ಈ ಹೊತ್ತಿಗೆಯಿಂದ, ನಾಟಕ ರಚನಾ ಕಮ್ಮಟ – 2024 ಜನವರಿ 26, 27 ಮತ್ತು 28

2024 ಜನವರಿ 26, 27 ಮತ್ತು 28 ರಂದು, ಬೆಳಗಾವಿಯಲ್ಲಿ ಈ ಹೊತ್ತಿಗೆಯ ‘ನಾಟಕ ರಚನಾ ಕಮ್ಮಟ’ ನಡೆಯಲಿದ್ದು, ಬೆಳಗಾವಿಯ ‘ನಮ್ಮವರೊಂದಿಗೆ’ ಬಳಗವು ಸಹಯೋಗ ನೀಡಲಿದೆ. ಈ ಹೊತ್ತಿಗೆ ಟ್ರಸ್ಟ್, ತನ್ನ ದಶಮಾನೋತ್ಸವ ಸಂಭ್ರಮದ ನಿಮಿತ್ತ ಆಯೋಜಿಸುತ್ತಿರುವ 3ನೇ ಕಮ್ಮಟ ಇದಾಗಿದೆ.

ನಾಟಕವು ಅತ್ಯಂತ ಪ್ರಭಾವಶಾಲಿ ಸಾಹಿತ್ಯ ಪ್ರಕಾರ. ಸಮುದಾಯದ ಆಗುಹೋಗುಗಳಷ್ಟೇ ಅದರ ಚಲನೆಗಳನ್ನು ಮುನ್ನೋಟದಲ್ಲಿ ಕೊಡಬಲ್ಲ ಶಕ್ತಿಯೂ ಇದಕ್ಕಿದೆ. ಸಾಹಿತ್ಯ ಪ್ರಕಾರವಲ್ಲದೆ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಹೋರಾಟಗಳ ಮಾಧ್ಯಮವಾಗಿಯೂ ನಾಟಕ ತನ್ನ ಬಹು ಪಾತ್ರಗಳನ್ನು ನಿಭಾಯಿಸುತ್ತಾ ಬಂದಿದೆ. ಆದ್ದರಿಂದಲೇ ಸಾಹಿತ್ಯ ಚರಿತ್ರೆಯಲ್ಲಿ ನಾಟಕಕ್ಕೆ ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ನಾಟಕ ರಚನೆಯ ತಾತ್ವಿಕ, ತಾಂತ್ರಿಕ ಹಾಗೂ ಸೌಂದರ್ಯಾತ್ಮಕ ನೆಲೆಗಳನ್ನು ಪರಿಚಯಿಸುವ ಹಾಗೂ ಕನ್ನಡದ ಸಮೃದ್ಧ ನಾಟಕ ಪರಂಪರೆಯನ್ನು ಅರಿಯುವ ನಾಟಕ ಶಿಬಿರವನ್ನು ಈ ಹೊತ್ತಿಗೆಯಿಂದ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ನಾಟಕ ರಚನೆಯಲ್ಲಿ ಉತ್ಸುಸಕರಾಗಿರುವವರಿಗೆ ಇದೊಂದು ಸುವರ್ಣಾವಕಾಶ.

ಕನ್ನಡ ಸಾಹಿತ್ಯಲೋಕದ ಮಹತ್ವದ ವಿಮರ್ಶಕಿಯಾದ ಡಾ. ಎಂ.ಎಸ್. ಆಶಾದೇವಿ ಅವರು ಕಮ್ಮಟಕದ ನಿರ್ದೇಶಕರಾಗಿರುತ್ತಾರೆ.

ಡಾ. ಕೆ ವೈ ನಾರಾಯಣಸ್ವಾಮಿ, ಶ್ರೀಪಾದ ಭಟ್, ಹೇಮಾ ಪಟ್ಟಣಶೆಟ್ಟಿ, ಡಾ. ರಾಮಕೃಷ್ಣ ಮರಾಠೆ, ಪ್ರಕಾಶ್ ಗರುಡ ಮತ್ತು ರಜನಿ ಗರುಡ ಅವರು ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ.

ಈ ಮೂರು ದಿನಗಳ ಈ ಕಮ್ಮಟದಲ್ಲಿ ಭಾಗವಹಿಸಲು ಬಯಸುವವರು ನಿಮ್ಮ ಪರಿಚಯ, ಸಂಪರ್ಕ ಸಂಖ್ಯೆ, ಭಾವಚಿತ್ರವನ್ನು ehottige.ks@gmail.com ಈ ಮಿಂಚಂಚೆಗೆ ಕಳುಹಿಸಿಕೊಡಿ.

1. ಕಮ್ಮಟದ ಪ್ರವೇಶ ಶುಲ್ಕ 2000 ರೂಪಾಯಿ. ಪ್ರವೇಶ ಶುಲ್ಕವನ್ನು ಮರಳಿಸಲಾಗುವುದಿಲ್ಲ.
2.ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.
3. ಮೂವತ್ತು ಜನರಿಗೆ ಮಾತ್ರ ಅವಕಾಶ.
4. ಶಿಬಿರಕ್ಕೆ ಆಯ್ಕೆಯಾದವರನ್ನು ಸಂಪರ್ಕಿಸಲಾಗುವುದು.
5. ಅರ್ಜಿ ತಲುಪಲು ಕೊನೆಯ ದಿನಾಂಕ: 07 ಜನವರಿ 2024

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop