ಪ್ರೀತಿಗೆ ಈ ಪದಗಳು ಅನಿವಾರ್ಯವೇ? – ಲಿಖಿತ್ ಹೊನ್ನಾಪುರ

ಪ್ರೀತಿ ಎಂದರೆ “ಐ ಲವ್ ಯು” ಎಂಬ ಮೂರು ಶಬ್ದಗಳಲ್ಲ. ಅದಕ್ಕಿಂತ ಅದೆಷ್ಟೋ ಹೆಚ್ಚು, ಆಳವಾದ ಭಾವನೆ. ಯಾರೋ ನಿಮಗಾಗಿ ಶತಮೈಲುಗಳ ದೂರ ಸಾಗಿಬಂದು ನಿಮ್ಮ ಮುಖದಲ್ಲಿ ಒಂದು ನಗುವನ್ನು ಮೂಡಿಸುವ ಪ್ರಯತ್ನ ಮಾಡುತ್ತಾರೆ – ಅದು ಪ್ರೀತಿಯೇ ಅಲ್ಲವೇ? ನಿಮ್ಮ ಗಂಟೆಗಳ ಸಂಕಟ, ಒತ್ತಡ, ದುಃಖಗಳೆಲ್ಲಾ ಒಂದು ಮಾತಿನಲ್ಲಿ ಅರಿತುಕೊಳ್ಳುವ ಆ ಸಹಜತೆ – ಅದು ಪ್ರೀತಿ ಅಲ್ಲವೇ? ನೀವು ತಿಂದಿರುವೆನೆಂದು ಕೇಳಿ, ನೀವೂ ತಿನ್ನಲು ಮರೆತಿರಬಹುದು ಎಂದು ಮನಪೂರ್ವಕವಾಗಿ ಕಾಳಜಿ ತೋರಿಸುವ ವ್ಯಕ್ತಿಯನ್ನೊಮ್ಮೆ ನೆನೆಸಿ. ಅವರು ಪ್ರೀತಿಯನ್ನು ಏನಾದರೂ ಹೇಳಬೇಕೆ? ಸಣ್ಣ ಪುಟ್ಟ ವಿಷಯಗಳಲ್ಲಿ ನಿಮ್ಮನ್ನ ಉಳಿಸಿ, ಪ್ರೀತಿಸಿ, ಬೆಳೆಸುವಂತ ವ್ಯಕ್ತಿಯ ಪ್ರತಿ ಕಣ್ಣೋಟದಲ್ಲೂ ಪ್ರೀತಿ ಇದೆ. ಮಳೆಗಾಲದ ಸಂಜೆ, ಒಲೆಯ ಹತ್ತಿರ ಕುಳಿತು ತಣ್ಣನೆಯ ಗಾಳಿ ತಟ್ಟಿದಾಗ, ನಿಮ್ಮ ನೆನಪು ಮಾಡಿಕೊಂಡು ಕೈಯಲ್ಲಿ ಕಾಫಿ ಪ್ಯಾಲೆಟ್ ಹಿಡಿದು ಕೂತು, ನಿಮ್ಮ ಅಭಾವವನ್ನು ಅನುಭವಿಸುವವರೆಗೂ ಪ್ರೀತಿಯ ಮಾತುಗಳೇನು? ನೀವು ಕೇಳಿದ ಒಂದೇ ಒಂದು ಬೇಡಿಕೆಗೆ “ಸರಿ” ಎಂದು ಉತ್ತರಿಸುತ್ತಿರುವ ಅವುಗಳ ಹಿಂದೆ ಎಷ್ಟು ಪ್ರೀತಿ ಇರಬಹುದು?

ಅವರು ನಿಮ್ಮ ಕೈ ಹಿಡಿದು ವಾಕಿಂಗ್ಗೆ ಕರೆದುಕೊಂಡು ಹೋದಾಗ, ನಿಮ್ಮ ನೆನಪಿನ ಮಳೆಗೆ ಒಟ್ಟಾಗಿ ನೆನೆದಾಗ, ತಾನೇನೂ ಹೇಳದೆ ನಿಮ್ಮ ಅಸ್ತಿತ್ವವನ್ನು ಸಂಭ್ರಮಿಸಿದಾಗ – ಅದು ಪ್ರೀತಿ. ಯಾವುದೋ ಅಮೂಲ್ಯ ನೆನಪು, ಕಣ್ಣಿನಲ್ಲಿ ನಿಲ್ಲುವ ಆ ತುಸು ಕಣ್ಣೀರು, ನಿಮ್ಮ ಸಂತೋಷದಲ್ಲಿ ಸಮಾಧಾನ ಕಾಣುವ ಮನಸ್ಸು – ಅದಕ್ಕಿಂತ ಪ್ರೀತಿಗೆ ಬೇಕಾದುದೇನು? ಹಾಗೆ ನೋಡಿದರೆ ಪ್ರೀತಿ ಎಂದರೆ ಕ್ಷಣ ಕ್ಷಣದಲ್ಲೂ ಅಡಗಿರುವ ಅನಾವರಣ.

ಒಂದು ಸರಳ ಮೆಸೇಜ್, “ಸೇಫ್ ಆಗಿ ಮನೆ ತಲುಪು” ಎಂಬ ವಾಕ್ಯದಲ್ಲೂ, ” ಏನಾದ್ರೂ ತಿನ್ನಮ್ಮ ಹಾಗೆ ಇರಬೇಡ ?” ಎಂದು ಕಾಳಜಿಯಿಂದ ಕೇಳುವ ಪ್ರಶ್ನೆಯಲ್ಲೂ, “ಸಮಯ ಸಿಕ್ಕಾಗ ನೀನು ವಿಶ್ರಾಂತಿ ತಗೋ” ಎಂದು ಕಾಡುವ ಕಾಳಜಿಯಲ್ಲೂ ಪ್ರೀತಿ ಮಿಂಚುತ್ತದೆ. ಹೃದಯ ತಲುಪುವ ಆ ಮುನಿಸು, ಮದುವೆಗೂ ಮುನ್ನವೇ ಬಣ್ಣ ಬಣ್ಣದ ಕನಸುಗಳನ್ನು ಒಟ್ಟಿಗೆ ಹೊಣೆಯಾಗಿ ಹೊರುತ್ತಿರುವ ಆ ಸ್ನೇಹ, ಎಲ್ಲವೂ ಪ್ರೀತಿಯ ರೂಪಗಳೇ. ನೀವು ಹಾರುವ ಹಕ್ಕಿ, ಅವರು ಗಾಳಿಯಂತೆ ನಿಮ್ಮೆಡೆಗೆ ಹರಿದಾಗ – ಅದು ಪ್ರೀತಿಯ ಎಳೆಯ ಸ್ಪರ್ಶ. ನೀವು ನೋವಿನಿಂದ ಕಣ್ಣೀರಿಟ್ಟಾಗ, ನಿಮ್ಮ ಪಕ್ಕದಲ್ಲಿ ಶಬ್ದವಿಲ್ಲದೇ ಕೂತು “ನಾನು ಇಲ್ಲೇ ಇದ್ದೇನೆ ” ಎನ್ನುವುದು ಕೂಡ ಎನ್ನುವುದು ಕೂಡ ಪ್ರೀತಿಯ ಪರಾಕಾಷ್ಠೆ.

ನಿಮ್ಮನ್ನು ಸಿಟ್ಟಿನಲ್ಲಿ ನೋಡಿ, “ಏನೂ ಇರಲ್ಲ, ನಾಳೆ ಎಲ್ಲ ಸರಿ ಆಗುತ್ತೆ” ಅಂದ್ರೂ, ನಿಮ್ಮ ನೋಡೋವವರೆಗೂ ಮನಸಿಗೆ ನಿದ್ರೆ ಬಾರದೆ ಕಾಡೋದು – ಅದೂ ಪ್ರೀತಿಯೇ. ಕೆಲಸದಲ್ಲಿ ಬ್ಯುಸಿ ಆದ್ರೂ, “ಹೇಗಿದ್ದಿಯಾ?” ಅಂತ ಒಂದು ಮೆಸೇಜ್ ಹಾಕೋದು, ಹುಡುಗಾಟದಲ್ಲಿ ಮುಚ್ಚುಮರೆ ಇಲ್ಲದೆ, ನಿಮ್ಮ ಪ್ರತಿ ಹೆಜ್ಜೆಗೂ “ನಾನು ಇದ್ದೀನಿ” ಅಂತ ನಿಲುಕೋದು – ಇದನ್ನೇ ಪ್ರೀತಿ ಅಂದ್ರು. ನೋವು ಬಂದಾಗ ಕೈಹಿಡಿಯೋದು, ಸಂತೋಷದಲ್ಲಿ ನಿಮ್ಮ ಗೆಲುವಿಗೆ ಕುಣಿಯೋದು ಹಠದಿಂದ ಕೋಪಗೊಂಡಾಗ “ಇದೂ ಸರಿಯುತ್ತೆ” ಅಂತ ತಾಳ್ಮೆಯಿಂದ ನೋಡೋದು – ಪ್ರೀತಿಯ ನಿಜ ಸ್ವರೂಪ.

ಬೇಸರ ಆದಾಗ “ಚಲೋ, ಬಂದು ಏನಾದ್ರೂ ತಿನ್ನೋಣ” ಅಂದ್ರೂ, ಬಿಸಿಲಿನಲ್ಲಿ ನಿಮಗಾಗಿ ತಂಪಾದ ನೀರು ಕೊಡೋದು, ಚಳಿಯಲ್ಲಿ “ಸ್ವೇಟರ್ ಹಾಕೋ” ಅಂತ ಕಳವಳ ಪಡುವುದು – ಪ್ರೀತಿಯೇ ಅಲ್ಲವೆ? ನೀವು ಒಂದೇ ಒಂದು ಬಾರಿ ಹೊಟ್ಟೆನೋವು ಅಂದ್ರೆ, “ಏನೂ ಇಲ್ಲ, ನೀವ್ ಚಿಂತೆ ಮಾಡ್ಬೇಡಿ” ಅಂತ ಹೇಳುತ್ತಾ ಮನಸಾರ ಕಳವಳ ಪಡುವ ಆ ವ್ಯಕ್ತಿಯ ಪ್ರೀತಿ ಅಳೆಯಲು ಸಾಧ್ಯವೇ? ಕೆಲವು ಸಲ ನಾವು ಅದನ್ನ ಅರ್ಥ ಮಾಡಿಕೊಳ್ಳಲಾರೆವು. “ಐ ಲವ್ ಯು” ಅಂತ ಹೇಳದೆ ಇರಬಹುದು, ಆದರೆ ಅವರ ಕಣ್ಣೋಟ, ಮಾತು, ವರ್ತನೆ – ಎಲ್ಲವೂ ಪ್ರೀತಿಯ ಪ್ರತಿಬಿಂಬ. ಪ್ರೀತಿ ಎಂದರೆ ಬೆನ್ನು ತಟ್ಟಿದರೆ ಮಾತ್ರ ತೋರಬಹುದೇ? ಪ್ರೀತಿ ಎಂದರೆ “ನಾನು ನಿನ್ನ ಪ್ರೀತಿಸುತ್ತೇನೆ” ಎಂದು ಹೇಳಿದರೆ ಮಾತ್ರ ತಿಳಿಯುವುದಾ?

ಸತ್ತೊಡನೆ ಹೂವಿನ ಗುಚ್ಛವಿಟ್ಟು ಗೌರವಿಸುವುದರ ಬದಲಿಗೆ,  ನೆನಪಿಟ್ಟುಕೊಳ್ಳುವುದು ಪ್ರೀತಿಯ ಪರಾಕಾಷ್ಠೆ. ಬೇಸಿಗೆ ತಾಪದಲ್ಲಿ ಬಿಸಿಲಿನಲ್ಲಿ ಬಂದವರಿಗೆ ಒಂದು ಲೋಟ ನೀರು ಕೊಡೋದು ಪ್ರೀತಿ. ಬೀದಿಯಲ್ಲಿ ಸಾಗುವ ಬಡವನಿಗೆ ಹೊಟ್ಟೆತುಂಬಾ ಊಟ ನೀಡೋದು ಪ್ರೀತಿ. ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲಿ ಮಲಗಿದ ನಿದ್ರೆರಹಿತ ಕಣ್ಣುಗಳೂ ಪ್ರೀತಿಯೇ. ನೋವಿನಲ್ಲಿ ನಿಮ್ಮ ಕೈ ಹಿಡಿಯುವ ಆತ್ಮೀಯತೆ, ಸಂತೋಷದಲ್ಲಿ ನಿಮ್ಮ ಗೆಲುವಿಗೆ ತೋರುವ ನಿಷ್ಠೆ, ಅನಿರ್ವಚನೀಯ ಕ್ಷಣಗಳಲ್ಲಿ, “ನಾನು ಇದ್ದೀನಿ” ಎಂದು ತಲುಪುವ ಆ ಶಾಂತಿ – ಎಲ್ಲವೂ ಪ್ರೀತಿಯೇ.

ಹೌದು, “ಐ ಲವ್ ಯು” ಎಂಬ ಮಾತು ಪ್ರೀತಿಯ ಘೋಷಣೆಯಾಗಿ ಸದ್ದು ಮಾಡಬಹುದು. ಆದರೆ, ಅನೇಕ ಸಲ, ಕಣ್ಣಲ್ಲಿ ಮೂಡುವ ಸ್ಪರ್ಶ, ಹೃದಯದಲ್ಲಿ ಏಳುವ ಛಲ, ಧೈರ್ಯ, ಬಾಳಿನಲ್ಲಿ ಬರುವ ಶಾಂತಿ – ಎಲ್ಲವೂ ಪ್ರೀತಿಯೇ. ಅದು ಹೇಳಬೇಕಾಗಿಲ್ಲ, ಅದು ಅರ್ಥವಾಗಬೇಕು. ತಂಗಾಳಿ ಹೊತ್ತೊಯ್ಯುವ ನೆನಪು, ಬೆಚ್ಚಗಿನ ಕಾಫಿಯ ಘಮ, ಶಬ್ದರಹಿತ ಚಂದ್ರನ ಬೆಳಕು – ಎಲ್ಲವೂ ನಿನ್ನ ಪ್ರೀತಿಯ ನೆನಪಿನಲ್ಲಿ ಮಿಂಚುತ್ತದೆ. ಹೀಗಾಗಿ, ಪ್ರೀತಿಯನ್ನೂ, ಆ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯನ್ನೂ, ಅರ್ಥೈಸಿಕೊಳ್ಳಿ. ಆಗ “ಐ ಲವ್ ಯು” ಎಂಬ ಮೂರು ಶಬ್ದಗಳಿಗಿಂತ ಪ್ರೀತಿ ದೊಡ್ಡದಾಗುತ್ತದೆ.

ಚಂದಾದಾರರಾಗಿ
ವಿಭಾಗ
4 ಪ್ರತಿಕ್ರಿಯೆಗಳು
Inline Feedbacks
View all comments
1win
25 January 2026 10:55
24bettingapp
6 January 2026 04:10

Gave the 24bettingapp a shot. Has a decent selection of bets available, I liked it. Give 24bettingapp a look see.

tai99win
31 December 2025 21:36

Alright folks, just had a spin on tai99win. Not bad, not bad at all! The games are slick and the site’s easy to navigate. Definitely worth checking out for a bit of casual fun!

rbd777
21 December 2025 05:09

RBD777 is a solid choice. I like their selection of games and the overall experience has been good. Visit rbd777 and see what you think!

0
    0
    Your Cart
    Your cart is emptyReturn to Shop