ಪ್ರೀತಿಯ ಓದುಗರೇ,
ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ “ಬಿದಿರ ತಡಿಕೆ”, “ಮಳೆ ಪ್ರಬಂಧಗಳು”, “ಇರುವೆ ಮತ್ತು ಗೋಡೆ”, “ಬೆನ್ನೇರಿದ ಬಯಲು”, “ಪ್ರೇಮ ದೈವಿಕ ಪರಿಮಳ” ಮತ್ತು “Love is a Divine Fragrance” ಪುಸ್ತಕಗಳಿಗೆ ನೀವು ತೋರಿದ ಪ್ರೀತಿ ಮರೆಯಲಾಗದ್ದು. ಬಹಳಷ್ಟು ಪ್ರತಿಗಳು ರಾಜ್ಯದ ಪ್ರತಿಷ್ಠಿತ ಪುಸ್ತಕ ಮಳಿಗೆಯಾದ ಸಪ್ನಾದಲ್ಲಿಯು ಮಾರಾಟವಾಗಿವೆ. ನಿಜ ಹೇಳಬೇಕೆಂದರೆ ಪ್ರಕಾಶನದ ಮೂಲಕ ಹಣ ಕಳೆದುಕೊಂಡೆವು ಎಂದೇ ಎಲ್ಲರು ಲೋಕರೂಢಿಯಾಗಿ ಹೇಳುತ್ತಾರೆ, ಆದರೆ ನಮಗಂತೂ ಈ ಅನುಭವವಾಗಿಲ್ಲ! ತಕ್ಕಮಟ್ಟಿಗೆ ಹಾಕಿದ ಹಣದ ವಾಪಾಸಿನ ಜೊತೆಗೆ, ಅರ್ಧದಷ್ಟು ಲಾಭವಂತು ಆಗಿದೆ.
ಇದೇ ಹುಮ್ಮಸ್ಸಿನಿಂದಾಗಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕದ ಜೊತೆ ಮತ್ತೆ ಬಂದಿದ್ದೇವೆ. ಈ ಮಹತ್ವದ ಪುಸ್ತಕವನ್ನು ಖರೀದಿಸುವ ಮೂಲಕ ಅದೇ ರೀತಿಯ ಪ್ರೋತ್ಸಾಹವನ್ನು ಕೊಡುವಿರಿ ಎಂದು ನಂಬಿಕೊಂಡಿದ್ದೇವೆ. ಸಮಕಾಲೀನ ಹಿರಿಯ ಕವಿಗಳಲ್ಲಿ ಚನ್ನಪ್ಪ ಅಂಗಡಿ ಅವರು ಪ್ರಮುಖರು. ೨೦೨೪ನೇ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ ಈ ಸಂಕಲನದಲ್ಲಿ ಅನೇಕ ಮಹತ್ವದ, ನಾವೆಲ್ಲರೂ ಓದಲೇಬೇಕಾದ ಕವಿತೆಗಳಿವೆ. ಕಾವ್ಯ ಪಕ್ಷಪಾತಿಯಾದ ಯಾರಾದರೂ ಸರಿ ಈ ಸಂಕಲವನ್ನು ಓದಲೇಬೇಕು. ಕೆಲವು ಕವಿತೆಗಳಲ್ಲಿ ವಚನ ಕಾಲದ ಚಿತ್ರಣದ ಜೊತೆಗೆ ಇಲ್ಲಿನ ಕವಿತೆಗಳು ಸಮಕಾಲೀನ ಯುಗಕ್ಕೆ ಹರಿಯುವ ಪರಿ ಇದೆಯಲ್ಲ ಅದರ ಅನುಭವವನ್ನು ನಾವು ಕವಿತೆಗಳನ್ನು ಓದಿಯೇ ಪಡೆಯಬೇಕು. ಬಹಳ ಉತ್ತಮವಾದ ಕವಿತೆಗಳಿರುವ ಈ ಸಂಕಲವನ್ನು ನೀವು ಖರೀದಿಸಿ ಓದಬೇಕೆಂದು, ಯಾರಾದರೂ ಸರಿ ವಯಕ್ತಿಕವಾಗಿಯು ಶಿಫಾರಸು ಮಾಡುತ್ತಾರೆ.
ಪುಸ್ತಕದ ಬೆಲೆ 125 ರೂಪಾಯಿಗಳು. ಪುಸ್ತಕ ಬೇಕಾದವರು ಈ ನಂಬರಿಗೆ 9591367320 ವಾಟ್ಸಪ್ಪ್ ಮಾಡಿ. ಮುಂಗಡ ಬುಕಿಂಗ್ ಮಾಡುವವರಿಗೆ ಪೋಸ್ಟಲ್ ಚಾರ್ಜ್ ಉಚಿತ.
ಧನ್ಯವಾದಗಳು,
ಮಿಂಚುಳ್ಳಿ ಸಾಹಿತ್ಯ ಪತ್ರಿಕೆ
ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ