ಉಸಿರು ಗಟ್ಟುವ ವಾತಾವರಣದಲ್ಲಿ
ಗಂಟಲು ಬಿಗಿ ಹಿಡಿದುಕೊಂಡು
ಉಗುಳು ನುಂಗುತ್ತಿದ್ದೇನೆ
ಬಂಧನವನ್ನು ದಾಟಿ ಬರಲು
ಮನದ ಕನಸುಗಳ ಜೊತೆ
ಆಗೊಮ್ಮೆ ಈಗೊಮ್ಮೆ ಹೊಗಳುವರು
ಸೃಷ್ಟಿಗೆ ಕಾರಣ, ನೀನಿಲ್ಲದೆ ಏನಿಲ್ಲವೆಂದು
ಮತ್ತ ಅದೇ ರಾಗ, ನಿರ್ಬಂಧ
ಮಾತಿಗೆ ಸೀಮಿತ ಮಾಡಿ, ಮೂಲೆಗೆ
ನೂಕು ಬಿಟ್ಟರು ಆಸೆಗಳು ಕೊಂದು
ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಅಸ್ತಿತ್ವಕ್ಕಾಗಿ
ಹಗಲಿರುಳು ದುಡಿಯುತ್ತಿದ್ದಾರೆ, ಆದರೆ! ಅವರು,,,
ಸದಾ ಸಮಾಜದ ಎದುರು ಸಾಮರ್ಥ್ಯದ
ರುಜು ಮಾಡಬೇಕು, ತಾನು ಸಮರ್ಥಳೆಂದು
ಹೃದಯ ಹಿನ ಸಮಾಜದೆದುರು
ಗರ್ಭದಿಂದ ಹುಟ್ಟಿರುವರು ಎಲ್ಲರೂ
ಗರ್ಭಗುಡಿಗೆ ನಿಷೇಧ ಹೇರಿದ್ದಾರೆ
ನೆಲ-ಜಲ ಎಲ್ಲವೂ ನೀನೇ ಎಂದು
ಧರ್ಮಗಳ ಬೇಲಿಯಲ್ಲಿ ಬಂಧಿಸಿ
ಸಮಾನತೆಗೆ ಬೆಂಕಿ ಹಚ್ಚಿದ್ದಾರೆ.
ಯಾರು ನಾನು, ಹೌದು! ಯಾರು? ನೆಲೆಯಲ್ಲಿ.
ಕಾಲಿಗೆ ಚಕ್ರ ಕಟ್ಟಿದವರಂತೆ ತಿರುಗುತ್ತಿದೇನೆ
ತಂದೆ,ಗಂಡ,ಮಗನ ಅಡಿಯಲ್ಲಿ
ತನ್ನ, ತನವನ್ನು ಮರೆತು ಬದಕುತಿದೇನೆ
ಎಲ್ಲವೂ ಗೊತ್ತಿದ್ದದರು, ಗಂಟಲಲ್ಲಿ ಧ್ವನಿ ಬಿಗಿ ಹಿಡಿದು