ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ “ನಲುಗಿದ ಹೆಣ್ಣಿನ ಅಂತರಾಳ”

ಓ.. ದೇವಾ..
ಎಲ್ಲವನ್ನು ನನ್ನಿಂದ
ಕಸಿದುಕೊಂಡ ಮೇಲೆ
ನನಗಾಗಿ ಉಳಿಸಿದ್ದಾದರೂ ಏನು..?
ಬರೀ ಶೂನ್ಯ
ನೋವುಗಳ ಹೊರತೂ

ಅಷ್ಟು ಅವಸರವೇನಿತ್ತು..?
ಆ ಜವರಾಯನಿಗೆ
ಹೆತ್ತವರ ಮೇಲೆ ಕಣ್ಣು ತಾಕಿಸಿ
ಅನಾಥಳೆಂಬ ಹೊದಿಕೆ ಹೊದಿಸಿ
ಪ್ರೀತಿ,ವಾತ್ಸಲ್ಯಗಳಿಂದ
ದೂರವಾಗಿಸಿಬಿಟ್ಟ

ಬಯಸಿದ ಬಯಕೆಗಳಿಗೆ
ಇಲ್ಲಿ ಬೆಲೆಯೇ ಇಲ್ಲ
ಆಸೆಗಳನ್ನು ಮೂಟೆ ಕಟ್ಟಿ
ಅಟ್ಟಕ್ಕೇರಿಸಿ ವರುಷಗಳೇ ಉರುಳಿವೆ

ಒಬ್ಬಬ್ಬರಾಗಿ ಮೆಲ್ಲಗೆ
ಸರಿದು ದೂರಾಗುತಿಹರು
ನೆರೆಹೊರೆಯವರು ಮಾತಿಗಷ್ಟೇ ಸೀಮಿತ
ಬಂಧುಗಳನ್ನಂತೊ ಕೇಳಲೇಬೇಡಿ
ವ್ಯಾಪ್ತಿ ಪ್ರದೇಶದಿಂದ ಬಹುದೂರ
ನೊಂದು ಬೆಂದ ಜೀವಕೆ
ಸಾಂತ್ವನದ ನುಡಿಗಳಿಗೂ ಬರ

ಸಿರಿತನವೇನು ಬೇಡ ದೇವಾ..
ಅತ್ತಾಗ ಕಣ್ಣೊರೆಸುವ
ಸಿರಿವಂತಿಕೆಯ ಕೈಗಳೇ ಸಾಕು
ಆಂತರ್ಯದ ಬೇಗುದಿಯ ನುಡಿಗಳಿಗೆ
ಕಿವಿಯಾಗುವವರು ಬೇಕು
ಜೊತೆಗೆ ದನಿಯಾಗುವವರಿದ್ದರೆ ಸಾಕು
ಈ ದೀನಳ ಬದುಕು ಹಸನಾದೀತು…

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
Sushma v h
8 June 2024 18:41

ಸೂಪರ್ ಹಿಟ್ ಕವನ

0
    0
    Your Cart
    Your cart is emptyReturn to Shop