ಅರುಣಾ ರಾವ್ ಬೆಂಗಳೂರು ಅವರು ಬರೆದ ಮಕ್ಕಳ ಕವಿತೆ “ಅಪ್ಪಾರಳ್ಳಿ ತಿಪ್ಪಣ್ಣ”

 

ಅಪ್ಪಾರಳ್ಳಿ ತಿಪ್ಪಣ್ಣ
ಕಸವನು ಬುಟ್ಟಿಗೆ ಹಾಕಣ್ಣ
ಕಸವನು ಎಲ್ಲೆಂದರಲ್ಲಿ ಎಸೆದರೆ
ಕಾಯಿಲೆ ಬರುವುದು ಕೇಳಣ್ಣ

ಅಪ್ಪಾರಳ್ಳಿ ತಿಪ್ಪಣ್ಣ
ಸೈಕಲ್‌ ನೀನು ಏರಣ್ಣ
ಪೆಟ್ರೋಲ್‌ ವಾಹನ ಬಳಸಿದರೆ
ವಾಯುವು ಮಲಿನ ತಿಳಿಯಣ್ಣ|

ಅಪ್ಪಾರಳ್ಳಿ ತಿಪ್ಪಣ್ಣ
ಮಳೆ ನೀರನ್ನು ಹಿಡಿಯಣ್ಣ
ನೀರು ಇರದಿದ್ದರೆ ಅಯ್ಯೊ
ಧರೆಯದು ಉರಿವುದು ನೋಡಣ್ಣ|

ಅಪ್ಪಾರಳ್ಳಿ ತಿಪ್ಪಣ್ಣ
ಶೌಚಾಲಯವ ಬಳಸಣ್ಣ
ಬಯಲಲಿ ಶೌಚ ಮಾಡಿದರೆ
ರೋಗ ಹರಡುವುದು ಕೇಳಣ್ಣ|

ಅಪ್ಪಾರಳ್ಳಿ ತಿಪ್ಪಣ್ಣ
ಶಾಲೆಗೆ ತಪ್ಪದೆ ಹೋಗಣ್ಣ
ಓದು ಬರಹ ಲೆಕ್ಕವ ಕಲಿತರೆ
ಬಾಳು ಬೆಳಗುವುದು ಕೇಳಣ್ಣ

ಅಪ್ಪಾರಳ್ಳಿ ತಿಪ್ಪಣ್ಣ
ನೈತಿಕ ಮೌಲ್ಯವ ಕಲಿಯಣ್ಣ
ಮಾನವೀಯತೆಯನ್ನು ಮರೆತರೆ
ವಿದ್ಯೆಯು ವ್ಯರ್ಥ ಕೇಳಣ್ಣ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop