ಈ ಹೊತ್ತಿಗೆ ಪ್ರಶಸ್ತಿ ಪ್ರದಾನ ಸಮಾರಂಭ: ಮಾರ್ಚ್ 09, 2025

ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ.

ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಈ ಹೊತ್ತಿಗೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮವಿದೆ. ಕಾರ್ಯಕ್ರಮದಲ್ಲಿ ೨೦೨೫ನೇ ಸಾಲಿನ ಈ ಹೊತ್ತಿಗೆ ಕಥಾಪ್ರಶಸ್ತಿ ಹಾಗೂ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ಪ್ರದಾನವಿದ್ದು, ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ. ಎಲ್ ಎನ್ ಮುಕುಂದರಾಜ್ ನೆರವೇರಿಸಲಿದ್ದಾರೆ. ಈ ವರ್ಷದ ಕಾವ್ಯ ಪ್ರಶಸ್ತಿ ವಿಜೇತರು, ಡಾ. ಲಕ್ಷ್ಮಣ ವಿ ಎ ಹಾಗೂ ಕಥಾಪ್ರಶಸ್ತಿ ವಿಜೇತರು ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರಾಗಿದ್ದು, ಇದೇ ಸಮಯದಲ್ಲಿ ಪ್ರಶಸ್ತಿ ವಿಜೇತ ಕೃತಿಗಳ ಲೋಕಾರ್ಪಣೆಯಾಗಲಿದೆ. ಕೃತಿ ಪರಿಚಯವನ್ನು ಆನಂದ ಕುಂಚನೂರ್ ಮತ್ತು ಸಂಗೀತಾ ಚಚಡಿ ಮಾಡಿಕೊಡಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಒಂದು ಗೋಷ್ಠಿ ಹಾಗೂ ಒಂದು ಸಂವಾದವಿದೆ. ‘ಅಕ್ಷರ ಜಾನಪದ’ ಎಂಬ ಗೋಷ್ಠಿಯಲ್ಲಿ, ಖ್ಯಾತ ಗಾಯಕರಾದ ಜನಪದಶ್ರೀ. ಅಪ್ಪಗೆರೆ ತಿಮ್ಮರಾಜು ಹಾಗೂ ಜಾನಪದ ತಜ್ಞೆ, ಕವಿ ರೇಣುಕಾ ಕೋಡಗುಂಟಿ ಅವರು ಮಾತನಾಡಲಿದ್ದಾರೆ, ಈ ಗೋಷ್ಠಿಯ ಅಧ್ಯಕ್ಷ್ಯತೆಯನ್ನು ಖ್ಯಾತ ಕತೆಗಾರ್ತಿ, ಕಾದಂಬರಿಗಾರ್ತಿ ಜಯಶ್ರೀ ದೇಶಪಾಂಡೆ ನಿರ್ವಹಿಸಲಿದ್ದಾರೆ.

ಗೋಷ್ಠಿಯ ನಂತರ ‘AI ಮತ್ತು ಸಾಹಿತ್ಯ’ ವಿಷಯದ ಮೇಲೆ ಸಂವಾದವಿದ್ದು, ತಂತ್ರಜ್ಞಾನ ಪರಿಣಿತರು, ಕತೆಗಾರರೂ ಆದ ಮಧುಸೂದನ ವೈ ಎನ್ ಹಾಗೂ ಪತ್ರಕರ್ತಾದ ಶ್ರೀದೇವಿ ಡಿ ಎನ್ (ಶ್ರೀ ಡಿ ಎನ್) ಅವರು ಸಂವಾದ ನಡೆಸಲಿದ್ದಾರೆ.

ಈ ವರ್ಷದ ಪ್ರಶಸ್ತಿಗಳ ತೀರ್ಪುಗರಾರಾಗಿರುವ ಖ್ಯಾತ ಕತೆಗಾರ, ಪತ್ರಕರ್ತರಾದ ರಘುನಾಥ ಚ ಹ ಮತ್ತು ಖ್ಯಾತ ಕವಿ, ದೂರದರ್ಶನ ಚಂದನದ ಮುಖ್ಯಸ್ಥರಾದ ಆರತಿ ಎಚ್ ಎನ್ ಅವರು ಹಾಗೂ ಕತೆಗಾರ, ಚಲನಚಿತ್ರ ನಿರ್ದೇಶಕರಾದ ಪ್ರವೀಣ್ ಕುಮಾರ್ ಜಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಈ ಹೊತ್ತಿಗೆಯ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಇಂದಿರಾ ಶರಣ್ ಕಾರ್ಯಕ್ರಮದ ನಿರೂಪಣೆ, ಸರ್ವಮಂಗಳಾ ಮೋಹನ್ ಅವರು ಅತಿಥಿಗಳ ಪರಿಚಯ ಮಾಡಲಿದ್ದಾರೆ.

ದಿನಾಂಕ: ೦೯ ಮಾರ್ಚ್ ೨೦೨೫, ಭಾನುವಾರ
ಸಮಯ: ಬೆಳಗ್ಗೆ ೧೦.೦೦ರಿಂದ ಮದ್ಯಾಹ್ನ ೦೧.೩೦ರವರೆಗೆ  
ಸ್ಥಳ: ಕಪ್ಪಣ್ಣ ಅಂಗಳ, ೧೪೮/೧, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೧ನೇ ಹಂತ, ಬೆಂಗಳೂರು.

 

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop