಿ ಒರೆಸುತ್ತಾ, ನಿಧಾನವಾಗಿ ಕಣ್ಣನ್ನಾ ಅವಳ ಕೈಯಿಂದ ತೆರೆದು ಬಾಯಿಂದ ಊದ ತೊಡಗಿದಳು. ನನಗೆ ‘ ಉಸಿರು ‘ ನಿಂತಿತು ಕ್ಷಣ. ಹಾಗೆ ನೀರಿಂದ ಅವಳೆ ಮುಖ ತೊಳೆದು, ದಾವಣಿಯಲ್ಲಿ ಮೃದುವಾಗಿ ಒರೆಸತೊಡಗಿದಳು. ನಂತರ ದಾವಣಿಯ ಅಂಚನ್ನು ನಿಂಬೆಯ ಗಾತ್ರಕ್ಕೆ ಸುತ್ತಿ ಅವಳ ಬಾಯಿಂದ ಊದಿ (ಉಬ್ಬೆ) ಕಣ್ಣುಗಳಿಗೆ ಒತ್ತ ತೊಡಗಿದಳು. ತುಸು ಸಮಯದ ನಂತರ ಕಣ್ಣು ನವೆ ನೋವು ಕಡಿಮೆಯಾಗ ತೊಡಗಿತು.
” ನಿಧಾನವಾಗಿ ಕಣ್ಣು ತೆರೆ ” ಎಂದಳು
ಒಂದರೆಡು ನಿಮಿಷಕ್ಕೆ ಕಣ್ಣು ಮೊದಲಿನಂತೆ ಕಾಣ ತೊಡಗಿತು. ಲಂಬಾಣಿ ಸಂಪ್ರಾದಾಯದ ಅಲಂಕಾರದಲ್ಲಿ ದಂತದ ಮೈ ಬಣ್ಣದ ಏರು ಜವ್ವನೆಯ ರೂಪಸಿ. ರಂಭೆ ಊರ್ವಶಿ ಮೇನಕೆ ತಿಲೋತ್ತಮೆ ಇವರಿಲ್ಲರುವ ಅಂಗಾಂಗದ ಎಲ್ಲಾ ಸೊಬಗೆಲ್ಲಾ ಇವಳ ಒಬ್ಬಳಲ್ಲೆ ಝಂಕ್ಷನ್ ಬಾಕ್ಸ್ಂತೆ ಒಂದೆ ಕಡೆ ಸೇರಿಕೊಂಡಿದೆ. ಒಳ್ಳೆ ಸಂಪತ್ತ್ಭರಿತವಾದ ನಿತ್ಯ ಹರಿದ್ವರಣ ಮಲೆನಾಡಿನ ಚೆಲುವೆಲ್ಲಾ ಇವಳಲ್ಲಿ ತುಂಬಿ ತುಳುಕಾಡಿ ಹೊರ ಬರುತ್ತಿದೆ. ಚೆಲುವು ಹೀಗಿದ್ದರೆ ಇನ್ನಾ… ಇವಳ ಒಲವು ಹ್ಯಾಗಿದಿಯೋ..!?. ಮನ್ಮಥ ರಾಜ ಬೇಗ ಹೂಡು ನಿನ್ನ ಮದನ ಬಾಣವ…! ಇವಳ ಮುಂದೆ ನನ್ನ ಕಾಲೇಜ್ ಗೆಳತಿಯರು ಎನೇನೂ ಇಲ್ಲಾ. ಅವಳನ್ನಾ ನೋಡುತ್ತಾ “ಥ್ಯಾಂಕ್ಸ್ ” ಎಂದೆ.
ಅವಳು ನಗುತ್ತಾ ” ಅಲ್ಲಯ್ಯ ಕ್ಟಾರಿ ಕಲ್ಲು ಮ್ಯಾಕಿಂದ ಉದರತಿದ್ದರೆ ಮೂದೇವಯಂಗೆ ಅಂಗೆ ನಿಂತಿದ್ದಿಯಾ. ಕಲ್ಲು ತಲೆ ಬಿದ್ದಿದ್ದರೆ ಹೆಂಗೆಯ ಅಂತ… ” ಎಂದಳು ಕಾಳಜಿ ತೋರಿಸುತ್ತಾ
” ಅಯ್ಯೋ ನನಗೆ ಆ ಕ್ಷಣಕ್ಕೆ ಏನು ತೊಚಲಿಲ್ಲಾ…..” ಎಂದೆ ಅವಳ ಹಳ್ಳಿಯ ಮುಗ್ಧ ಮುಖ ನೋಡುತ್ತಾ
” ಇಗಾ ಎಂಗದೆ ಕಣ್ಣ್ ” ಎಂದಳು ಎದ್ದು ನಿಲ್ಲುತ್ತಾ.
ನಾನು ಏಳುತ್ತಾ ” ನಿನ್ನ ಹೆಸರೇನು ” ಎಂದೆ.
” ಯಾಕಾ…” ಸೊಂಟದ ಮೇಲೆ ಕೈ ಹಿಡಿದುಕೊಂಡು ರಾಗ ಎಳೆಯುತ್ತಾ ಪಕ್ಕ ಹಳ್ಳಿ ಹುಡುಗಿಯಂತೆ
” ಸುಮ್ಮನೆ ಅಷ್ಟೇ…. ನನ್ನ ಹೆಸರು ಧನುಸ್ಸ್….. ನಿಂದು ಹೇಳು ಹುಡುಗಿ…” ಎಂದೆ.ಅವಳ ಪುಟ್ಟ ಕೆಂಪನೆ ಬಿಲ್ಲಿನಕಾರದ ತುಟಿಯ ನೋಡುತ್ತಾ
” ರತ್ನ ” ಎಂದಳು ಕೆನ್ನೆಯಲ್ಲಿ ಗುಳಿ ಬೀಳಿಸುತ್ತಾ…
” ನಿನ್ನಂಗೆ ನಿನ್ನ ಹೆಸರು ಪಸಾಂದಗಿದೆ. ” ಎಂದೆ
” ಈ ಅಳ್ಳಿಯ ದಿನ್ನೆಗೆ ಯಾಕ ಬಂದಿ..” ಎಂದಳು.
” ನಿನ್ನ ನೋಡುಕೆ….” ಎಂದೆ ಅವಳ ನೀಲಿ ಕಣ್ಣು ನೋಡುತ್ತಾ.
ನನ್ನ ತಲೆಗೆ ಚಿಕ್ಕದಾಗಿ ಮೊಟುಕಿದಳು.
ಹೌದು ಏಕೆ ಬಂದೆ ಅನಿಸಿತು ಕ್ಷಣ.ಬಂದ ಕೆಲಸವೆ ತಕ್ಷಣ ನೆನಪಿಗೆ ಬರಲಿಲ್ಲಾ…ಇವಳ ಸೌಂದರ್ಯ ನೋಡುತ್ತಾ. ನಂತರ ನನ್ನ ಚರ್ಯೆಗೆ ನನಗೆ ನಗು ಬಂತು.
” ಯಾಕಲೇ ಪ್ಯಾಟೆ ಹೈದ ಹಂಗ ನಗಾಡುತಿಯಾ..” ನನ್ನ ನೋಡುತ್ತಾ
ನಾನು ಬಂದ ವಿಷಯ ಇವಳಿಗೆ ಹೇಳುವುದು ಬೇಡವೆಂದು ಕೊಂಡು, ಇವಳಿಂದಲೇ ಕಲ್ಲು ಕ್ವಾರಿ ಬಗ್ಗೆ ಉಪಾಯವಾಗಿ ಇಲ್ಲಿನ ವಿಷಯಗಳು ಅರಿಯಬೇಕೆಂದುಕೊಂಡು ನಿರ್ಧರಿಸಿದೆ.
” ಇವತ್ತು ಕೆಲಸಕ್ಕೆ ರಜೆ.ಅದಕ್ಕೆ ಈ ಬೆಟ್ಟ ಗುಡ್ಡ ನದಿ… ಫೋಟೋ ತೆಗೆಯೋಣಂತ. ಖುಷಿಯಾಗಿ ಬಂದೆ.” ಎಂದೆ.
“ಈಗ ಏನು ಉಳಿದೈತೆ ಹುಡುಗ. ಭೂ ತಾಯಿಯ ಮೈಯಲಿ…ನೀ ಪಟ ತೆಗೆಯೊಕೆ “ಎಂದಳು ತುಸು ನೋವಿಂದ
“ಹಂಗಂದರೆ ” ಎಂದೆ ಆಮಾಯಕನ ಮುಖ ಭಾವ ತೋರುತ್ತಾ.
” ಒಸಿ ವರ್ಷದ ಹಿಂದೆ… ಈ ಅಳ್ಳಿ ಇಂದ್ರನ ಊರು ಇದ್ದಂಗಿತ್ತು. ಈಗ ನೋಡಯ್ಯ ಎಂಗದೆ ಶಿವಯ್ಯನ ಸುಡುಗಾಡು ಇದ್ದಂಗೆ…. ” ಎಂದಳು.
ಸುತ್ತಾ ನೋಡಿದೆ.
ಮುಂಜಾನೆಯಲಿ ಕಂಡ ಸೌಂದರ್ಯವಿಲ್ಲಾ. ಈಗ ಇಲ್ಲಾ.ಅರೆ ಬೆಳಕಲಿ ಕಂಡ ಸೌಂದರ್ಯದ ಮಾಯೆ ಮರೆಯಾಗಿ… ಸತ್ಯ ಪೂರ್ಣ ಬೆಳಕು ಹರಡಿದೆ. ಎಲ್ಲಾ ಕಡೆ ಧೂಳು,ಕಸ,ಕಡ್ಡಿ,ಕಲ್ಲಿನ ಚೂರುಗಳು.ಗಿಡ ಮರಗಳ ಮೇಲೆಲ್ಲಾ ಮಣಗಟ್ಟಲೆ ಗಣಿ ಧೂಳು ಅವರಿಸಿ ಮರಗಳ ನಿಜ ಸೌಂದರ್ಯ ಮರೆಮಾಚಿದೆ. ಸತ್ಯ ಕಾಣಲು ಪ್ರಾರಂಭವಾಗುತ್ತಿದೆ. ಸುತ್ತ ನೋಡಿದೆ. ಕೆಲವು ಬಾರಿ ಸತ್ಯ ಅರಗಿಸಿಕೊಳ್ಳುಕೆ ಸಮಯ ಬೇಕಾಗುತ್ತೆ.
” ಇದೆಲ್ಲಾ ಏನು..? ” ಎಂದೆ ಎಲ್ಲಾ ಅರಿವು ಇದ್ದರೂ..
” ಪ್ಯಾಟೆ ದೊರೆಗಳ ದುರಾಸೆ…”
” ಅಂದರೆ…”
” ಅದೇ ಕಣಯ್ಯ… ಬೆಟ್ಟನ ಬಗೆಯೊದೂ … ಇವರ ಅರಮನೆಲಿ ರೊಕ್ಕನ ಬೆಟ್ಟ ಮಾಡೋದೂ..!!??…ನಮ್ಮ ಬಾಯ್ಗೆ ಮಣ್ಣ್ ಹಾಕೋದು…” ಎಂದಳು ನೋವಿಂದ.
ಅವಳ ಹೇಳಿದ ರೀತಿಗೆ ಏನು ಹೇಳಬೇಕೆಂದು ತೋಚದೆ ಕ್ಷಣ ಸುಮ್ಮನಾದೆ.
” ನೀನು ನನಗೆ ಸಹಾಯ ಮಾಡಿದರೆ.. ಈ ಕಲ್ಲು ಗಣಿಗಾರಿಕೆ ನಿಲ್ಲಸಲು ಪ್ರಯತ್ನ ಮಾಡುತ್ತಿನಿ… ವಿಷಯಕ್ಕೆ ಪೀಠಿಕೆ ಹಾಕುತ್ತಾ…” ಎಂದೆ ಪ್ರಮಾಣಿಕವಾಗಿ
” ಓಯ್ ಕಾಣೋಕೆ ಮಜ್ಜಿಗೆ ಹಣ್ಣಂಗೆ
ಇದ್ದಿಯಾ…. ನೀಯೆನ್ ಕಿಸಿತಿಯಾ…ಇಲ್ಲಿನ ರೀತಿ ರೀವಾಜ್ ನೀನೇನು ತಿಳೆಯೇ….ಈ ಆಳ್ಳಿಯಲಿ ಆದೆಷ್ಟು ಮಂದಿಗೆ ಕೈ ಕಾಲು ಮುರಿತು..ಮಂದಿಯ ಉಸಿರು ಅರೆಬರೆ ವಯಸ್ಸಲೆ ಮಸಣಕೊಯಿತು. .ಯಾರಾರು ಮನೆ ಹಟ್ಟಿ ಮುಂದೆ ಹೊಗೆ ಆಕಾಸ ಕಾಣತು… ನಿಂಗೆನೂ ಕಂಡಿತು…ಈ ದೊರೆಗಳು ಯಾವುದಕ್ಕೊ ಹೆಸರೋಲ್ಲಾ..” ಎಂದಳು.
ನಾನು ಅವಳ ಮಾತಿಗೆ ಬೇಸರ ಮಾಡಿ ಕೊಳ್ಳದೆ ” ನೋಡು ನಾನು ಓದಿರುವವನು ಇಂಥಹ ಗಣಿಗಾರಿಕೆನ ಕಾನೂನುಬದ್ಧ ಹೇಗೆ ಎದುರಿಸಬೇಕೆಂದು ಅರಿವು ಇದೆ. ಅದರೆ ನ್ಯಾಯಲಯಕ್ಕೆ ಪಕ್ಕ ಸಾಕ್ಷಿ ಬೇಕು.ಈ ವಿಷಯದಲ್ಲಿ ತಡ ಅದರೂ ನ್ಯಾಯ ಸಿಕ್ಕಿ ಗಣಿಗಾರಿಕೆ ನಿಲ್ಲಿಸಬಹುದು….” ಎಂದು ಕೋರ್ಟ್,ಕಛೇರಿ,ಪತ್ರಿಕೆ, ಸುದ್ದೀ ವಾಹಿನಿಯ ಬಗ್ಗೆ ಎಲ್ಲಾ ವಿವರಿಸಿ ಹೇಳತೊಡಗಿದೆ ಪ್ರಮಾಣಿಕವಾಗಿ.
ಅವಳು ನಂಬಿದಳು ಅನಿಸುತ್ತೆ.
“ನೋಡಯ್ಯ ನೀನು ಹೇಳೋದು ಅರ್ಥ ಅಗೋಕಿಲ್ಲಾ…ಆದರೂ ನಿನ್ನ ನಂಬುತ್ತಿನಿ ಪ್ಯಾಟೆ ಹೈದ” ಎಂದಳು.
” ನನ್ನ ನಂಬು ” ಎಂದು ಅವಳ ಕೈಹಿಡಿದು ಭರವಸೆ ನೀಡುವಂತೆ ಹಿಡಿದೆ.
ರತ್ನಗೆ ನಂಬಿಕೆ ಬಂತು ಎನಿಸಿತು.
“ಹೇಳಯ್ಯ ಪ್ಯಾಟೆ ಹೈದ ನಾ ನಿಂಗ ಎಂಗ ಸಹಾಯ ಮಾಡಲಿ….” ಎನ್ನುತ್ತಾ ನಾ ಹಿಡಿದ ಕೈನ್ನು ವಿಶ್ವಾಸದಿಂದ ಬಿಗಿ ಗೊಳಿಸಿದಳು
ನಾನು ಆ ಎರಡು ಕೈಯನ್ನು ತುಸು ಕ್ಷಣ ಬಿಗಿಮಾಡಿ ಆಭಯ ನೀಡುವಂತೆ ಹಿಡಿದು…. ತುಸು ಸಮಯದ ನಂತರ ಕೈ ಬಿಡಿಸಿಕೊಂಡು.
ಮರಕ್ಕೆ ಹಾಗೆ ಬೆನ್ನು ಆನಿಸಿ. ಕ್ಲಾಸಿಕ್ ಮೆಂಥಲ್ ಸಿಗರೇಟು ಹಚ್ಚಿ ಧಂ ಎಳೆದೆ.
ಮುಗಿದ ಸಿಗರೇಟ್, ” ಈ ಕಲ್ಲು ಗಣಿಗಾರಿಕೆ ಎಲ್ಲೆಲ್ಲಿ ನೆಡೆಯುತ್ತಿದೆ. ಆ ಪ್ರದೇಶದ ಹೆಸರು, ಅದರ ಆಳ ಆಗಲ ವಿಸ್ತಾರ…ಎಷ್ಟು ಬಗೆ ಬಗೆಯ ರೀತಿಯ ಕಲ್ಲುಗಳು…ಸುಮಾರು ವಿವರ ಬೇಕು. ನೀನು ಸಧ್ಯಕ್ಕೆ ಯಾವ ಯಾವ ಜಾಗದಲ್ಲಿ ಅಂತ ದೂರದಿಂದ ತೋರಿಸು… ಅದನ್ನೆಲ್ಲಾ ಫೋಟೋದಲ್ಲಿ ಕ್ಲಿಕ್ ಮಾಡಿ.. ಅವನ್ನಾ ಕೋರ್ಟ್ ಗೆ ಸಾಕ್ಷಿಯಾಗಿ ಪರಿವರ್ತನೆ ಮಾಡುತ್ತೆನೆ…..” ಎಂದೆಲ್ಲಾ ವಿವರಿಸಿದೆ.
ಪಾಪ ರತ್ನಗೆ ಅದೇನು ಅರ್ಥ ವಾಯಿತೊ.. ನನ್ನೆ ನೋಡುತ್ತಿದ್ದಳು.
“ಈಗ ನೀನು ಸದ್ಯಕ್ಕೆ ಆ ಜಾಗ ತೋರಿಸು ನಡಿ ” ಎಂದೆ ಎದ್ದೆಳುತ್ತಾ
ಅವಳು ಎದ್ದಳು ಪುಟ್ಟ ಬಟ್ಟೆ ಗಂಟಿನೊಂದಿಗೆ
” ಏನು ಅದು.. ” ಅಂದೆ
” ಕಣಿವೆಯಲ್ಲಿ ಮಜ್ಜಿಗೆ ಹಣ್ಣು ಕಾರೆ ಹಣ್ಣು ಕಿತ್ತುಕ್ಕೊಂಡು ಬರುವ ಅಂತ ಹೊಂಟಿದ್ದೆ.. ಅಂಗೆ ಬಿಸಿಲು ನೆತ್ತಿಗೆ ಬಂದ ಮ್ಯಾಗೆ ಉಣ್ಣಕೆ ರಾಗಿ ರೊಟ್ಟಿ ಬದನೆಕಾಯಿ ಪಲ್ಯ ಉಚ್ಚೇಳ್ಳು ಚೆಟ್ನನಿ…” ಎಂದಳು.
ನಾನು ಸರಿಯೆಂದು ತಲೆ ತೂಗುತ್ತಾ, KTM ನ ಧೂಳು ವರೆಸಿ, ಬ್ಯಾಗ್ ಬೆನ್ನಿಗೆ ತಗಲುಹಾಕಿಕೊಂಡು, ಕ್ಯಾಮಾರ ಕುತ್ತಿಗೆಗೆ ನೇತಾಡುಸುತ್ತಾ.. ಬೈಕ್ ಸ್ಟಾರ್ಟ್ ಮಾಡಿ….
“ರತ್ನ ಹತ್ತು” ಎಂದೆ.
ಹತ್ತಿ ಕುಳಿತಳು.” ಸೊಂಟ ಬಿಗಿ ಹಿಡಿ, ನಾನು ವೇಗ ಜಾಸ್ತಿ….” ಎಂದೆ.
ಹಿಡಿತ ಬಿಗಿ ಗೊಳಿಸಿದಳು.
” ಯಾವ ಕಡೆ..? ” ಎಂದೆ
ಅವಳು ಬಲ ಭಾಗಕ್ಕೆ ಇದ್ದ ಒಂದಡಿ ಕಾಲು ದಾರಿ ತೋರಿಸಿದಳು… ನಾನು KTM ಬಾಣದಂತೆ ನುಗ್ಗಿಸಿದೆ.
ಗುಡ್ಡದಂತಹ ಪ್ರದೇಶದಲ್ಲಿ ಕರೆದೊಯ್ದೊಳು.. ಅಲ್ಲಿಂದ ಗಣಿಗಾರಿಕೆ ಕಾಣುತ್ತಿದೆ. ಅಲ್ಲಿಂದಲೇ ಕ್ಯಾಮಾರ ಝಾಂ ನಿಂದ ಹತ್ತಿರವಾಗಿಸಿಕೊಂಡು ಕಲ್ಲು ಕ್ಟಾರಿಯ ಆಳ ಆಗಲ,ಬೆಟ್ಟದ ರೀತಿ ಬಿದ್ದ ಸೈಜ್ ವಾರಿ ಕಲ್ಲಿನ ತುಂಡುಗಳು,ಜೆಸಿಬಿ,ಇಟಾಚಿ,ಹತ್ತಾರು ಟ್ರಾಕ್ಟರ್,ಸರಕು ಜೋಡಿಸಿಕೊಂಡ ಇಪ್ಪತ್ತು ಲಾರಿಗಳು, ಸೈಜ್ ಕಲ್ಲು ಸಾಗಿಸುತ್ತಿದ್ದ ಕೂಲಿ ಆಳುಗಳು, ಕಬ್ಬಿಣದ ರೇಖಿನ ಶೆಡ್ ಗಳು ಹಾಗು ಟಾರ್ಪಲ್ ಟೆಂಟ್ ಗಳು…..ಹೀಗೆ ಸಂಭಂದಿಸಿದ ಫೋಟೋ ಕ್ಲಿಕ್ಕಿಸಿದೆ…ಹಾಗೆ ತುಸು ಮುಂದೆ ಹೋಗುತ್ತಾ ಕೆಲವು ವ್ಯಕ್ತಿಗಳ ಫೋಟೋ ತೆಗೆಯುತ್ತಿದ್ದಾಗ… “ಜಾಸ್ತಿ ಹತ್ತಿರ ಹೋಗ ಬೇಡಯ್ಯ, ಅವರು ನಿನ್ನ ನೋಡಿದರೆ ಜೀವಕ್ಕೆ ಸಂಚಕಾರ..” ಎಂದು ಕೈ ಹಿಡಿದಳು ಆಂತಕದಿಂದ.
ನಾನು ಅವರಿಗೆ ಕಾಣದ ಹಾಗೆ ಬಗ್ಗಿ ಕುಳಿತುಕೊಂಡು ಫೋಟೋ ತೆಗೆಯುತ್ತಿದ್ದೆ.
ನಾನು ಹಾಗೆ ಕುಳಿತುಕೊಂಡು ” ಇದೊಂದೆನ ಕ್ಟಾರಿಯ ಕೆಲಸ…” ಅಂದೆ
” ಐದಾರು ಕಡೆ ಇದೇ ರೀತಿ ಕಲ್ಲು ಕುಟ್ಟುತ್ತಾರೆ…” ಎಂದಳು ಹಿಡಿತ ಸಡಿಲಿಸಿ
” ಸರಿ ಆ ಜಾಗ ತೋರಿಸು ನಡಿ…” ಎಂದು ಗುಡ್ಡ ನಿಧಾನವಾಗಿ ಒಬ್ಬರಿಗೊಬ್ಬರ ಕೈ ಹಿಡಿದುಕೊಂಡು ಇಳಿದೆವು.
KTM ಗಾಳಿಯನ್ನು ಸೀಳುತ್ತಾ ಮುಂದೆ ಹೋಗುತ್ತಿತ್ತು… ರತ್ನಳ ಹಿಡಿತ ಹೆಚ್ಚಾಗುತ್ತಿತ್ತು.
” ನೀ ಇಷ್ಟು ಬಿಗಿಯಾಗಿ ಹಿಡಿದು ನನ್ನ ಮೈ ತಬ್ಬಿದರೆ ನನಗೆ ಶಾಖ ಹೆಚ್ಚಾಗಿ ಮೂಡು ಬರ್ತಾಯಿದೆ..” ಎನ್ನುತ್ತಾ ರತ್ನಳಿಗೆ ರೇಗಿಸಿದೆ.
” ಓಯ್ ಪ್ಯಾಟೆ ಹೈದ ಒಸಿ ಬಿಸಿ ಏರಲಿ ಅಂತನೆ ಒತ್ತರಿಸಿಕೊಂಡಿರೊದು…” ಎನ್ನುತ್ತಾ ಕತ್ತಿನ ಹಿಂಭಾಗ ಮೃದುವಾಗಿ ಚುಂಬಿಸಿದಳು.
ಕಿವಿ ಬೆಚ್ಚಗೆಯಿತು.
ನಾ ನಕ್ಕು ಬೈಕ್ ಹುಷಾರಾಗಿ ಓಡಿಸ ತೊಡಗಿದೆ.
ನಮ್ಮ ಸಿಟಿಯಲ್ಲಿ ಓಡಿಸಿದಷ್ಟು ಸಲೀಸು ಇಲ್ಲಿ ಇರಲಿಲ್ಲಾ…ರಸ್ತೆ ಹಳ್ಳ ದಿನ್ನೆ.. ಆದರೂ ಓಳ್ಳೆ ರೋಡ್ ಗ್ರಿಪ್ ಬೈಕ್ ಎಂದಕೊಂಡು ಬೈಕನ್ನು ಚುಂಬಿಸಿದೆ.
ಹಿಂದಿನಿಂದ ತಲೆಗೆ ಮೊಟಿಕಿದಳು ರತ್ನ.
” ಯಾಕೆ ಸುಂದರಿ….” ಎಂದೆ
” ಅಲ್ಲಯ್ಯ ಅದಕ್ಕೆ ಮುತ್ತುಕ್ಕಿತ್ತಿದ್ದಿಯಾ…ನಾ ಇಂಗ ಇರೋದ ಕಾಣಕಿಲ್ವಾ.. ” ಎಂದಳು ಮತ್ತೆರುವಂತೆ
” ಒಸಿ ತಡಕೋ ಅಮ್ಮಿ ಈ ಕೆಲಸ ಮುಗಿಲಿ..” ಎಂದೆ.
ಹೀಗೆ ಅಲ್ಲೇಲ್ಲಾ ಅಲೆದಾಡಿ ನನಗೆ ತೃಪ್ತಿಯಾಗುವಷ್ಟು ಫೋಟೊಗಳು ಶೇಖರಿಸಿದೆ. ಬಿಸಿಲು ಜಾಸ್ತಿಯಾಯಿತು.
ಹೊಟ್ಟೆ ಚುರುಗುಟ್ಟುತ್ತಿತ್ತು ಹಸಿವೆಯಿಂದ.ಅಲ್ಲೆ ಕುರುಚುಲು ಗಿಡಗಳ ಅಡವಿಯ ಕಣಿವೆಯೊಳಗಿನ ಮರದ ಕೆಳಗೆ ಕುಳಿತೆವು. ರೊಟ್ಟಿ ಬದನೆಕಾಯಿ ಪಲ್ಯ,ಉಚ್ಚೇಳು ಚಟ್ಟನಿ ಹಾಗೂ ಕಾರೆ ಹಣ್ಣು, ತೊಂಡೆಹಣ್ಣು, ಬೆಲ್ಲದ ಹಣ್ಣು…ಇಬ್ಬರು ಒಬ್ಬರಿಗೊಬ್ಬರು ತಿನ್ನಿಸಿಕೊಂಡೆವು. ನಮ್ಮ ಹೊಟ್ಟೆ ಮತ್ತು ಮನದ ಹಸಿವು ಸಂತೃಪ್ತಿ ಹೊಂದಿತು… ನಿಸರ್ಗ ಮಡಿಲಲ್ಲಿ.
ಕ್ಟಾರಿಯ ಫೋಟೋಗಳನ್ನೆಲ್ಲಾ ಒಮ್ಮೆ ನೋಡ ತೊಡಗಿದೆ. ಎಲ್ಲಾವು ಸರಿಯಾದ ಚೌಕಟ್ಟಿನಲ್ಲಿಯೇ ಕ್ಲಿಕ್ ಆಗಿದೆ.
“ಎನಯ್ಯ ಇಷ್ಟು ಪಸಂದಾಗಿ ಪೊಟೋ ತೆಗೆದೆದಿಯಾ…” ಮತ್ತಷ್ಟು ಒತ್ತರಿಸಿ ತಬ್ಬಿ ನನ್ನದೆ ಮೇಲೆ ತಲೆಯಾನಿಸುತ್ತಾ..
ನಾನು ಹಾಗೆ ಫೋಟೋ ನೋಡುತ್ತಾ ಯೋಚಿಸುತ್ತಿದ್ದಾಗ
“ಏನ ಯೋಚನ ಹಾದಿ..ಇನ್ನೊಂದು ದಪ ಬೇಕಾ ಕೂಡಿಕೆ…? ಎಂದಳು
ಹತ್ತು ಫೋಟೋ ತೋರಿಸುತ್ತಾ..” ಈ ವ್ಯಕ್ತಿಗಳು ಒಬ್ಬಬ್ಬರು ಎಲ್ಲಾನ್ನ ಸಿಗಬಹುದೆ ಮಾತಾಡೋಕೆ….” ಎಂದೆ
ರತ್ನ ಫೋಟೋ ನೋಡಿ ” ಇವರೆಲ್ಲಾ ರಕ್ಕಸರು ಇವರ ಸವಾಸ ಯಾಕಯ್ಯ..”
” ಕ್ಟಾರಿಯ ವಿಷಯದ ಸತ್ಯಗಳು ಇವರ ಕೈಲೆ ಬಾಯಿ ಬಿಡಿಸಬೇಕು..” ಎಂದೆ
” ನಾ ಅಂದುಕೊಂಡ ಇಂಗೆಯ ನೀ ಹೇಳೊದಂತ…” ಎನ್ನುತ್ತಾ ತಬ್ಬಿ.. ಮುತ್ತು ಕೊಟ್ಟಳು.
“…………..”
” ಇವರೆಲ್ಲಾ ಸಂಜೆಗೆ.. ಧಾರು (ಹಾಟ್ ಡ್ರಿಂಕ್) ಕುಡಿಯೊಕೆ ದುಖಾನ್ ಗೆ ಬರ್ತ್ತಾರೆ…” ಎಂದಳು.
ನಾನು ಉತ್ಸಾಹದಿಂದ ” ಯಾವ ಅಂಗಡಿ ಅಂದೆ..? ” ಎಂದೆ
” ಹೇಳುವ….. ಅದಕೂ ಮೊದಲು ನಾವು ಈ ದುಖಾನ್ ತೆರೆಯೋಣ” ಅಂತ ಕಣ್ಣಲ್ಲೆ ಮತ್ತೆ ಮೇಲೆರುತ್ತಾ ಆಹ್ವಾನಿಸಿದಳು.
ರತ್ನಳನು ಅವರ ಹಟ್ಟಿಗೆ ತಲುಪಿಸಿ. ಫೋಟೋ ಗಳನ್ನಾ ಲ್ಯಾಪ್ ಟಾಪ್ ನಲ್ಲಿ ಇಟ್ಟು, ಫ್ರೆಷಪ್ ಆಗಿ ರೂಂಲ್ಲಿ, ರತ್ನ ಹೇಳಿದ ಬಾರ್ ಬಳಿ ನಿಂತು ನನ್ನ ವಿಷಯಕ್ಕೆ ಸರಿ ಹೊಂದುವ ಮಿಕವನ್ನು ಹುಡುಕತೊಡಗಿದೆ. ಕ್ಟಾರಿಯಲ್ಲಿ ಅಡ್ಡಡಾತ್ತಿದ್ದ ಮಿಕ ಸಿಕ್ಕಿತ್ತು. ಆ ವ್ಯಕ್ತಿಗೆ ಕಂಠ ಪೂರ್ತಿ ವಿಸ್ಸ್ಕಿ ನನ್ನ ಹಣದಲ್ಲಿ ಕುಡಿಸಿ ನನಗೆ ಬೇಕಾದ ಮಾಹಿತಿಯನ್ನು ಪಡೆದು ಕೊಳ್ಳುತ್ತಾ…ಅವನ ಮಾತುಗಳನ್ನಾ ಹಾಗೆ ನನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿ ಕೊಳ್ಳ ತೊಡಗಿದೆ. ಮತ್ತು ಅವನು ಗೌರೂರ ಹಳ್ಳಿಗಳಲ್ಲಿ ಕ್ಟಾರಿಗಳು ನೆಡೆಯುತ್ತಿರುವ..ನೆಡೆದು ನಿಂತು ಹೋಗಿರುವ……ಸ್ಥಳ ಬಗ್ಗೆ ಮಾಹಿತಿ ಕೊಟ್ಟ ಕುಡಿದ ಮತ್ತಿನಲ್ಲಿ. ವಿಷಯಗಳು ಸಂಗ್ರಹಿಸಿದ ನಂತರ ಆವನ ಜೇಬಿಗೆ ಐನೂರು ನೂಟು ತುರುಕಿ ಹೊರಬಂದೆ.
ರೂಂಗೆ ಬಂದು ಮತ್ತೆ ಲ್ಯಾಪ್ ಟಾಪ್ ನಲ್ಲಿ ಫೋಟೋ ಸಂಗ್ರಹಿಸಿದೆ. ಮುಂಜಾನೆಯೆ ಗೌರೂರು ಕಡೆ ಹೊರಡಬೇಕೆಂದು ತಿರ್ಮಾನಿಸಿದೆ.
ಗೌರೂರು ತಲುಪಿ,ಊರಾಚೆಯ ಮಲ್ಲೂಡಿ ಕೆರೆ ಬಳಿ ಮೂವತ್ತು ವರುಷದ ಹಿಂದೆ ಕಲ್ಲು ಗಣಿಗಾರಿಕೆ ನೆಡೆದು ಈಗ ಅದರಲಿ ನೀರು ತುಂಬಿರುವ ಭಾರಿ ಗಾತ್ರದ ಅಂದರೆ ಸಾವಿರಾರು ಬಾವಿ ಸಾಮರ್ಥ್ಯವಿರುವ ಗುಣಿಗಳ ಫೋಟೋ ಮತ್ತು ವೀಡಿಯೋ ತೆಗೆದೆ. ಅಲ್ಲಿಂದ ಜಲ್ಲೋಡ್ ಬಳಿ ಪ್ರಸ್ತುತ ನೆಡೆಯುತ್ತಿರುವ ಫೋಟೋ ವೀಡಿಯೋ ಚಿತ್ರಿಸಿಕೊಂಡೆ. ತುಸು ಯಾಮಾರಿದರು ಪ್ರಾಣಕ್ಕೆ ಕುತ್ತು ತರುವ ವಿಚಾರ. ಸಿಡಿಮದ್ದು ಸಿಡಿಯುವ ಮುಂಚೆಯೇ ಅಲ್ಲಿಂದ ಸೀದಾ ಹೊರಟು, ರೂಂ ಸೇರಿ, Don’t Distrb ಎಂದು ಬಾಗಿಲಿಗೆ ಕಾರ್ಡ್ ತಗಲಾಕಿ, ಲ್ಯಾಪ್ ಟಾಪ್ ವರದಿ ಬರೆಯಲು ಕುಳಿತೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮರಕ್ಕುಂದದಲ್ಲಿ ಇಂತಹ ಕಡೆ, ಇಷ್ಟು ವಿಸ್ತೀರ್ಣದಲ್ಲಿ, ಇಂತಹ ವ್ಯಕ್ತಿಯ ಭೂಮಿಯಲ್ಲಿ ಜೇಸಿಬಿ ಮತ್ತು ಇಟಾಚಿ ಸಂಖೈ, ಕೂಲಿ ಆಳುಗಳಿಂದ…. ಕಲ್ಲುಗಣಿಗಾರಿಕೆ ನೆಡೆಯುತ್ತಿದೆ.ಅದರಲ್ಲಿ ಸರಕಾರದಿಂದ ಪರವಾನಿಗೆ ಪಡೆದ, ಪರವಾನಿಗೆ ಪಡೆದು ನಿಯಮ ಮೀರಿ ಹೆಚ್ಚಿನ ಪ್ರದೇಶದಲ್ಲಿ ಭೂಮಿ ಬಗೆಯುತ್ತಿರುವ, ಪರವಾನಿಗೆ ಪಡೆಯದೆ ರಾಜಾರೋಷವಾಗಿ ತೋಳು ಬಲದಿಂದ ನೆಡೆಯುತ್ತಿರುವ….ಬಗ್ಗೆ ಬರೆದೆ. ಆ ಕ್ಟಾರಿಗಳಲ್ಲಿ ಬಾಂಡ್,ಕೂಚ,ಬಂಡೆ,ಬೂಡ್ರಸ್,ದಪ್ಪ ಮಿಡಿಯಂ ಬೇಬಿ ಬಟಾಣಿ ಜಲ್ಲಿ ಕಲ್ಲುಗಳ ಉತ್ಪಾದನೆ. ಅಂತಿಮವಾಗಿ ಬರುವುದು ಸಣ್ಣ ರವೆ ತರಹ ಸ್ಯಾಂಡ್ ಮರಳು. ನಂತರ ಆ ಸರಕನ್ನು ಲಾರಿಗಳಲ್ಲಿ ಹೋಗುತ್ತದೆ. ಯಾವಾವ ಚೆಕ್ ಫೋಸ್ಟ್ ದಾಟುತ್ತವೆ.
ಈ ರೀತಿ ಗಣಿಗಾರಿಕೆಗೆ ಸರಕಾರದ ಕೆಲವು ಹಾಲಿ ಮತ್ತು ಮಾಜಿ ರಾಜಕಾರಣಿಗಳ ಕೃಪೆಯ ನೆರಳಿನಲ್ಲಿ ಆಧಿಕಾರಗಳ,ಬಲಾಢ್ಯರ ತಂಡವೆ ಕೆಲಸ ಮಾಡುತ್ತಿದೆ. ಗಣಿಗಾರಿಕೆಯಿಂದ ಸಿಡಿಮದ್ದಿನ ಸ್ಪೋಟದಿಂದ ಆ ಹಳ್ಳಿಯ ಸುತ್ತಾಮುತ್ತಾ ಮನೆಗಳ ಬಿರುಕು ಬಿಟ್ಟಿರುವುದು, ಕೆಲವು ಮನೆಗಳು ಬಿದ್ದು ಹೋಗಿರುವುದು. ಗುಡಿ ಗೋಪುರ ಮಂದಿರ…ಕ್ಕೆ ಹಾನಿಯಾಗಿರುವುದು. ನದಿ ಕೆರೆ ಬಾವಿಯ ನೀರು ಕುಲಷಿತ ಆಗಿರುವುದು. ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವುದು. ಗಣಿಗಾರಿಕೆಯ ಧೂಳಿಂದ ಸಸ್ಯರಾಶಿಯ ಮೇಲೆ ಹರಡಿ ಕಾಡು ನಾಶವಾಗುತ್ತಿರುವುದು. ಇಲ್ಲಿನ ರಸ್ತೆಗಳು ಹಾಳಾಗಿ ಹೋಗಿರುವುದು. ಕೆಲಸ ನಿಂತ ಕ್ಟಾರಿಗಳಲ್ಲಿ ನೀರು ತುಂಬಿ, ಆ ನೀರು ಇಂಗಲು ಸಾಧ್ಯವಿಲ್ಲದೆ ಕೊಳೆತು ಕೆಟ್ಟ ವಾಸನೆ ಬೀರುತ್ತಿರುವುದು. ಹಳ್ಳಿಯ ಕಸವೆಲ್ಲಾ ಅದರಲ್ಲಿ ಸುರಿದು ಜಲ ಮತ್ತು ಅಂತರ್ ಜಲಕ್ಕೆ ಮಾರಕವಾಗುತ್ತಿರುವುದು. ಈ ರೀತಿ ನಿಂತ ನೀರಿನಲ್ಲಿ ಸುತ್ತಾ ತಡೆ ಬೇಲಿ ಇಲ್ಲದೆ ಸಾವು ಮತ್ತು ಅತ್ಮಹತ್ಯೆಗೆ ಕಾರಣವಾಗಿರುವುದು.
ಈ ರೀತಿ ಕಲ್ಲು ಗಣಿಗಾರಿಕೆಯ ಬಗ್ಗೆ ಸಂಕ್ಷಿಪ್ತವಾಗಿ 194 ಪುಟಗಳ ವರದಿ ಬರೆದೆ.ಒಂದು ಪತ್ರಿಕೆಯ ಸಂಪಾದಕರಿಗೆ. ಮತ್ತೊಂದು ಬರಹ ನ್ಯಾಯಲಯಕ್ಕೆ ಹೊಂದುವಂತೆ ಬರೆದು, ಅದನ್ನು ಹಿರಿಯ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಹೋರಾಟಗಾರ ಜಯಪ್ಪ ರವರಿಗೆ ಮತ್ತುಸಾಮಾಜಿಕ ಕಳಕಳಿಯಿರುವ ನ್ಯಾಯವಾದಿ ಹರಂತ್ ರವರಿಗೆ ಕೊಡಲು ಸಿದ್ದಪಡಿಸಿಕೊಂಡೆ.
ಎಲ್ಲಾ ಕೆಲಸ ಮುಗಿಸಿದೆ. ನಂತರ ಸಂಪಾದಕ ಶರ್ಮರಿಗೆ ಫೋನ್ ಮಾಡಿ ಸುದ್ದಿಯ ವಿಷಯವೆಲ್ಲ ತಿಳಿಸಿದೆ. ಶರ್ಮರವರು ನೀನು ಅಲ್ಲಿರುವುದು ಬೇಡ ತಕ್ಷಣ ರೂಂ ಖಾಲಿ ಮಾಡಿ ಸಿಟಿಗೆ ಬಂದು ಬಿಡೆಂದು
ಸಲಹೆ ಕೊಟ್ಟರು. ನಾನು ಸರಿಯೆಂದು ಹೇಳಿದೆ.
ರೂಂ ಖಾಲಿ ಮಾಡಿ, KTM ಬೈಕ್ ಏರಿ ಬೆಂಗಳೂರು ಕಡೆ ತಿರುಗಿಸಿದೆ. ಅಷ್ಟರಲ್ಲೆ ಬೈಕ್ಗೆ ಗುದ್ದಿಕೊಂಡು ಒಂದು ಟಾಟಾ ಸುಮೊ ಮುಂದೆ ನಿಂತಿತು. ಅದರಿಂದ ಐದು ಜನ ದಾಂಢಿಗರು ಇಳಿದರು, ಅವರ ಹಿಂದೆ ನನಗೆ ಸುದ್ದಿ ಹೇಳಿದ ವ್ಯಕ್ತಿಯು ನಿಂತಿದ್ದ, ಅವರು ನನ್ನ ಮೇಲೆ ದಾಳಿಗೆ ಸಜ್ಜಾಗಲೂ ಸಿದ್ದರಾದರು. ಅರೇ ಕ್ಷಣದಲ್ಲಿ ಪರಿಸ್ಥಿತಿ ಅರಿವಾಯ್ತು.. ಕ್ಷಣದಲ್ಲೆ ಬೈಕ್ ನ್ನು ಒಂದು ಚಕ್ರದಲ್ಲಿ ಎತ್ತಿ ಅವರ ಮೇಲೆಯ ನುಗ್ಗಿಸುತ್ತಾ.. ಹಾಗೆ ಅವರನ್ನಾ ಕಾಲಿಂದ ಜಾಡಿಸಿ ಒದ್ದು…. ಸಿಟಿ ಕಡೆ KTM ಬೈಕ್ ನ 200 ವೇಗದಲ್ಲಿ ನುಗ್ಗಿಸುತ್ತಾ… ಸಂಪಾದಕರಿಗೆ ಮತ್ತು ನನ್ನ ಗೆಳಯರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರುಗಳು ಭಯ ಬೇಡ ಅದಷ್ಟು ಬೇಗ ಸಿಟಿ ತಲುಪು…ನಿನ್ನ ರಕ್ಷಣೆ ನಮಗಿರಲಿ ಎಂದು ಅಭಯ ನೀಡಿದರು. ನನ್ನ KTMಗೆ ಚುಂಬಿಸುತ್ತಾ ನನ್ನ ರಕ್ಷಣೆ ನಿನಗೆ ಒಪ್ಪಿಸಿದ್ದೆನೆಂದು ಹೇಳುತ್ತಾ ಗಾಳಿಯಲ್ಲಿ ಬೈಕ್ ನುಗ್ಗಿಸಿದೆ.