ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ (ನಿ) ಇವರ ಸಂಯುಕ್ತಾಶ್ರಯದಲ್ಲಿ ಕವಿ ದೇವೇಂದ್ರ ಕಟ್ಟಿಮನಿ ಬರೆದಿರುವ “ಅರಳಿ ನೆರಳು” ಕೃತಿ ಲೋಕಾರ್ಪಣೆ ಮತ್ತು “ಸಮ್ಯಕ್ ಜ್ಞಾನ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 22/2/2025 ರಂದು ಕಲಬುರ್ಗಿ ನಗರದ ಜಿಲ್ಲಾ ಪಂಚಾಯತ್ ಆವರಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದು, ಪೂಜ್ಯ ಭಂತೆ ಸಂಘಾನಂದ ಥೆರೋ ಅವರ ದಿವ್ಯ ಸಾನಿಧ್ಯದಲ್ಲಿ, ಶ್ರೀ ಡಿ.ಜಿ.ರಾಜಣ್ಣ ಎ.ಸಿ.ಪಿ. ಸಬ್ ಅರ್ಬನ್ ಕಲಬುರ್ಗಿ ಅವರು ಉದ್ಘಾಟಿಸಲಿದ್ದು, ಪ್ರೊ. ಅಪ್ಪೆಗೆರೆ ಸೋಮಶೇಖರ್, ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಇವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀ ವೆಂಕಟೇಶ್ ಬೇವಿನ ಬೆಂಚಿ, ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ಕಾರ್ಯಕ್ರಮ ನಿರ್ವಾಹಣಾಧಿಕಾರಿಗಳು ಆಕಾಶವಾಣಿ ರಾಯಚೂರು. ಶ್ರೀ ರಾವುತರಾವ್ ಬರೂರ್ ರಾಯಚೂರು, ಶ್ರೀ ಸತೀಶ್ ಬಿ ಹಳ್ಳಿ , ಪ್ರಕಾಶ್ ನರೋಣ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ. ಎಸ್. ಪಾಟೀಲ್ ನಿವೃತ್ತ ಪ್ರಾಂಶುಪಾಲರು ವಹಿಸಿಕೊಳ್ಳಲಿದ್ದಾರೆ. ಎಂದು ಅಭಿಜ್ಞಾನ ಪ್ರಕಾಶನದ ಅಧ್ಯಕ್ಷರಾದ ಶ್ರೀ ತಿಪ್ಪಣ್ಣ ಕಟ್ಟಿಮನಿಯವರು ತಿಳಿಸಿರುತ್ತಾರೆ.