ಗುರುರಾಜ ಕುಲಕರ್ಣಿ ಅವರ “Codeಗನ ಕಥೆಗಳು” ಹಸ್ತ ಪ್ರತಿಗೆ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನ

ಛಂದ ಪುಸ್ತಕ ಪ್ರಕಾಶನ ನಡೆಸುವ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರರಾದ ಗುರುರಾಜ ಕುಲಕರ್ಣಿ ಅವರ “Codeಗನ ಕಥೆಗಳು” ಹಸ್ತಪ್ರತಿ ಭಾಜನವಾಗಿದೆ. ಈ ಪ್ರಶಸ್ತಿಯು ಸಂಕಲನ ಪ್ರಕಟಣೆಯ ಜೊತೆಗೆ ನಲವತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಕಲ್ಗುಡಿ ಅವರು ಬಹುಮಾನವನ್ನು ವಿತರಿಸಿದರು. ಇದರ ಜೊತೆಗೆ ಈ ಬಾರಿ ಆರು ಜನ ಕಥೆಗಾರರಿಗೆ ಮೆಚ್ಚುಗೆ ಬಹುಮಾನವನ್ನು ನೀಡಲಾಗಿದೆ. ಹಿರಿಯ ಸಾಹಿತಿಗಳಾದ ವಸುಮತಿ ಉಡುಪ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮೆಚ್ಚುಗೆಯ ಬಹುಮಾನ ಪಡೆದವರು:

  1. ದೀಪಾ ಹಿರೇಗುತ್ತಿ
  2.  ಮೋಹನ್ ಕುಮಾರ್ ಬಣಕಾರ
  3. ಸಣ್ಣಳ್ಳಿ ಹನುಮಂತ
  4. ಶೀಲಾ ಪೈ
  5. ಕುಸುಮಾ ಆಯರಹಳ್ಳಿ
  6. ಶ್ರೀಧರ ಹೆಗಡೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop