ಗಂಗಾ ಚಕ್ರಸಾಲಿ ಅವರು ಬರೆದ ಕವಿತೆ ‘ಇನಿಯನೆ..’

ಮಾತಿನ ಮನೆ ಕಟ್ಟದೇ
ಕಿರುಬೆರಳ ಸೋಕಿಸದೇ
ಅರಿಯದಂತೆ ಎದುರಿಗೆ ಕುಳಿತುಬಿಡು
ನಿನ್ನಲ್ಲೇ ಮಾತನಾಡುವೇ ಮೌನವಾಗಿ..

ದುಷ್ಯಂತನಿಗಾಗಿ ಶಕುಂತಲೆಯು
ಮನದ ಚಿತ್ತವನ್ನಲ್ಲಿಟ್ಟಂತೆ
ಎನ್ನ ಮನವೆಲ್ಲ ನಿನ್ನಲ್ಲಿರುವಾಗ
ಕೇಳದೇ ಸುಳಿದುಬಿಡು ಎದುರಾಗಿ..

ನೀನೇನೂ ರಾಜಕುಮಾರನಾಗಬೇಕಿಲ್ಲ
ಕುದುರೆಯನೇರಿ ಬರಬೇಕಾಗಿಲ್ಲ
ಅಂತಸ್ತಿನ ಹಂಬಲವೆಲ್ಲಿದೇ ಪ್ರೀತಿಯಲ್ಲಿ
ಕರೆಯದೇ ಬಂದುಬಿಡು ಮೆಲುವಾಗಿ…

ಕಾಣಿಕೆಯಿಂದ ಮೆಚ್ಚಿಸಬೇಕಿಲ್ಲ
ಹೊಗಳಿಕೆಯ ಮಾಲೆ ಮುಡಿಸಬೇಕಿಲ್ಲ
ತಿಳಿಯದಂತೆ ಆವರಿಸುತ್ತಿರು
ಗಿಡಕ್ಕೆ ಬಳ್ಳಿಯಂತಾಗಿ….

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop